Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲಾ ಕಟ್ಟಡ ಉಳಿಸಿ ನಮ್ಮ ಮಕ್ಕಳ ಭಿಕ್ಷಾಟನೆ ತಪ್ಪಿಸಿ: ಸಂಸದ, ಶಾಸಕರಲ್ಲಿ ಅಂಗಲಾಚಿದ ಅಲೆಮಾರಿ 

ಸುದ್ದಿಮೂಲ ವಾರ್ತೆ

ಕುಷ್ಟಗಿ, ಜೂ. 14:ಸರ್ಕಾರಿ ಶಾಲಾ ಕಟ್ಟಡ ಉಳಿಸಿ ನಮ್ಮ ಮಕ್ಕಳ ಭಿಕ್ಷಾಟನೆ ತಪ್ಪಿಸಿ ಎಂದು ಅಲೆಮಾರಿ ಜನಾಂಗದ ಪ್ರಮುಖ ಮಹಬೂಬಸಾಬ ಹಾವಾಡಿಗ ಸಂಸದ ಕರಡಿ ಸಂಗಣ್ಣ, ಶಾಸಕ ದೊಡ್ಡನಗೌಡ ಪಾಟೀಲ್, ರೈಲ್ವೆ ಇಲಾಖೆಯ ಅಧಿಕಾರಿಗಳ ಮುಂದೆ ಅಂಗಲಾಚಿದ ಪ್ರಸಂಗ ಪಟ್ಟಣದಲ್ಲಿ ಬುಧವಾರ ನಡೆಯಿತು.

ಸಂಸದ ಸಂಗಣ್ಣ ಕರಡಿ ಅವರು ಕುಷ್ಟಗಿ ಪಟ್ಟಣದ ಷರೀಫ್ ನಗರದ ಬಳಿ ರೈಲ್ವೇ ಸ್ಟೇಷನ್ ಕಾಮಗಾರಿ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಮತ್ತೆ ಭಿಕ್ಷಾಟನೆಗೆ ಇಳಿಯುತ್ತಾರೆ.

ರೈಲ್ವೇ ಹಳಿಗೆ ನಮ್ಮ ಮನೆಗಳೆಲ್ಲಾ ಹೋದರೂ ಚಿಂತೆಯಿಲ್ಲ. ಆದರೆ, ಶಾಲಾ ಕಟ್ಟಡ ತೆರವುಗೊಳಿಸಲು ಬಿಡುವುದಿಲ್ಲ. ಕೆಲ ದಿನಗಳ ಹಿಂದೆ ತಹಸೀಲ್ದಾರ್ ರಾಘವೇಂದ್ರರಾವ್ ಕರ್ಣಂ ಅವರು ಷರೀಫ ನಗರದ ಶಾಲೆಗೆ ಬಂದು ವೀಕ್ಷಿಸಿದ್ದಾರೆ. ಆ ವೇಳೆ ರೈಲ್ವೆ ಇಲಾಖೆ ಇಂಜಿನಿಯರ್'ಗಳು ಶಾಲೆಯ ಕಟ್ಟಡ ಬದಲು ಶಾಲೆಯ ತಡೆಗೋಡೆ ಒಂದು ಭಾಗ ಮಾತ್ರ ತೆರವುಗೊಳಿಸುವುದಾಗಿ ಹೇಳಿದ್ದಾರೆ ಎಂದು ಮಹಬೂಬಸಾಬ ಸಂಸದರ ಗಮನಕ್ಕೆ ತಂದರು. ಆಗ ರೈಲ್ವೇ ಪ್ರಾಧಿಕಾರದ ಅಧಿಕಾರಿಗಳು ಸಂಪೂರ್ಣ ಶಾಲೆ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.

 

ಶಾಸಕ ದೊಡ್ಡನಗೌಡರ ಗಮನಕ್ಕೆ ತಂದರೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತಾರೆ ಎಂದು ಸಂಸದ ಸಂಗಣ್ಣ ತಿಳಿಸಿದರು. ಆಗ ಮಹಬೂಬಸಾಬ ಪ್ರತಿಕ್ರಿಯಿಸಿ, ಈ ಹಿಂದೆ ದೊಡ್ಡನಗೌಡರು ಶಾಸಕರಿದ್ದ ಅವಧಿಯಲ್ಲಿ ನಾಲ್ಕೈದು ಬಾರಿ ಮನವಿ ಮಾಡಿದ್ದೇನೆ. ಅಂದಿನ ವಾರ್ಡ ಸದಸ್ಯ ನಾಗರಾಜ ಮೇಲಿನಮನಿ ಗಮನಕ್ಕೂ ಇದೆ ಎಂದ ಮಹಬೂಬಸಾಬ, ಆಕ್ರೋಶಭರಿತನಾಗಿ ಶಾಲೆ ತೆಗೆಯಿರಿ, ಮನೆ ತೆಗೆಯಿರಿ, ನಮ್ಮ ಪ್ರಾಣನೂ ತೆಗೆಯಿರಿ. ಆದರೆ, ನಮ್ಮ ಮಕ್ಕಳ ಭಿಕ್ಷಾಟನೆ ತಪ್ಪಿಸಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಮತ್ತೊಮ್ಮೆ ಅಂಗಲಾಚಿ ಬೇಡಿಕೊಂಡರು.

ಸಂಸದ ಕರಡಿ ಸಂಗಣ್ಣ ಪ್ರತಿಕ್ರಿಯಿಸಿ, ಕೂಡಲೇ ಶಾಲಾ ಕಟ್ಟಡಕ್ಕೆ ಬಿಡುಗಡೆಗೊಂಡ ಪರಿಹಾರವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ವ್ಯವಸ್ಥೆ ಆಗಬೇಕು. ಜೊತೆಗೆ ಶಾಸಕರ ಮಾರ್ಗದರ್ಶನದಲ್ಲಿ ಷರೀಫ್ ನಗರ ಸಮೀಪದಲ್ಲೇ ಸರ್ಕಾರಿ ಜಾಗೆಯನ್ನು ಗುರುತಿಸಿ ಅಲ್ಲಿ ಪರ್ಯಾಯ ಶಾಲಾ ಕಟ್ಟಡ ನಿರ್ಮಿಸಲು ಕೈಗೊಳ್ಳಬೇಕು. ಅಲಮಾರಿ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ರಾಘವೇಂದ್ರರಾವ್ ಕೆ. ಅವರಿಗೆ ಸೂಚಿಸಿದರು.

ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ್, ತಹಸೀಲ್ದಾರ್ ರಾಘವೇಂದ್ರರಾವ್ ಕರ್ಣಂ, ರೈಲ್ವೆ ಇಲಾಖೆಯ ಅಧಿಕಾರಿಗಳು, ಬಿಜೆಪಿ ಪ್ರಮುಖರಾದ ಪ್ರಭಾಕರ ಚಿಣಿ, ಕೆ.ಮಹೇಶ್, ಪುರಸಭೆ ಸದಸ್ಯ ಜಿ.ಕೆ.ಹಿರೇಮಠ, ಮಾಜಿ ಸದಸ್ಯರಾದ ನಾಗರಾಜ ಮೇಲಿನಮನಿ, ಚಂದ್ರಕಾಂತ ವಡಿಗೇರಿ ಇತರರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ