Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾರಿವಾಟ ಗುಡ್ಡ ಶ್ರೀ ಆಂಜನೇಯಸ್ವಾಮಿಗೆ ಜೀರ್ಣೋದ್ಧಾರಕ್ಕೆ ವಿಶೇಷ ಪೂಜೆ

ಸುದ್ದಿಮೂಲ ವಾರ್ತೆ

ದೇವನಹಳ್ಳಿ, ಆ.26: ಪಟ್ಟಣದ ಹೊರ ವಲಯದಲ್ಲಿರುವ ಪಾರಿವಾಟ ಗುಡ್ಡದಲ್ಲಿರುವ ಆಂಜಿನೇಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಶ್ರಾವಣ ಮಾಸದ ಎರಡನೇ ಶನಿವಾರ ಸಮಿತಿಯ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ, ದೇಗುಲದ ನೀಲಿ ನಕ್ಷೆ ಬಿಡುಗಡೆ ಮಾಡಿದರು.

ಸಮಿತಿಯ ಮುಖಂಡ ಎಲ್‌ಐಸಿ ಮುನಿರಾಜು ಮಾತನಾಡಿ, 'ಸತತ 25 ವರ್ಷಗಳ ಹೋರಾಟದ ಫಲವಾಗಿ ಭೂಗಳ್ಳರ ಪಾಲಾಗಿದ್ದ ದೇಗುಲವನ್ನು ಉಳಿಸಿಕೊಂಡಿದ್ದೇವೆ. ಅಪಾರ ಭಕ್ತರನ್ನು ಹೊಂದಿರುವ ಪಾರಿವಾಟ ಗುಡ್ಡ ಆಂಜಿನೇಯ ಸ್ವಾಮಿಯ ಜೀರ್ಣೋದ್ಧಾರ ಮಾಡಲು ಸಮಿತಿ ನಿರ್ಧಾರಿಸಿದ್ದು, ಅಂದಾಜು 1 ಕೋಟಿ ವೆಚ್ಚದಲ್ಲಿ ನೂತನ ದೇಗುಲ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಭಕ್ತಾಧಿಗಳ ಸಹಾಯ ಹಸ್ತ ಇದಕ್ಕೆ ಅಗತ್ಯವಿದ್ದು, ದೇಗುಲ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡಬೇಕು' ಎಂದು ಮನವಿ ಮಾಡಿದರು.

ವರ್ಷಕೊಮ್ಮೆ ಕಡಳೆಕಾಯಿ ಪರಿಷೆ ನಡೆಯುವ ಈ ಜಾಗದಲ್ಲಿ ದೊಡ್ಡ ಜಾತ್ರಾ ಮಹೋತ್ಸವ ನಡೆಯುತ್ತದೆ. ಗುಡ್ಡದ ಮೇಲೆ ನೆಲೆಸಿರುವ ಆಂಜಿನೇಯಸ್ವಾಮಿ ದೇಗುಲವೂ ಬಂಡೆಗಳ ನಡುವೆ ಕೆತ್ತಲಾದ ಮೂರ್ತಿಯನ್ನು ಅನಾದಿ ಕಾಲದಿಂದಲೂ ಸ್ಥಳೀಯರು ಪೂಜಿಸಿಕೊಂಡು ಬರುತ್ತಿದ್ದಾರೆ. ಭಕ್ತಾಧಿಗಳ ಸಂಘಟಿತರಾಗಿ ದೇಗುಲ ಭೂಮಿಯನ್ನು ರಕ್ಷಿಸಿ, ಲಭ್ಯ ಆರ್ಥಿಕ ಸಂಪನ್ಮೂಲದಿಂದ ಮೆಟ್ಟಿಲುಗಳು, ಸುಣ್ಣ ಬಣ್ಣ ಮಾಡಿ ದೇವರ ಪೂಜೆಸುತ್ತಿದ್ದೇವೆ' ಎಂದರು.

ದೇವನಹಳ್ಳಿಯ ಮಹೇಶ್ ಕುಟುಂಬ ಪ್ರತಿವರ್ಷ ದಂತೆ ಎರಡನೇ ಶನಿವಾರ ಪೂಜೆ ಸಲ್ಲಿಸಿ ಭಕ್ತದಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಇದೇ ವೇಳೆ ದೇವನಹಳ್ಳಿಯ ಮಹೇಶ್‌, ಆವತಿಯ ಲಿಖಿತ್‌, ದಾಸರಹಳ್ಳಿ ಶಿವು, ಆಂಜಿನಪ್ಪ ಸೇರಿದಂತೆ ಇತರರು ಸಮಿತಿಯ ಸದಸ್ಯರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ