Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೂಲಿಬೆಲೆ ಹೋಬಳಿಯಿಂದ ಪ್ರಚಾರಕ್ಕೆ ಚಾಲನೆ ಶಾಶ್ವತ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಶರತ್ ಬಚ್ಚೇಗೌಡ

ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಏ.18: ಜನ ಸಮಾನ್ಯರಿಗೆ ಸರ್ಕಾರಗಳು ನೀಡದ ಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಲಾಗದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಸುಸಂದರ್ಭ ಒದಗಿ ಬಂದಿದ್ದು, ಈ ಬಾರಿ ಯುವಕರು ಮತ್ತು ಮತದಾರ ಪ್ರಭುಗಳನ್ನು ಬದಲಾವಣೆ ಬಯಸಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ ಎಂದು ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದರು.

ಸೂಲಿಬೆಲೆ ಹೋಬಳಿ ದೇವಮೂಲೆ ತೆನೆಯೂರು ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೋಬಳಿ ಮಟ್ಟದ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆ.ಸಿ.ವ್ಯಾಲಿ ನೀರನ್ನು ಕೋಲಾರಕ್ಕೆ ಹರಿಸಿದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ನಾವು ಹೋರಾಟ ಮಾಡಿ ಹೊಸಕೋಟೆ ತಾಲ್ಲೂಕಿನ ತಾವರೆಕೆರೆ, ಮುಗಬಾಳ, ಅಟ್ಟೂರು ಕೆರೆಗಳಿಗೆ ನೀರು ಬಿಡಿಸುವ ಕೆಲಸ ಮಾಡಿದ್ದೇವೆ. ಅಧಿಕಾರದಲ್ಲಿದ್ದ ಸಚಿವರು ಮೌನವಾಗಿದ್ದರು, ರೈತಪರ ಕಾಳಜಿ ಇಲ್ಲದ ಮೇಲೆ ಅಧಿಕಾರ
ಬಿಡುವುದು ಉತ್ತಮ ಎಂದು ವ್ಯಂಗ್ಯವಾಡಿದರು.

ಸೂಲಿಬೆಲೆ ಹೋಬಳಿ ಹಾಗೂ ನಂದುಗುಡಿ ಹೋಬಳಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಏತನೀರಾವರಿ ಯೋಜನೆಯನ್ನು ಮುಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಅನುಷ್ಟಾನ ಮಾಡಿಕೊಡುವುದು ನಿಶ್ಚಿತ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ ಹೊಸಕೋಟೆ ಕ್ಷೇತ್ರದಲ್ಲಿ ಕಲಹಗಳನ್ನು ಸೃಷ್ಟಿ ಮಾಡುವ ಇತಿಹಾಸ ಅಂತ್ಯವಾಗಬೇಕು ಎಲ್ಲರೂ ಸಹೋದರರಂತೆ ಜೊತೆಗೂಡಿ ಸಾಗುವ ಅವಕಾಶವಾಗಬೇಕು ಈ ಬಾರಿಯ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ ಬಹುಮತ ನೀಡುವ ಮೂಲಕ ಜನಪರ ಹಾಗೂ ಬಡವರ ಪರ ಸರ್ಕಾರ ರಚನೆಯಾಗಲು ಸಹಕಾರ ನೀಡಬೇಕು ಎಂದು ಹೇಳಿದರು.

ತೆನೆಯೂರು,ತಿಮ್ಮಪ್ಪನಹಳ್ಳಿ,ಚಿಕ್ಕಹರಳಗೆರೆ, ದ್ಯಾವಸಂದ್ರ, ಬಾಲೇನಹಳ್ಳಿ, ತಮ್ಮರಸನಹಳ್ಳಿ, ದೊಡ್ಡಹರಳಗೆರೆ, ಶಶಿಮಾಕನಹಳ್ಳಿ, ಟಿ.ಅಗ್ರಹಾರ, ಭುವನಹಳ್ಳಿ, ಬಾವಾಪುರ, ದಿಂಬಹಳ್ಳಿ, ಚನ್ನಿಗಲಾಪುರ, ಗುಳ್ಳಹಳ್ಳಿ, ನಗರೇನಹಳ್ಳಿ, ಚಿಕ್ಕಕೋಲಿಗ ದಲ್ಲಿ ಪ್ರಚಾರ ಕಾರ್ಯಕ್ರಮ ನೆಡೆಯಿತು.

ಬಿಡಿಡಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ತಾ.ಪಂ.ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಯುವ ಮುಖಂಡ ಜಿ.ನಾರಾಯಣಗೌಡ, ಗುಟ್ಟಪ್ಪನವರ ನಾರಾಯಣಸ್ವಾಮಿ, ನಿತೀಷಗೌಡ, ಚಿಕ್ಕಹರಳಗೆರೆ ಮುನೇಗೌಡ, ಜಗದೀಶ್, ಯನಗುಂಟೆ ರಮೇಶ್, ನಗರೇನಹಳ್ಳಿ ನಾಗರಾಜಪ್ಪ, ಶಶಿಮಾಕನಹಳ್ಳಿ ಮುನಿರಾಜು,
ದ್ಯಾವಸಂದ್ರ ವೆಂಕಟೇಗೌಡ, ತಮ್ಮರಸನಹಳ್ಳಿ ಯಾರಬ್, ಅಮ್ಜದ್,
ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ