Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಡ್ಲಘಟ್ಟ: ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ನಾಮಪತ್ರ ಅಂಗೀಕಾರ

ಸುದ್ದಿಮೂಲ ವಾರ್ತೆ

ಶಿಡ್ಲಘಟ್ಟ, ಏ.21: ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಭಾರಿ ಜನಸಾಗರದೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರ ನಾಮಪತ್ರ ಅಂಗೀಕಾರವಾಗಿದೆ.

ನಾಮಪತ್ರ ಸಲ್ಲಿಸಿದ ದಿನ ಗುರುವಾರ ಬೆಳಗ್ಗೆ ಸೇವಾಸೌಧ ಬಳಿ ಗೋಪೂಜೆ ಮಾಡಿ, ವೀರಾಪುರದ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸೇವಾಸೌಧದಿಂದ ತಾಲ್ಲೂಕು ಕಚೇರಿವರೆಗೂ ಕಣ್ಣು ಭಾರಿ ಮೆರವಣಿಗೆ, ಹೂವಿನ ಹಾರಗಳು, ಜಯಘೋಷಗಳನ್ನು ಕೂಗಿ, ತಮಟೆ ಬಾರಿಸಿ, ಪಟಾಕಿ ಸಿಡಿಸಿ, ತಮ್ಮನೆಚ್ಚಿನ ನಾಯಕನ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.

ಕೋಲಾರದ ಸಂಸದರಾದ ಎಸ್. ಮುನಿಸ್ವಾಮಿ ಮತ್ತು ಸೀಕಲ್ ರಾಮಚಂದ್ರ ಗೌಡ, ಮಾಜಿ ಶಾಸಕ ಎಂ ರಾಜಣ್ಣ ಅವರಿಗೆ 50 ಅಡಿ ಗಾತ್ರದ ಭಾರಿ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಕೇಸರಿ ಬಾವುಟ ಇತ್ತು. ಎಲ್ಲೆಲ್ಲಿಯೂ ಕಿಕ್ಕಿರಿದ ಜನಸ್ತೋಮ ಕಂಡುಬಂತು.

ಈ ವೇಳೆ ಎಸ್.ಮುನಿಸ್ವಾಮಿ ಮಾತನಾಡಿ, ನೀವೆಲ್ಲ ಸೇರಿದ್ದು ಭಾರಿ ಸಂತಸ ತಂದಿದೆ. ರಾಜಣ್ಣನವರು ಮಾತನಾಡಿ ನನಗೆ ಆಶೀರ್ವಾದ ಮಾಡಿದಂತೆ ರಾಮಚಂದ್ರ ಗೌಡರನ್ನೂ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಆರ್.ಚಂದ್ರು, ಮುಖಂಡರಾದ ನಂದೀಶ್, ಸ್ಕೂಲ್ ದೇವರಾಜ್, ಸುರೇಂದ್ರಗೌಡ, ರಮೇಶ್ ಬಾಯರ್, ಕನಕ ಪ್ರಸಾದ್, ರಜನಿಕಾಂತ್ ಬಾಬು, ಗೋಪಾಲಣ್ಣ, ಮಹಿಳಾ ಮುಖಂಡರಾದ ಮಾಲತಿ ರಾಣಿ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಯ ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ