Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೇಸರವಾಗಿ ನಮ್ಮವರ ವಿರುದ್ದ ಮಾತನಾಡಿದೆ- ಸಂಗಣ್ಣ

ಸುದ್ದಿಮೂಲವಾರ್ತೆ

ಕೊಪ್ಪಳ,ನ.6: ಕ್ಷೇತ್ರದಲ್ಲಿ ಅಭಿವೃದ್ದಿಗಾಗಿ ಸಚಿವರನ್ನು ಭೇಟಿಯಾದಾಗ ಸರಿಯಾಗಿ ಸ್ಪಂದನೆ ಸಿಗದಿದ್ದಕ್ಕೆ ಅಸಮಾದಾನ ವ್ಯಕ್ತಪಡಿಸಿದ್ದೆ. ಹಾಗಂತ ಅದು ಪಕ್ಷದ ವಿರೋಧಿ ಹೇಳಿಕೆ ಅಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ಇತ್ತೀಚಿಗೆ ತಮ್ಮ ಪಕ್ಷದ ಬಗ್ಗೆ ಅಸಮಾದಾನ ಹೊರಹಾಕಿದ್ದರು.

ಹಿಂದಿನ ಸರಕಾರದಲ್ಲಿ ನಮ್ಮವರೇ ಕೆಲಸ‌‌ ಮಾಡಲಿಲ್ಲ ಹೀಗಾಗಿ ಪಕ್ಷದಿಂದ ಹೊರಹೋಗಬೇಕೆಂದಿದ್ದೆ. ಲೋಕೋಪಯೋಗಿ ಸಚಿವರಾಗಿದ್ದ ಸಿ ಸಿ ಪಾಟೀಲ. ಗೋವಿಂದ ಕಾರಜೋಳರಿದ್ದಾಗಲೂ ಕೆಲಸವಾಗಲಿಲ್ಲ. ಹಿಂದಿನ‌ ಸರಕಾರ ಹಾಗು ಸಚಿವರ ವಿರುದ್ದ ಅಸಮಾದಾನ ವ್ಯಕ್ತಪಡಿಸುತ್ತಾ ಸ್ವಾಭಿಮಾನಕ್ಕೆ‌ ಧಕ್ಕೆಯಾಗಿ ಹೊರ ಬರಬೇಕೆಂದಿದ್ದೆ ಒಮ್ಮೊಮ್ಮೆ ಗುಲಾಮಿತನ ಅನಿಸಿ ಬಿಡ್ತು

ನಮ್ಮ ಜಿಲ್ಲೆಯಲ್ಲಿ ನನ್ನನ್ನು ಹಿಡಿದು ಡೈನಾಮಿಕ ಲೀಡರ್ ಇಲ್ಲದೆ ಇರೋದು ಅಭಿವೃದ್ದಿಗೆ‌ ಹಿನ್ನೆಡೆಯಾಗಿದೆ ಎಂದು ಕೊಪ್ಪಳದಲ್ಲಿ ಜಿಲ್ಲಾ ನ್ಯಾಯಲಯಕ್ಕೆ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಅಸಮಾದಾನ ಹೊರಹಾಕಿದ್ದರು.

ಈ ಕುರಿತು ಇಂದು ಸ್ಪಷ್ಠನೆ ನೀಡಿ ನಾನೊಬ್ಬ ಜನಪ್ರತಿನಿಧಿ, ಕೊಪ್ಪಳ ಜಿಲ್ಲೆಯಾಗಿ ೨೬ ವರ್ಷವಾಗಿದೆ. ಕೊಪ್ಪಳದವರೊಬ್ಬರೂ ಮಂತ್ರಿಯಾಗುತ್ತಿಲ್ಲ. ಮಂತ್ರಿಯಾದರೆ ಕೊಪ್ಪಳ ಜಿಲ್ಲೆಯ ಅನೇಕ ಯೋಜನೆಗಳಿಗೆ ಚಾಲನೆ ಸಿಗುತ್ತಿದ್ದವು.ನ್ಯಾಯಾಲಯದ ಕಟ್ಟಡ ನಿರ್ಮಾಣ ವಿಚಾರದಲ್ಲಿ ನನಗೆ ಸಾಕಷ್ಟು ಮುಜುಗರವಾಯಿತು.ನಮ್ಮ ಸರಕಾರವಿದ್ದರೂ ಹಣ ಕೊಡಲಿಲ್ಲ. ಆಗ ಕಾರಜೋಳ ಅವರನ್ನೂ ಭೇಟಿಯಾಗಿದ್ದೇನೆ. ಸಿಸಿ ಪಾಟೀಲ್‌ ಅವರನ್ನೂ ಭೇಟಿ ಮಾಡಿದ್ದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮಾಡುತ್ತೇನೆ ಎಂದಿದ್ದರು.ಬಳಿಕ ವಕೀಲರು ಪಿಐಎಲ್ ಹಾಕಿ ಯೋಜನೆಗೆ ಹಣ ಪಡೆಯಬೇಕಾಯಿತು.ಆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದಾಗ ಏನಂತ ಹೇಳಬೇಕು.ಹಾಗಂತ ಪಕ್ಷ ವಿರೋಧಿಯಲ್ಲ. ಈ ಸರಕಾರದ ಹಣೆಬರಹವೂ ಅಷ್ಟೆ.ಅಭಿವೃದ್ಧಿ ವಿಚಾರದಲ್ಲಿ ನಮಗೆ ಸೌಲಭ್ಯಗಳು ಬೇಡವಾ? ಎಂದು ಹೇಳಿದರು.

ಬಿಜೆಪಿಯವರು ರಾಜ್ಯಾಧ್ಯಕ್ಷರನ್ನು ನೇಮಕ‌ ಮಾಡಿಲ್ಲ ಎನ್ನುವ ವಿಚಾರವಾಗಿ ಮಾತನಾಡಿ ಈ ಹಿಂದೆ ಎಐಸಿಸಿ ಅಧ್ಯಕ್ಷರನ್ನೇ ಕಾಂಗ್ರೆಸ್‌ ಆಯ್ಕೆ ಮಾಡಿರಲಿಲ್ಲ. ನಮ್ಮದೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಕರ್ನಾಟಕ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳೀರೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ