ಹಿಂಡಿಗನಾಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ
ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 6 ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಹಾಲು ಉತ್ಪಾದಕರ ಸಹಕಾರ ಸಂಘದ 2023-28ನೇ ಸಾಲಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧ ಅಯ್ಕೆ 01, ಕಾಂಗ್ರೆಸ್ 06, ಬಿಜೆಪಿ 03, ಪಕ್ಷೇತರರು 02 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ನಿಗದಿತ ಸಮಯಕ್ಕೆ ಸರಿಯಾಗಿ ಎಸ್ಸಿ ಮೀಸಲು ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಮುನಿಯಪ್ಪ ಅವಿರೋಧ ಆಯ್ಕೆಯಾಗಿದ್ದು, ಉಳಿಕೆ 11 ಸ್ಥಾನಕ್ಕೆ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಿಗದಿಯಾಗಿತ್ತು.
ಮಂಗಳವಾರ ಚುನಾವಣೆ ನಿಗದಿಯಾಗಿ ಅಂತಿಮವಾಗಿ ಎಣಿಕೆಯಾದಾಗ ನೂತನ ನಿರ್ದೇಶಕರಾಗಿ ಸೋಮಶೇಖರ್, ಹೆಚ್.ಡಿ. ಶಿವಣ್ಣ, ಹರೀಶ್, ಮುನಿರಾಜು,ಕಲ್ಪನಾ, ಸೊಣ್ಣಮ್ಮ, ಆನಂದ್, ಗುಡೇಗೌಡ, ಲಕ್ಷ್ಮಮ್ಮ, ಹೆಚ್.ಕೆ. ರಾಮಚಂದ್ರೇಗೌಡ, ಹೆಚ್.ಟಿ. ವೆಂಕಟೇಶ್ ಜಯಗಳಿಸಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಹೈನುಗಾರರ ಹಿತ ಕಾಪಾಡಲು, ಸರಕಾರದ ಹಾಗೂ ಬಮೂಲ್‌ನ ಎಲ್ಲ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಯತ್ತ ಮುನ್ನೆಡೆಸಬೇಕು ಎಂದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.