ಸುದ್ದಿಮೂಲ ವಾರ್ತೆ ಮಾನ್ವಿ, ನ.29:
ಕರ್ನಾಟಕದಲ್ಲಿ ದಿನೇದಿನೇ ಹೆಚ್ಚುತ್ತಿಿರುವ ಸೈಬರ್ ವಂಚನೆ ಮತ್ತು ಡಿಜಿಟಲ್ ಅಪರಾಧ ತಡೆಗೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾನ್ವಿಿಯ ಕರ್ನಾಟಕ ಸಾಲಿಡಾರಿಟಿ ಯೂಥ್ ಮೂಮೆಂಟ್ ಪದಾಧಿಕಾರಿಗಳು ಶನಿವಾರ ತಹಸೀಲ್ದಾಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸೈಬರ್ ವಂಚನೆಯಿಂದ ಸಾಮಾನ್ಯ ನಾಗರಿಕರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕ ಹಾನಿಗೆ ಒಳಗಾಗುತ್ತಿಿದ್ದಾರೆ. ಕಾರಣ ಈ ಹಿನ್ನೆೆಲೆಯಲ್ಲಿ ಡಿಸೆಂಬರ್ 8 ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಸೈಬರ್ ವಂಚನೆ ವಿಷಯವನ್ನು ಮುಖ್ಯ ಚರ್ಚಾ ವಿಷಯವಾಗಿ ಸೇರಿಸಿ ಕಠಿಣ ಹಾಗೂ ಸ್ಪಷ್ಟ ನೀತಿ ರೂಪಿಸಬೇಕು, ವಂಚನೆಗೆ ಒಳಗಾದ ನಾಗರಿಕರ ಹಣದ ಭದ್ರತೆಗೆ ಸರ್ಕಾರವೇ ಖಾತರಿ ನೀಡುವ ರಕ್ಷಣಾ ಕ್ರಮಗಳನ್ನು ರೂಪಿಸಬೇಕು, ರಾಜ್ಯ ಮಟ್ಟದ ಸ್ವತಂತ್ರ ಸೈಬರ್ ಸಹಾಯವಾಣಿ ಸಂಖ್ಯೆೆಯನ್ನು ತಕ್ಷಣ ಸ್ಥಾಾಪಿಸಬೇಕು. ಯುವಕರು ಮತ್ತು ನಾಗರಿಕರಿಗೆ ಸೈಬರ್ ಸುರಕ್ಷತೆ, ಹ್ಯಾಾಕಿಂಗ್ ತಡೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಾಪಕವಾಗಿ ಜಾರಿಗೆ ತರಬೇಕು, ಕರ್ನಾಟಕ ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್ ಸಲ್ಲಿಸಿರುವ ತಾಂತ್ರಿಿಕ ಶಿಾರಸ್ಸುಗಳು ಮತ್ತು ನೀತಿ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನುಷ್ಠಾಾನಗೊಳಿಸಬೇಕು ಎಂದು ಒತ್ತಾಾಯಿಸಿ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್ ಮಾನ್ವಿಿ ತಾಲೂಕಾಧ್ಯಕ್ಷ ನಾಸೀರ್ ಅಲಿ, ಕಾರ್ಯದರ್ಶಿ ಮಹಮ್ಮದ್ ಹಾರೂನ್, ಖಜಾಂಚಿ ಗೂರ್ ಖಾನ್, ಪದಾಧಿಕಾರಿಗಳಾದ ಮೊಹಮ್ಮದ್ ಮುಸಾ, ಕೆ.ಎಂ.ಬಾಷಾ, ಶೇಖ್ ಇಸಾಕ್, ಮಹಮ್ಮದ್ ಸೆ್‌ೈ ಹಾಗೂ ಕಾರ್ಯಕರ್ತರು ಉಪಸ್ಥಿಿತರಿದ್ದರು.