Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಸಬ್ಸಿಡಿಗಳು ಕುರಿತು ಸಂಶೋಧನೆ:  ಶಿಲ್ಪಾ ಶ್ರೀ.ಆರ್ ಅವರಿಗೆ ಪಿ.ಎಚ್.ಡಿ ಪ್ರಧಾನ  

ಸುದ್ದಿಮೂಲ ವಾರ್ತೆ

ಜೂ,20: ಕರ್ನಾಟಕದ ವಲಯದಲ್ಲಿ ರೈತರಗೆ ಸಿಗುತ್ತಿರುವ ಕೃಷಿ ಸಬ್ಸಿಡಿಗಳು ಕುರಿತು ಮತ್ತು ರೈತರು ಸಬ್ಸಿಡಿಗಳು ಪಡೆಯುವಾಗ ಎದುರಿಸುತ್ತಿರುವ  ಸಮಸ್ಯೆಗಳ ಕುರಿತು ಸಂಶೋಧನೆ ಮಾಡಿದಕ್ಕೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಶಿಲ್ಪಾ ಶ್ರೀ.ಆರ್ ಅವರಿಗೆ ಪಿ.ಎಚ್.ಡಿ ನೀಡಿದೆ.

ಬಳ್ಳಾರಿ ನಗರದ ಪ್ರಾಥಮಿಕ ಶಾಲಾ ಶಿಕ್ಷಕ ತಂದೆ ಎಲ್. ರಾಮನಾಯ್ಕ್ ಹಾಗೂ ತಾಯಿ ಲಕ್ಷ್ಮೀ ದಂಪತಿಯ ಪುತ್ರಿಡಾ .ಶಿಲ್ಪಾ ಶ್ರೀ. ಆರ್ ಆಗಿದ್ದಾರೆ.

ಬಳ್ಳಾರಿ ನಗರದ ಬೆಳಗಲ್ ಕ್ರಾಸ್ ಹತ್ತಿರ ರಾಮಾಂಜಿನೇಯ ದೇವಸ್ಥಾನದ ಹಿಂದೆ ಇರುವ ನಂದಿಶ್ರೀ ಕ್ಲಿನಿಕ್ ಬಿಲ್ಡಿಂಗ್‌ ನಲ್ಲಿಯ ನಿವಾಸಿಯಾಗಿದ್ದಾರೆ.

ವಿಜಯನಗರ ಶ್ರೀೃಷ್ಣದೇವರಾಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮೆದಾವಿನಿ ಎಸ್.ಕಟ್ಟಿ ಅವರು ಮಾರ್ಗದರ್ಶಕರಾಗಿದ್ದಾರೆ.

ಹಾಗೇಯೆ ವಿಶ್ವವಿದ್ಯಾಲಯ ಡಾ.ಸಂತೋಷ ಜಿ.ಕೆ, ಡಾ.ಪಿ.ಎಸ್ ಶಶಿಧರ್, ಮರ್ಚೇಡ್ ಮಲ್ಲಿಕಾರ್ಜುನ, ಪ್ರೊ.ಜಗದೀಶ್, ಪ್ರೊ.ತಳಸಿಮಾಲಾ, ಡಾ.ವೈದ್ಯ, ಡಾ.ಸುಷ್ಮ ಜೋಗನ್  ಈ ಮಹಾಪ್ರಬಂಧದ ಸಂಶೋಧನೆ ಮಾಡಲು ಸಹಕಾರ, ಸಲಹೆ ಸೂಚನೆ ನೀಡಿದ್ದಾರೆ. ತಂದೆ, ತಾಯಿ ಮತ್ತು ಕುಟುಂಬದ ಸದಸ್ಯ ಅವರಿಗೆ ಡಾ.ಶಿಲ್ಪಾ ಶ್ರೀ. ಆರ್  ಧನ್ಯವಾದಗಳನ್ನು ತಿಳಿಸಿದರು.‌

ಕೃಷಿ ಸಬ್ಸಿಡಿಗಳ ಕುರಿತು ಪಿ.ಎಚ್.ಡಿ ಮಹಾಪ್ರಬಂಧ :

ಈ ಸಮಯದಲ್ಲಿ ಮಾತನಾಡಿದ ಡಾ. ಶಿಲ್ಪಾ ಶ್ರೀ.ಆರ್ ಅವರು ಪ್ರಬಂಧವು ಮುಖ್ಯವಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಮೇಧಾವಿನಿ ಕಟ್ಟಿ ಅವರ ಮಾರ್ಗದರ್ಶನದಲ್ಲಿ " ಎನ್ ಎಕನಾಮಿಕ್ ಅನಾಲಿಸಿಸ್ ಆಪ್ ಅಗ್ರಿಕಲ್ಚರಲ್ ಸಬ್ಸಿಡೀಸ್ ಇನ್ ಕರ್ನಾಟಕ ವಿಥ್ ಸ್ಪೆಷಿಯಲ್

ರೆಫೆರೆನ್ಸ್ ಟು ಹೈದ್ರಾಬಾದ್ ಕರ್ನಾಟಕ ರೀಜನ್" ಮಹಾಪ್ರಬಂಧ ಮಂಡಣೆ ಮಾಡಿದ್ದಾರೆ.

ಕರ್ನಾಟಕ ವಲಯದಲ್ಲಿ ರೈತರಿಗೆ ಸಿಗುತ್ತಿರುವ ಕೃಷಿ ಸಬ್ಸಿಡಿಯನ್ನು ಕುರಿತು ಮತ್ತು ರೈತರು ಸಬ್ಸಿಡಿಯನ್ನು ಪಡೆಯುವಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಹೇಗೆ ? ಬಗೆಹರಿಸಬೇಕೆಂದು ಎನ್ನುವ ವಿಷಯ ಒಳಗೊಂಡಿದೆ.  ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳುವ  ಮುಖಾಂತರ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ತಲುಪಿಸಬಹುದು ಎಂದು  ಸಲಹೆಗಳನ್ನು ಈ ಮಹಾಪ್ರಬಂಧದಲ್ಲಿ ಒಳಗೊಂಡಿದೆ ಎಂದರು.

ರೈತರ ಆರ್ಥಿಕ ಪರಿಸ್ಥಿತಿ ಯನ್ನು ಸಬ್ಸಿಡಿ ಮುಖಾಂತರ ಹೇಗೆ ? ಸುಧಾರಿಸಬೇಕೆಂದು ಎಂಬ ಸಲಹೆಯನ್ನು ನೀಡಿದ್ದಾರೆ.

ಪ್ರಸ್ತುತ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಸೆಂಟ್ರಲ್ ಯುನಿವರ್ಸಿಟಿಯ ಅರ್ಥಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ