Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರೋಟೋಕಾಲ್ ಸಮಸ್ಯೆ ಇತ್ಯರ್ಥ ? ಸ್ಥಗಿತಗೊಂಡ ಕಮಠಾಣ - ಬಾವಗಿ ರಸ್ತೆ ಕಾಮಗಾರಿ ಆರಂಭ

 ಸುದ್ದಿಮೂಲ ವಾರ್ತೆ ಬೀದರ್, ೆ.04:
ಕಳೆದ ಒಂದು ತಿಂಗಳಿನಿಂದ ಪ್ರೋೋಟೋಕಾಲ್ (ಶಿಷ್ಠಾಾಚಾರ) ಸಮಸ್ಯೆೆಯಿಂದ ಸ್ಥಗಿತಗೊಂಡಿದ್ದ ಬೀದರ್ ತಾಲೂಕಿನ ಕಮಠಾಣದಿಂದ ಬಾವಗಿವರೆಗಿನ ರಸ್ತೆೆ ಡಾಂಬರೀಕರಣ ಕಾಮಗಾರಿ ಎರಡನೇ ಬಾರಿ ಆರಂಭಗೊಂಡಿದೆ.
ಸ್ಥಳೀಯ ಶಾಸಕ ಶೈಲೇಂದ್ರ ಬೆಲ್ದಾಾಳೆ ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಸಂಸದ ಸಾಗರ್ ಖಂಡ್ರೆೆ ಅವರಿಗೆ ಆಹ್ಹಾಾನಿಸದೇ ಕಾಮಗಾರಿ ಆರಂಭಿಸಲಾಗಿದೆ ಎಂದು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಲಾಗಿತ್ತು. ಅದರಂತೆ ಗುತ್ತಿಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದ. ಬಳಿಕ ಸುದ್ದಿಮೂಲದಲ್ಲಿ ಈ ಬಗ್ಗೆೆ ಜನೆವರಿ 9 ರಂದು ಸವಿಸ್ತಾಾರವಾಗಿ ವರದಿ ಪ್ರಕಟಿಸಿ ಕಾಮಗಾರಿ ಅಗತ್ಯತೆ ಬಗ್ಗೆೆ ಸಾರ್ವಜನಿಕರ ಅಭಿಪ್ರಾಾಯ ಪ್ರಕಟಿಸಲಾಗಿತ್ತು. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇಂದೂಧರ ಮಂಗಲಗಿಗೆ ಸಂಪರ್ಕಿಸಿ ಕಾರಣ ಕೇಳಲಾಗಿತ್ತು. ಹೌದು, ಸಂಸದ, ಸಚಿವರಿಗೆ ಆಹ್ಹಾಾನಿಸದೇ ಕಾಮಗಾರಿ ಆರಂಭಿಸಲಾಗಿದೆ. ಹಾಗಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಎಲ್ಲರನ್ನೂ ಕರೆದು ಮತ್ತೊೊಮ್ಮೆೆ ಪೂಜೆ ಸಲ್ಲಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸುದ್ದಿಮೂಲಕ್ಕೆೆ ತಿಳಿಸಿದರು.
ಆದರೆ, ಸದರಿ ರಸ್ತೆೆ ಸಂಪೂರ್ಣ ಹಾಳಾಗಿದ್ದು, ಓಡಾಡಲು ಜನರು ಹರಸಾಹಸ ಪಡುವಂತಾಗಿದೆ. ತಕ್ಷಣ ಕಾಮಗಾರಿ ಆರಂಭಕ್ಕೆೆ ಜನರು ಒತ್ತಾಾಯಿಸುತ್ತಿಿದ್ದಾರೆ ಎಂದು ವರದಿ ಪ್ರಕಟಿಸಲಾಗಿತ್ತು. ಇದೀಗ ಸರಿಯಾಗಿ ಒಂದು ತಿಂಗಳ ಬಳಿಕ ಪೂಜೆ ಸಲ್ಲಿಸದೇ ಕಾಮಗಾರಿ ಆರಂಭಿಸಲಾಗಿದೆ. ಸಾರ್ವಜನಿಕ ಒತ್ತಾಾಯಕ್ಕೆೆ ಮಣಿದು ಪ್ರೋೋಟೋಕಾಲ್ ಕೈ ಬಿಡಲಾಗಿದೆಯೇ ? ಎಂಬ ಅನುಮಾನ ಕಾಡುತ್ತಿಿದೆ. ಒಟ್ಟಿಿನಲ್ಲಿ ಕಾಮಗಾರಿ ಆರಂಭವಾಗಿರುವುದು ಸಾರ್ವಜನಿಕರಲ್ಲಿ ಹರ್ಷ ತಂದಿದೆ ಎಂದು ಹೇಳಬಹುದು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ