Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಫ್ರೀ ಗ್ಯಾರಂಟಿಗಳನ್ನು ತೆಗೆಯಿರಿ: ಸಿ.ಎಂ. ಇಬ್ರಾಹಿಂ

ಸುದ್ದಿಮೂಲ ವಾರ್ತೆ

ಬೆಂಗಳೂರು, ಆ.2: ಪರಿಶಿಷ್ಟರ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ವಿಚಾರದಲ್ಲಿ ಆ ಸಮಾಜದ ಜನ ಮತ್ತು ನಾಯಕರು ವಿಚಾರ ಮಾಡಬೇಕು. ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ, ಸರ್ಕಾರ ಆಡಿದ್ದೆ ಆಟವಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಿಡಿಕಾರಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಹೇಳಲು ಹೋದರೆ ಅಧಿಕಾರ ಸಿಕ್ಕಿಲ್ಲ ಅಂತ ಈ ವಿಷಯ ಹೇಳುತ್ತಿದ್ದಾರೆ ಎನ್ನುತ್ತಾರೆ. ಆದರೂ ವಿರೋಧ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಯಾವ ರೀತಿ ಎಸ್‌, ಎಸ್‌ಟಿ ಹಣ 11 ಸಾವಿರ ಕೋಟಿ ರೂ. ಬಳಸಿಕೊಳ್ಳುತ್ತಿರಾ, ಕಾನೂನು ಏನಾದ್ರೂ ಬದಲಾವಣೆ ಮಾಡುತ್ತಿರಾ? ಈ ಹಣ ಬೇರೆ ಯಾವುದಕ್ಕೂ ಬಳಸಿಕೊಳ್ಳುವ ಅವಕಾಶ ಇಲ್ಲ ಎಂದು ಹೇಳಿದರು.

ಹಳ್ಳಿಗಳಲ್ಲಿ ಕಳಪೆ ಅಕ್ಕಿ ಕೊಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 5 ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆಯಾ ಎಂದು ತಿಳಿಯಲು ಕಮಿಟಿ ಮಾಡಿ, ಅಭಿವೃದ್ಧಿ ಕೆಲಸ ಇಲ್ಲ ಅಂತ ನೀವೇ ಹೇಳುತ್ತಿದ್ದಿರಾ, ಯಾವ ರೀತಿ ರಸ್ತೆ ಸೇರಿ ಅಭಿವೃದ್ಧಿ ಕೆಲಸ ಮಾಡುತ್ತಿರಾ ಎಂದು ಹೇಳಿ. ನೀವು 5 ವರ್ಷ ಅಧಿಕಾರದಲ್ಲಿ ಇರುತ್ತಿರಾ, ಹಾಗಾಗಿ ಸರ್ವ ಪಕ್ಷದ ಸಭೆ ಕರೆಯಿರಿ ಎಂದು ಒತ್ತಾಯಿಸಿದರು.

ನೀವು ಮನೆಗಳಲ್ಲಿ ಜಗಳಕ್ಕೆ ಕಾರಣ ಹಾಕಿದ್ದೀರಾ, ನೀವು ಕೊಡುವ 2 ಸಾವಿರಕ್ಕೆ ಮನೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಿರಾ. ನಾನು ಈಗಲೂ ಹೇಳುತ್ತೇನೆ ಫ್ರೀ ಗ್ಯಾರಂಟಿ ತೆಗೆಯಿರಿ. ರಾಜ್ಯ ಅಭಿವೃದ್ಧಿ ಬಗ್ಗೆ ಕೆಲಸ ಮಾಡಿ, ಸಿದ್ದರಾಮಯ್ಯ ಸಕ್ಸಸ್ ಆಗಬೇಕು ಎಂಬುದು ನಮಗೂ ಇದೆ ಎಂದು ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಮತ್ತು ಗ್ಯಾರಂಟಿ ಮೂಲಕ ಲೋಕಸಭೆ ಚುನಾವಣೆಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ ಅವರು, ಕಾಂಗ್ರೆಸ್ ನವರು ಯಾವ ಹೆಸರಿನಲ್ಲಿ ಹೋಗ್ತಾರೆ ಎಂಬ ಚಿಂತೆ ಇಲ್ಲ ಎಂದರು.

ಐದು ಜಿಲ್ಲೆಗಳಲ್ಲಿ ಪ್ರವಾಸ:

ಬಳ್ಳಾರಿ, ಕೊಪ್ಪಳ ಸೇರಿ ಐದು ಜಿಲ್ಲೆಗಳ ಮುಖಂಡರ ಸಭೆ ಮಾಡುತ್ತೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ವಾಪಸ್ ನಂತರ ಎಚ್.ಡಿ. ದೇವೇಗೌಡರ ಅನುಮತಿ ಪಡೆದು, ಆ ವಿಭಾಗಕ್ಕೆ ತಾತ್ಕಾಲಿಕ ಕಾರ್ಯಾಧ್ಯಕ್ಷರ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

ಜನರ ಮನ್ನಣೆಗಳಿಸುವ ಕೆಲಸ ಮಾಡುತ್ತೇವೆ. ಯಾರ ಜೊತೆ ಹೊಂದಾಣಿಕೆ ಇಲ್ಲದೇ ಲೋಕಸಭಾ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ರಾಜ್ಯ ಮಟ್ಟದಲ್ಲಿ ಒಂದು ಕಮಿಟಿ ಮಾಡುತ್ತೇವೆ. ವಿಭಾಗವಾರು ಕಮಿಟಿ ಕೂಡ ಸಭೆ ಮಾಡುತ್ತೇವೆ ಎಂದು ಹೇಳಿದರು.

ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತೇವೆ. ನಾನು ಹೈದರಾಬಾದ್ ಕರ್ನಾಟಕ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಅಲ್ಲಿ ಒಳ್ಳೆಯ ವೋಟ್ ಪರ್ಸೆಂಟೆಜ್ ಬಂದಿದೆ.‌ ಬಹಳ ಮುಖ್ಯವಾಗಿ ಮುಸ್ಲಿಂ ಸಮುದಾಯದ ಜತೆ ಸಭೆ ಮಾಡಿದ್ದೇನೆ. ಕಾಂಗ್ರೆಸ್ ನವರು ಹೆಚ್ಚು ಮುಸ್ಲಿಂ ಸಮುದಾಯದ ವೋಟ್ ಪಡೆದ್ರು. ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದ್ರಿ ಎಲ್ಲಿ ಹೋಯ್ತು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಏನು ಆಯ್ತು. ಮರು ತನಿಖೆ ಮಾಡೋದು, ಅಲ್ಲಿ ನಡೆದಿದ್ದು ಡ್ರಗ್ಸ್ ಮಾಫಿಯಾ ಗಲಾಟೆ. ಗೃಹ ಸಚಿವರೇ ನ್ಯಾಯಾಂಗ ತನಿಖೆಗೆ ಕೊಡಿ ಹೆದರಬೇಡಿ. ಬಿಜೆಪಿಯವರು ಹೇಳುತ್ತಾರೆ ಅಲ್ಪಸಂಖ್ಯಾತ ಒಲೈಕೆ ಮಾಡುತ್ತಿದ್ದಾರೆ ಎಂದು. ಯಾಕಪ್ಪ ಹೇಳುತ್ತಿರಾ ನಮಗೆ ಏನೂ ಕೊಟ್ಟಿದ್ದಾರೆ. ಕೇವಲ ಮಾತಿನಲ್ಲಿ ಹೇಳಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ