Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೇವಾಕಾರ್ಯಕರ್ತರ ಭೂಮಿ ಸರಕಾರಿ ಕಟ್ಟಡಕ್ಕೆ ನೀಡೋದಿಲ್ಲ

ಸುದ್ದಿಮೂಲವಾರ್ತೆ

ಕೊಪ್ಪಳ ಸೆ.19:ಮಠದ ಸೇವೆ ಮಾಡುತ್ತಿರುವವರಿಗೆ ನೀಡಿದ ಆಸ್ತಿಯಲ್ಲಿ ಸರಕಾರಿ ಕಟ್ಟಡ ನಿರ್ಮಿಸುವದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಶಾಸಕ ಬಸವರಾಜ ರಾಯರಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗುದ್ನೆಪ್ಪಮಠದಲ್ಲಿ ಸೇವೆ ಮಾಡುವ 18 ಕುಟುಂಬಗಳಳಿಗೆ ಹಿಂದೆ ಸರಕಾರ ಉಮಳಿಯಾಗಿ ಭೂಮಿಯನ್ನು ನೀಡಿದೆ. ಇದೇ ಭೂಮಿಯಲ್ಲಿ ಈಗ ಕೊಪ್ಪಳ ಜಿಲ್ಲಾಡಳಿತ ಹಾಗು ಶಾಸಕ ಬಸವರಾಜ ರಾಯರಡ್ಡಿ ಕುಕನೂರು ತಾಲೂಕಾಡಳಿತ ಕಚೇರಿ ಸೇರಿ ವಿವಿಧ ಕಟ್ಟಡಗಳನ್ನು ನಿರ್ಮಿಸಲು ಹೊರಟಿಸಿದ್ದಾರೆ. ಆದರೆ ನಮ್ಮ ಆಸ್ತಿ ನೀಡಲು ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ.

ಗುದ್ನೆಪ್ಪನಮಠ ಸರ್ವೆ 78 ಭೂಮಿ ಸ್ವಾದೀನಕ್ಕೆ ವಿರೋಧಿಸಿದ ಗ್ರಾಮಸ್ಥರು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು. ನೂರಾರು ಜನರೊಂದಿಗೆ ಬೃಹತ್ ಮೆರವಣಿಗೆ ಹಾಗು ಪ್ರತಿಭಟನೆ ನಡೆಯಿತು.

ಕುಕನೂರು ತಾಲೂಕಾ ಕಚೇರಿಗಾಗಿ 30 ಎಕರೆ ಭೂಮಿ ಸ್ವಾದೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಸೇವಾ ಕಾರ್ಯಕರ್ತರಿಗೆ ನೀಡಿದ ಭೂಮಿ ಸ್ವಾದೀನಕ್ಕೆ ಸಿದ್ದತೆ ನಡೆದಿದೆ. ಗುದ್ನೇಶ್ವರ ಮಠಕ್ಕಾಗಿ 182 ಎಕರೆ ಮೀಸಲಿಟ್ಟಿತ್ತು. ಈಗಾಗಲೇ ನವೋದಯ ವಿದ್ಯಾಲಯ, ಐಟಿಐ ಸೇರಿ ವಿವಿಧ ಕಟ್ಟಡಗಳಿಗೆ ಭೂಮಿ ನೀಡಲಾಗಿದೆ. ಗುದ್ನೇಶ್ವರ ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯ ಮಾಡುವವರಿಗೆ ಸರಕಾರ ಭೂಮಿ ನೀಡಿದೆ. ಆದರೆ ಇದೇ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಕನೂರು ತಾಲೂಕಾಡಳಿತ ಕಚೇರಿ ಭೂಮಿ ಸ್ವಾದೀನಕ್ಕಾಗಿ ಸ್ಥಳಕ್ಕೆ ಶಾಸಕರ ಬಸವರಾಜ ರಾಯರಡ್ಡಿ ಹಾಗು ಜಿಲ್ಲಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು.

ಈ ಮಧ್ಯೆ ಇಲ್ಲಿ ರಾಜಕೀಯ ಎದ್ದು ಕಾಣುತ್ತಿದೆ. ಈ ಹಿಂದೆ ತಾಲೂಕಾ ಕಚೇರಿಗಾಗಿ ಕೊಪ್ಪಳ ರಸ್ತೆಯಲ್ಲಿ ಬೇರೆಡೆ ಭೂಮಿ ಗುರುತಿಸಲಾಗಿತ್ತು. ಅದಕ್ಕಾಗಿ ಭೂಮಿ ಸ್ವಾದೀನ ಕಾರ್ಯ ಸರಕಾರ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಒಪ್ಪಿಕೊಂಡಿತ್ತು. ಈಗ ಬಸವರಾಜ ರಾಯರಡ್ಡಿ ಶಾಸಕರಾದ ನಂತರ ಸ್ಥಳ ಬದಲಾವಣೆ ಮಾಡುತ್ತಿರುವದು ಪಕ್ಕ ರಾಜಕೀಯ ಕಾರಣಕ್ಕಾಗಿ ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದ್ದಾರೆ.

ಗ್ರಾಮಸ್ಥರ ಮನವಿ ಸ್ವೀಕರಿಸಿದ ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಶರಣಯ್ಯ. ರುದ್ರಯ್ಯ, ಚನ್ನಬಸಯ್ಯ, ವೀರಯ್ಯ, ಶಕುಂತಲಮ್ಮ ಸೇರಿ ಹಲವರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ