Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜಿಕ ಯಾತನೆಗಳು ಕಥೆಗಳಲ್ಲಿ ಅನಾವರಣಗೊಂಡಿವೆ-ಬೇವಿನಗಿಡದ

ಸುದ್ದಿಮೂಲವಾರ್ತೆ

ಕೊಪ್ಪಳ ಸೆ 09; ಸಮಾಜದಲ್ಲಿ ನೋವು, ಸಮಾಜಿಕ ಯಾತನೆಗಳು ಕಥೆಗಾರನ ಕಥೆಗಳಲ್ಲಿ ಅನಾವರಣಗೊಳ್ಳುತ್ತಿವೆ ಎಂದು ಕಥೆಗಾರ ಬಸು ಬೇವಿನಗಿಡದ ಹೇಳಿದರು.

ಅವರು ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಅಶೋಕ ಓಜನಳ್ಳಿಯವರ ದೇವರ ಡೇಟ್ ಆಪ್ ಬರ್ತ್ ಎಂಬ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕಥೆಗಳ ಕುರಿತು ಮಾತನಾಡಿದರು. ಬದುಕಿನ ಯಾತನೆಗಳು, ಕರಾಳ ಸತ್ಯಗಳು, ಸಾಮಾಜಿಕ ನಿರ್ದಯತೆ, ಕಾರುಣ್ಯ, ನಿರಾಶೆ ಹೀಗೆ ಎಲ್ಲವನ್ನೂ ಒಳಗೊಂಡ ಅಂಶಗಳಿವೆ. ಈ ಕಥೆಗಳಲ್ಲಿ ಬದುಕಿನ ಕಥನ ಅನಾವರಣಗೊಂಡಿದೆ ಎಂದರು.

‘ಓಜನಹಳ್ಳಿ ಅವರ ಕಥೆಗಳು ವಾಸ್ತವತೆ ತೆರೆದಿಡುತ್ತಿವೆ. ಒಪ್ಪಿಕೊಳ್ಳಲಾಗದ ಕರಾಳ ಸತ್ಯಗಳು ಇವೆ. ಇವುಗಳಿಂದ ಮನುಷ್ಯ ಮನಸ್ಸನ್ನು ಎಷ್ಟು ಕಠಿಣ ಮಾಡಿಕೊಳ್ಳಬಲ್ಲ ಎನ್ನುವುದು ಗೊತ್ತಾಗುತ್ತದೆ’ ಎಂದರು.

‘ಹೊಸ ತಲೆಮಾರಿನ ಕಥೆಗಾರರು ಭದ್ರರಾಗಿ ಬೆಳೆಯಲು ಸುಭದ್ರ ಬುನಾದಿ ಹಾಕಬೇಕು. ಕಥೆಗಾರ ಭವಿಷ್ಯದ ಸತ್ಯವನ್ನು ಹೇಳುವಂತಿರಬೇಕು. ಕಥೆಗಳು ಚಲಿಸುವ ಗುಣ ಹೊಂದಿರಬೇಕು. ಬದುಕಿನ ತವಕ, ತಲ್ಲಣ, ಕ್ಷೋಭೆಗಳನ್ನು ವ್ಯಕ್ತಪಡಿಸಬೇಕು. ದೇವರ ಬಗ್ಗೆ ಮನುಷ್ಯನ ನಡುವೆ ಇರುವ ಮನಸ್ಸುಗಳ ಒಡಕುತನವನ್ನು ಕಥಾ ಹಂದರ ಒತ್ತಿ ಹೇಳುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ ‘ಅಖಂಡ ರಾಯಚೂರು ಜಿಲ್ಲೆಯ ಕಥೆಗಾರರು ಕಥೆ ಕಟ್ಟುವ ಶೈಲಿ ತೀರಾ ವಿಭಿನ್ನ. ಇವು ಓದುಗರಿಗೂ ಆಪ್ತವೆನಿಸುತ್ತವೆ. ಓಜಿನಹಳ್ಳಿ ಅವರದ್ದು ಕಿರುಗತೆಗಳು ಇರುವುದರಿಂದ ಓದುಗರಿಗೆ ಬೇಗ ಆಕರ್ಷಣೆಯಾಗುತ್ತವೆ’ ಎಂದರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ‘ಅಶೋಕ ಅವರ ಕಥೆಗಳು ವಿಶಿಷ್ಟ ಶೈಲಿ ಒಳಗೊಂಡಿದೆ. ಇಲ್ಲಿ ಕಥೆಯ ಗಾತ್ರಕ್ಕಿಂತ ಆಶಯವೇ ಮುಖ್ಯವಾಗುತ್ತದೆ. ಆದ್ದರಿಂದ ಇಂದಿನ ಲೇಖಕರು ವಡ್ಡಾರಾಧನೆಯಂಥ ಕಥೆಗಳನ್ನು ಓದಬೇಕು. ಕಥೆಗಳು ತುಳಿತಕ್ಕೊಳಾಗದವರ ಧ್ವನಿಯಾಗಿವೆ’ ಎಂದು ಹೇಳಿದರು.

ಈರಪ್ಪ ಬಿಜಲಿ, ಅನ್ನಪೂರ್ಣ ಪದ್ಮಸಾಲಿ, ಕಥೆಗಾರ ಅಶೋಕ ಓಜಿನಹಳ್ಳಿ, ಸಾಹಿತಿಗಳಾದ ಮಹೇಶ ಬಳ್ಳಾರಿ, ಮಹಾಂತೇಶ ಮಲ್ಲನಗೌಡರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ