Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಚಿತ ಯೋಜನೆಗಳು ಲಂಚ ಕೊಟ್ಟಂತೆ: ಸಂತೋಷ್ ಹೆಗ್ಡೆ

ಸುದ್ದಿಮೂಲ ವಾರ್ತೆ

ಮಂಡ್ಯ, ಜು.2: ಸರ್ಕಾರ ಜನರಿಗೆ ಉಚಿತ ಗ್ಯಾರಂಟಿಗಳನ್ನು ನೀಡುವುದು ನನ್ನ ಪ್ರಕಾರ ಲಂಚ ನೀಡಿದಂತೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಮಂಡ್ಯದಲ್ಲಿ ಕನ್ನಡ ಸೇವೆ ಕರ್ನಾಟಕ ವತಿಯಿಂದ ಇಂದು ನಡೆದ 'ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ' ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಈ ಫ್ರೀ ಯೋಜನೆಯ ಪರಿಣಾಮ ಮುಂದಿನ ಆರು ತಿಂಗಳೊಳಗೆ ತಿಳಿಯುತ್ತದೆ. ಮಹಿಳೆಯರು ಒಂದು ಬಸ್‌ನಲ್ಲಿ ಹೊರಟರೆ, ಗಂಡಸರು ಮತ್ತೊಂದು ವಾಹನದಲ್ಲಿ ತೆರಳುತ್ತಿದ್ದಾರೆ. ಅತ್ತೆ-ಸೊಸೆ ನಡುವೆ ಜಗಳವಾಗಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಈಗಾಗಲೇ ವಿದ್ಯುತ್ ಬಿಲ್ ಏರಿಕೆ ಮಾಡಲಾಗಿದ್ದು, ಉತ್ಪಾದನೆ ಕಡಿಮೆ ಆಗಿದೆ. ಈ ರೀತಿ ಉಚಿತ ಯೋಜನೆಗಳನ್ನು ಘೋಷಿಸುವುದು ನನ್ನ ಪ್ರಕಾರ ಲಂಚ ಕೊಟ್ಟಂತೆ. ಇದರ ಪರಿಣಾಮ ಮುಂದಿನ ಆರು ತಿಂಗಳೊಳಗೆ ಜನತೆಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ ನನ್ನ ಪ್ರಕಾರ ಇದು ತಪ್ಪು. ಯಾವತ್ತು ಶ್ರಮದಿಂದ ಹಣ ಪಡೆಯಬೇಕು. ದಾನದಿಂದ ಪಡೆಯುವುದು ಸರಿಯಲ್ಲ. ವಿದ್ಯೆ, ಆರೋಗ್ಯ ನೀಡೋದು ಸರ್ಕಾರದ ಜವಾಬ್ದಾರಿ. ಅದನ್ನು ಅವರು ನಿಭಾಯಿಸಲಿ. ಸರ್ಕಾರಿ ಶಾಲೆ, ಆಸ್ಪತ್ರೆಯ ಸೌಲಭ್ಯಗಳನ್ನು ಜಾಸ್ತಿ ಮಾಡಲಿ. ಮತದಾರಿಗೆ ಆಮಿಷವೊಡ್ಡೋದು ಚುನಾವಣಾ ಕಾನೂನು ಪ್ರಕಾರ ತಪ್ಪು ಎಂದರು.

ಹಿಂದಿನ ಸರ್ಕಾರದ ಭ್ರಷ್ಟಾಚಾರ ತನಿಖೆ ಮಾಡಲಾಗುವುದು ಎಂದು ಹೊಸ ಸರ್ಕಾರಗಳು ಹೇಳುವುದು ಸಹಜ. ಆದರೆ, ತನಿಖೆಗು ನಡೆಯುವುದಿಲ್ಲ. ಸಲ್ಲಿಸಲಾದ ವರದಿ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ. ಇದು ಜನರನ್ನು ಮಂಕುಗೊಳಸುವ ಯತ್ನ. ಇಂತಹ ಮಾತುಗಳನ್ನು ಆಡುವ ಬದಲು ಪೂರೈಸಬೇಕು ಎಂದು ಹೇಳಿದರು.

ಹಿಂದೆ ಒಂದು ಪಕ್ಷ ಲೋಕಾಯುಕ್ತ ಅಧಿಕಾರವನ್ನೇ ಕಿತ್ತಿಕೊಂಡು ಎಸಿಬಿಯನ್ನು ರಚನೆ ಮಾಡಿತ್ತು. ನಂತರ ಚುನಾವಣೆ ಸಮಯದಲ್ಲಿ ವಿರೋಧ ಪಕ್ಷದವರು ಅಧಿಕಾರಕ್ಕೆ ಬಂದ 24 ಘಂಟೆಯೊಳಗೆ ಎಸಿಬಿಯನ್ನು ಬಂದ್ ಮಾಡುತ್ತೇವೆ ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಏನು ಮಾಡಲಿಲ್ಲ ಎಂದು ಪರರೋಕ್ಷವಾಗಿ ಬಿಜೆಪಿ-ಕಾಂಗ್ರೆಸ್ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ವ್ಯವಸ್ಥೆ ಬದಲಾಗಬೇಕಿರುವುದು ಮತದಾರನಿಂದ. ಇಚ್ಚೆ ಪೂರೈಸುವ ವ್ಯಕ್ತಿಯನ್ನು ಚುನಾವಣೆಯಲ್ಲಿ ಆರಿಸಬೇಕು. ಸೂಕ್ತ ವ್ಯಕ್ತಿ ಇಲ್ಲದಿದ್ದರೇ ನೋಟಾಗೆ ಮತಹಾಕಿ. ಆಗ ಒಳ್ಳೆ ವ್ಯಕ್ತಿಯನ್ನ ಪಕ್ಷದಿಂದ ನಿಲ್ಲಸಿದ್ದರೇ ಅಧಿಕಾರ ಸಿಗಲ್ಲ ಎನ್ನುವುದು ಅವರಿಗೆ ತಿಳಿಯುತ್ತೆ. ಹಣ ಮಾಡಲು, ಅಧಿಕಾರ ಚಲಾಯಿಸಲು ರಾಜಕೀಯಕ್ಕೆ ಬರಬಾರದು ಎಂದು ಕಿವಿಮಾತನ್ನು ಹೇಳಿದ್ದಾರೆ.

ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು, ಎಲ್ಲರೂ ಜನ ಸೇವೆಯ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಜನಪ್ರತಿನಿಧಿಗಳಲ್ಲಿ ಹುದ್ದೆಯ ಲಾಭಕ್ಕಿಂತ ಸೇವೆ ಮಾಡುವ ವಿಚಾರ ಮೂಡಬೇಕು. ರಾಜಕೀಯ ಪಕ್ಷಗಳಷ್ಟೇ ಅಲ್ಲದೆ ಸಾರ್ವಜನಿಕರು ಈ ಬಗ್ಗೆ ಚಿಂತಿಸಬೇಕಿದೆ. ಜಾತಿ, ಧರ್ಮ, ಮತ ಎನ್ನದೆ ದೇಶ ಸೇವೆ ಮಾಡುವವರಿಗೆ ಜನತೆ ಮತ ಹಾಕಬೇಕು ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ