Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಲಬುರಗಿಯಲ್ಲಿ ಅಧಿವೇಶನ ನಡೆಸಲು ಶಶೀಲ್ ನಮೋಶಿ ಒತ್ತಾಯ

ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.26:
ಹಿಂದುಳಿದಿರುವ ಕಲ್ಯಾಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಿಗಾಗಿ ರಾಜ್ಯ ಸರ್ಕಾರ ಕಲಬುರಗಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಒತ್ತಾಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆೆಗಳ ಬಗೆಹರಿಸುವ ನಿಟ್ಟಿಿನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ನಡೆಸಲಾಗುತ್ತಿಿದೆ. ಆದರೆ,ಅಲ್ಲಿ ನಡೆಯುವ ಅಧಿವೇಶನದಲ್ಲಿ ಕಲ್ಯಾಾಣ ಕರ್ನಾಟಕ ಭಾಗದ ಸಮಸ್ಯೆೆಗಳು ಇತ್ಯರ್ಥಗೊಳ್ಳುತ್ತಿಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಾಣ ಕರ್ನಾಟಕಕ್ಕೆೆ ಹೋಲಿಕೆ ಮಾಡಿದರೆ ಕಿತ್ತೂರು ಕರ್ನಾಟಕ ಅಭಿವೃದ್ಧಿಿ ಕಂಡಿದೆ. ಆದಾಗ್ಯೂ ಕೂಡ ಅಲ್ಲಿನ ಜನಪ್ರತಿನಿಧಿಗಳು ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಅಂಶ ಆಧಾರವಾಗಿಟ್ಟುಕೊಂಡು ಕಿತ್ತೂರು ಕರ್ನಾಟಕಕ್ಕೆೆ ಅಭಿವೃದ್ಧಿಿಗಾಗಿ ಹೆಚ್ಚಿಿನ ಅನುದಾನ ಮತ್ತು ಸೌಲಭ್ಯ ಪಡೆಯುತ್ತಿಿದ್ದಾರೆ ಹಾಗಾಗಿ ರಾಜ್ಯ ಸರ್ಕಾರ ಬರುವ ದಿನಗಳಲ್ಲಿ ಕಲ್ಯಾಾಣ ಕರ್ನಾಟಕದ ಕೇಂದ್ರ ವಿಭಾಗವಾಗಿರುವ ಕಲಬುರಗಿಯಲ್ಲಿಯೇ ಅಧಿವೇಶನ ನಡೆಸಿ ಈ ಭಾಗದ ಸಮಗ್ರ ಅಭಿವೃದ್ಧಿಿಗೆ ಒತ್ತು ನೀಡಬೇಕು ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಸದನ ನಡೆದಾಗ ಈ ಭಾಗದ ಹೆಚ್ಚಿಿನ ಸಮಸ್ಯೆೆಗಳ ಬಗ್ಗೆೆ ಚರ್ಚೆ ಆಗಬೇಕಿತ್ತು, ಆದರೆ, ಆ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹಿಂದುಳಿದ ಪ್ರದೇಶವಾದ ಕಲ್ಯಾಾಣ ಕರ್ನಾಟಕ ಬಗ್ಗೆೆ ಚರ್ಚೆ ಹೆಚ್ಚಿಿನ ಸಮಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಮಟ್ಟದ ನೇಮಕಾತಿಗಳ 371(ಜೆ) ಅಡಿಯಲ್ಲಿ ಸಿಗಬೇಕಾದ ಶೇ.8ರಷ್ಟು ಮೀಸಲಾತಿ ಸರಿಯಾಗಿ ಹಂಚಿಕೆ ಮಾಡುತ್ತಿಿಲ್ಲ. ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಟ್ಟ ಹುದ್ದೆಗಳನ್ನು ಅನ್ಯಾಾಯವಾಗಿ ಬ್ಯಾಾಕಲಾಗ್ ಅಥವಾ ಸಾಮಾನ್ಯ ವರ್ಗಕ್ಕೆೆ ವರ್ಗಾಯಿಸಲಾಗುತ್ತಿಿದೆ. ರೋಸ್ಟರ್ ಪದ್ಧತಿಯನ್ನು ಸಮರ್ಪಕವಾಗಿ ಪಾಲಿಸುತ್ತಿಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದ್ದರು.
371(ಜೆ) ಅಡಿಯಲ್ಲಿ ವಿವಿಧ ನಿಯಮ ಬದಲಾವಣೆಗಾಗಿ ಮತ್ತು ಅವುಗಳನ್ನು ಸಮರ್ಪಕ ಅನುಷ್ಠಾಾನಕ್ಕಾಾಗಿ ಈ ಭಾಗದ ಎಲ್ಲಾ ಶಾಸಕರಿಗೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನಿಯೋಗ ಭೇಟಿಯಾಗಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ ಖರ್ಗೆಯವರು ಮುತುವರ್ಜಿ ವಹಿಸಬೇಕೆಂದು ಒತ್ತಾಾಯಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ