Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ನಾಡಿಗೆ ಷಣ್ಮುಖ ಶಿವಯೋಗಿಗಳ ಕೊಡುಗೆ ಅಪಾರ

 ಸುದ್ದಿಮೂಲ ವಾರ್ತೆ ಜೇವರ್ಗಿ, ನ.29:
‘ನಿರಾಲಂಬದೇವ’ ಎಂದೂ ಕರೆಯಲ್ಪಡುವ ಜೇವರ್ಗಿಯ ಷಣ್ಮುಖ ಶಿವಯೋಗಿಗಳು 17ನೇ ಶತಮಾನದ ಒಬ್ಬ ಶ್ರೇೇಷ್ಠ ವಚನಕಾರ ಮತ್ತು ವಚನ ಸಾಹಿತ್ಯದ ಕೊನೆಯವರು. 800 ಕ್ಕೂ ಹೆಚ್ಚು ವಚನಗಳನ್ನು ಬರೆದು ಕನ್ನಡ ಸಾಹಿತ್ಯ, ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ್ ಹೇಳಿದರು.
ಪಟ್ಟಣದ ಕೋರ್ಟ್ ಎದುರುಗಡೆಯಿರುವ ಅಲ್ಪ ಸಂಖ್ಯಾಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಬುರಗಿಯ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರಾಜ್ಯೋೋತ್ಸವ ಮಾಸಾಚರಣೆ ಸರಣಿ ಉಪನ್ಯಾಾಸ ಕಾರ್ಯಕ್ರಮ-24ರಲ್ಲಿ ಶುಕ್ರವಾರ ಜರುಗಿದ ’ಕನ್ನಡಕ್ಕೆೆ ಜೇವರ್ಗಿಯ ಷಣ್ಮುಖ ಶಿವಯೋಗಿಗಳ ಕೊಡುಗೆ’ ಎಂಬ ವಿಶೇಷ ಉಪನ್ಯಾಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿಿದ್ದರು. ತಮ್ಮ ಗುರು ’ಅಖಂಡೇಶ್ವರ’ ಹೆಸರಿನಲ್ಲಿ ಅಂಕಿತ ನಾಮವನ್ನು ಬಳಸಿದ್ದಾರೆ.
ಒಟ್ಟು 717 ವಚನಗಳು ಮತ್ತು 41 ಜೋಗುಳ ಪದಗಳನ್ನು ರಚಿಸಿದ್ದಾರೆ. ತಮ್ಮ ಗುರು ಅಖಂಡೇಶ್ವರ ಅವರ ಉತ್ತರಾಧಿಕಾರಿಯಾಗಿ, ಜೇವರ್ಗಿ ವಿರಕ್ತ ಮಠದ ಪೀಠಾಧಿಪತಿಯಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ತಪಸ್ಸಿಿನ ಶಕ್ತಿಿಯಿಂದ ಜೇವರ್ಗಿ ಪ್ರದೇಶದಲ್ಲಿ ನೀರುವ ಉದ್ಭವವಾಗುವಂತೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದರು. ಶಾಲೆಯ ಪ್ರಾಾಂಶುಪಾಲ ಜಗನಾಥ ಕಾವಳೆ ಮಾತನಾಡಿ, ಷಣ್ಮುಖ ಶಿವಯೋಗಿಗಳನ್ನು ಕೊನೆಯ ಶ್ರೇೇಷ್ಠ ವಚನಕಾರರೆಂದು ಪರಿಗಣಿಸಲಾಗುತ್ತದೆ.
ಅವರ ವಚನಗಳು ಮತ್ತು ಪದಗಳು ಅನುಭಾವಪೂರ್ಣವಾಗಿ ಮತ್ತು ಭಾವೋದ್ದೀಪಕವಾಗಿವೆ. ಅವರ ಗದ್ದುಗೆ ಜೇವರ್ಗಿಯಲ್ಲಿ ಇದ್ದು, ಜಾತ್ರೆೆ ಜರುಗುತ್ತದೆ. ಅಸಂಖ್ಯಾಾತ ಭಕ್ತರು ಭಾಗವಹಿಸುತ್ತಾಾರೆ. ಷಣ್ಮುಖ ಶಿವಯೋಗಿಗಳ ದರ್ಶನ, ಸುಕ್ಷೇತ್ರ ಭೇಟಿ ಮಾಡುವುದು ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಗೀತಾ ಜಿ., ನಿಂಗಣ್ಣಾಾ ಪೂಜಾರಿ, ಶ್ರೀಶೈಲ ಮೈದರಗಿ, ಅಶ್ವಿಿನಿ ರಾಠೋಡ, ಕೊತಲಪ್ಪ, ಪ್ರದಸ ಅಶೋಕ ಅವಟೆ, ವಾರ್ಡನ್ ಹುಲಿಕಂಠರಾಯ, ಹಾಗೂ ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ