Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಪೀಕರ್ ಸ್ಥಾನಕ್ಕೆ 'ಕೈ' ಮುಗಿಯುತ್ತಿರುವ ಹಿರಿಯ ಶಾಸಕರು

ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 19: ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಇದೀಗ ವಿಧಾನಸಭೆ ಸ್ಪೀಕರ್ ಹುದ್ದೆಗೇರಲು ಹಿರಿಯ ನಾಯಕರುಗಳೆಲ್ಲಾ ಹಿಂದೇಟು ಹಾಕುತ್ತಿದ್ದಾರೆ.

ತಮಗೆ ಸಚಿವ ಸ್ಥಾನವೇ ಬೇಕು ಎಂದು ಹಿರಿಯ ಮುಖಂಡರಾದ ಟಿ.ಬಿ. ಜಯಚಂದ್ರ, ಆರ್.ವಿ.ದೇಶಪಾಂಡೆ, ಎಚ್.ಕೆ ಪಾಟೀಲ್, ಬಿ.ಆರ್ ಪಾಟೀಲ್, ಎನ್.ವೈ ಗೋಪಾಲಕೃಷ್ಣ ಸೇರಿದಂತೆ ಹಲವು ಪ್ರಮುಖರು ಪಟ್ಟು ಹಿಡಿದಿದ್ದು, ವಿಧಾನಸಭಾಧ್ಯಕ್ಷ ಸ್ಥಾನ ಬೇಡ ಎಂದು ಹೇಳುತ್ತಿದ್ದಾರಂತೆ.

ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇವೆ. ಆದರೆ ಅದೊಂದು ಸ್ಥಾನ ಮಾತ್ರ ಬೇಡ. ನಮಗೆ ಸಚಿವಗಿರಿ ಕೊಡಿ. ಇಲ್ಲಾ ಅಂದರೆ ಶಾಸಕರಾಗಿಯೇ ಇರುತ್ತೇವೆ. ಸ್ಪೀಕರ್ ಸ್ಥಾನ ಮಾತ್ರ ನಮಗೆ ಬೇಡ ಎನ್ನುತ್ತಿದ್ದಾರಂತೆ.

ಇದು ಶಾಸಕಾಂಗದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವ, ಕಲಾಪಗಳ ಸುಗಮ ನಿರ್ವಹಣೆ ಮಾಡುವ, ಶಾಸನ ರಚಿಸುವ ಅತ್ಯುನ್ನತ ಸ್ಥಾನ. 224 ಶಾಸಕರ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಹುದ್ದೆಗೆ ಸಾಕಷ್ಟು ಮಂದಿ ಹಿಂದೇಟು ಹಾಕಿದ್ದಾರೆ.

ಸ್ಪೀಕರ್‌ ಸ್ಥಾನ ಸ್ವೀಕರಿಸಲು ಶಾಸಕರು  ಹಿಂದೇಟು ಹಾಕುತ್ತಿದ್ದು, 2004ರಿಂದಲೂ ವಿಧಾನಸಭೆ ಸ್ಪೀಕರ್ ಆದವರು ಬಳಿಕ ನಡೆದ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಾರೆ. ಇದರ ಇತಿಹಾಸವನ್ನು ಗಮನಿಸಬಹುದು- ಕೆ.ಆರ್ ಪೇಟೆ ಕೃಷ್ಣ 2008ರಲ್ಲಿ ಸೋಲುಂಡಿದ್ದಾರೆ. 2013ರಲ್ಲಿ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ 2018ರಲ್ಲಿ ಸೋತಿದ್ದಾರೆ. ಕಾಗೋಡು ಸಚಿವರಾದ ಬಳಿಕ 2017ರಲ್ಲಿ ಸ್ಪೀಕರ್ ಆದ ಕೋಳಿವಾಡ 2018ರ ಚುನಾವಣೆಯಲ್ಲಿ ಸೋಲು ಕಂಡರು. ಬಳಿಕ ನಡೆದ ಉಪಚುನಾವಣೆಯಲ್ಲೂ ಸೋತರು. 2018ರಲ್ಲಿ ಸ್ಪೀಕರ್ ಆದ ರಮೇಶ್ ಕುಮಾರ್ ನಂತರ ಸೋತರು. 2019ರಲ್ಲಿ ಸ್ಪೀಕರ್ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ!

ಈ ಭಯ ಹಿರಿಯ ಶಾಸಕರನ್ನು ಆವರಿಸಿಕೊಂಡಿದೆ. ಹೀಗಾಗಿ, ನಮಗೆ ಸಚಿವ ಸ್ಥಾನವೇ ಬೇಕು, ಸ್ಪೀಕರ್ ಸ್ಥಾನ ಬೇಡ ಎಂದು ಹಿರಿಯ ಶಾಸಕರು ಪಟ್ಟು ಹಿಡಿದಿದ್ದಾರೆ.

ಈ ಮಧ್ಯೆ ಟಿ.ಬಿ ಜಯಚಂದ್ರ, ಎಚ್.ಕೆ ಪಾಟೀಲ್, ಬಿ.ಆರ್ ಪಾಟೀಲ್, ಎನ್.ವೈ ಗೋಪಾಲಕೃಷ್ಣ ಅವರಲ್ಲಿ ಒಬ್ಬರನ್ನು ಸ್ಪೀಕರ್‌ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ