Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ ಬಜೆಟ್ ಕೊಪ್ಪಳ ಜಿಲ್ಲೆಗೆ ನಿರಾಶಾದಾಯಕ

ಸುದ್ದಿಮೂಲವಾರ್ತೆ

ಕೊಪ್ಪಳ ಜು 07: ಸಿದ್ದರಾಮಯ್ಯ ನೇತ್ರತ್ವದ ಈಗಿನ ಕಾಂಗ್ರೆಸ್ ಸರಕಾರದಲ್ಲಿ ಇಂದು ಮಂಡಿಸಿದ ಬಜೆಟ್ ನಲ್ಲಿ ಜನಪದ‌‌ಲೋಕ ಸ್ಥಾಪನೆ ಹೊರತು ಪಡಿಸಿ ಯಾವುದೇ ಹೊಸ ಯೋಜನೆ ಜಾರಿಯಾಗಿಲ್ಲ. ಜಿಲ್ಲೆಯ‌‌ ಮಟ್ಟಿಗೆ ಇಂದಿನ ರಾಜ್ಯ ಸರಕಾರದ ಬಜೆಟ್ ನಿರಾಶಾದಾಯಕವಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರಕಾರದಲ್ಲಿ ಘೋಷಿತವಾದ ಯೋಜನೆಗಳ‌ ಯಾವುದೇ ಪ್ರಸ್ತಾಪ ವಿಲ್ಲ. ಹಿಂದಿನ‌ ಸರಕಾರದಲ್ಲಿ ಅಂಜನಾದ್ರಿ ಅಭಿವೃದ್ದಿಗಾಗಿ ಒಟ್ಟು 121 ಕೋಟಿ ರೂಪಾಯಿಗಳಿಗೆ ಘೋಷಣೆ ಮಾಡಿದ್ದರು. ಅದರಲ್ಲಿ 21 ಕೋಟಿ ರೂಪಾಯಿ ಕಾಮಗಾರಿಗಳಿಗೆ ಹಿಂದಿನ ಸರಕಾರ ಚಾಲನೆ ನೀಡಿದೆ. ಆದರೆ ಈ ಸರಕಾರದಲ್ಲಿ ಅಂಜನಾದ್ರಿ ಅಭಿವೃದ್ದಿಯ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಕನಕಗಿರಿ ಬಳಿ ತೋಟಗಾರಿಕೆ ಪಾರ್ಕ್ ಮಾಡುವ ಯೋಜನೆ ಇತ್ತು‌‌. ಈ ಯೋಜನೆಗೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದೇ ಹಿಂದಿನ ಸರಕಾರ ನವಲಿ ಜಲಾಶಯಕ್ಕೆ 1000 ಕೋಟಿ ರೂಪಾಯಿ ನೀಡುವ ಘೋಷಣೆ ಮಾಡಿದ್ದರು. ಇಂದಿನ ಬಜೆಟ್ಟಿನಲ್ಲಿ ಈ ಕುರಿತು ಆಂಧ್ರ, ತೆಲಂಗಾಣ ಸರಕಾರಗಳೊಂದಿಗೆ ಮಾತುಕತೆ ನಡೆಸಿ ಯೋಜನೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಕೊಪ್ಪಳ ಬಳಿ ವಿಮಾನ ನಿಲ್ದಾಣ ಭೂ ಸ್ವಾದೀನಕ್ಕೆ ಹಿಂದಿನ ಸರಕಾರ ಹಣ ನೀಡುವ ಭರವಸೆ ನೀಡಿದ್ದರು. ಈ ಸರಕಾರದಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ. ಇದರಿಂದಾಗಿ ಕೊಪ್ಪಳ ವಿಮಾನ ನಿಲ್ದಾಣ ಕನಸಿನ‌‌ ಮಾತು ಎನ್ನಲಾಗುತ್ತಿದೆ.

ಕೊಪ್ಪಳದಲ್ಲಿ ಸುಪರಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಹಿಂದೆ ಹೇಳಿತ್ತು. ಈಗಿನ ಸರಕಾರದಲ್ಲಿ ಈ ಬಗ್ಗೆ ಚಕಾರವೆತ್ತಿಲ್ಲ. ಈಗ ಕಿಮ್ಸ್ ಆಸ್ಪತ್ರೆಯ 450 ಹಾಸುಗೆಯ ಮುಂದುವರಿದ ಕಾಮಗಾರಿಗಳ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ.

ಕೃಷ್ಣಾ ಬಿ ಸ್ಕಿಂ ಹಾಗು ತುಂಗಭದ್ರಾ ಜಲಾಶಯದಿಂದ ಕೆರೆ ನೀರು ತುಂಬಿಸುವ ಯೋಜನೆಗೆ ಹಣ ನೀಡಿದೆ. ಇದು ಸಹ ಆನ್ ಗೋಯಿಂಗ್ ವರ್ಕ ಆಗಿದೆ.

ನೆನೆಗುದಿಗೆ ಬಿದ್ದಿರುವ ಸಿಂಗಟಾಲೂರು ಏತ ನೀರಾವರಿಯಿಂದ ಕೊಪ್ಪಳ ಜಿಲ್ಲೆಗೆ ನೀರಾವರಿಗಾಗಿ ಮಧ್ಯಪ್ರದೇಶ ಮಾದರಿ ಯೋಜನೆ ರೂಪಿಸಲಾಗುವುದು ಎಂದು ಬೊಮ್ಮಾಯಿ ಸರಕಾರ ಹೇಳಿತ್ತು. ಇದು ಕೇವಲ ಘೋಷಣೆ ಮಾತ್ರವಾಗಿದೆ. ಈ ಸರಕಾರದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಗ್ಗೆ ಪ್ರಸ್ತಾಪವಿಲ್ಲ. ಇದರಿಂದ ದಶಕಗಳಿಂದ ನೀರಾವರಿ ಕನಸು ಕಂಡಿರುವ ಕೊಪ್ಪಳ ಹಾಗು ಗದಗ ಜಿಲ್ಲೆಯ ರೈತರಿಗೆ ನಿರಾಸೆ ಉಂಟಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತವರು ಜಿಲ್ಲೆಯಲ್ಲಿ ಜನಪದ‌‌ ಲೋಕ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಜಿಲ್ಲೆಯ ಮಟ್ಟಿಗೆ ಸಿದ್ದರಾಮಯ್ಯ ಬಜೆಟ್ ಸಂಪೂರ್ಣವಾಗಿ ನಿರಾಸೆ ಮೂಡಿಸಿದೆ. ಹಲವು ಯೋಜನೆಗಳ‌ ಕನಸು ಕಂಡಿದ್ದ ಜನತೆಗೆ ಸಿದ್ದು ನಿರಾಸೆ ಮೂಡಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ