Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿದ್ದಿ ಸಂಸ್ಥೆ ಪಾನಮುಕ್ತರ ಅಭಿನಂದನೆ ಕಾರ್ಯಕ್ರಮ ಅ 11 ಕ್ಕೆ

ಸುದ್ದಿಮೂಲವಾರ್ತೆ

ಕೊಪ್ಪಳ,ಅ.9:ಜನಜಾಗೃತಿ ಅಭಿಯಾನದ ಅಡಿಯಲ್ಲಿ ಪಾನಮುಕ್ತರ ಸಮಾವೇಶ, ಗಾಂಧಿಸ್ಮೃತಿ, ಅಭಿನಂದನೆ ಹಾಗು ಪದಗ್ರಹಣ ಕಾರ್ಯಕ್ರಮವು ಅ11 ರಂದು ಬಾಲಾಜಿ ಪಂಕ್ಷನ್ ಹಾಲಿನಲ್ಲಿ ನಡೆಯಲಿದೆ ಎಂದು ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾದ ಗುಪ್ತಾ ಹೇಳಿದರು.

ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಹಳ್ಳಿಗಳಲ್ಲಿ ಕುಡಿತದಿಂದ ಜನರ ಬದುಕು ದುಸ್ತರವಾಗುತ್ತದೆ. ಬಲವಂತದಿಂದ ಬಿಡಸದೆ ಅವರೊಂದಿಗೆ ಮಾತನಾಡಿ ಕುಡಿತ ಬಿಡಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗವಿಮಠ ಹಾಗು ಭಾಗ್ಯನಗರದ ಶಂಕರ ಮಠದ ಸ್ವಾಮೀಜಿಗಳು ಸಾನಿದ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾಡಲಿದ್ದಾರೆ.‌ ಶ್ರೀನಿವಾಸ ಗುಪ್ತಾ ಅಧ್ಯಕ್ಷತೆ ವಹಿಸಲಿದ್ದಾರೆ. ಯೋಜನೆಯ ಸೌಲಭ್ಯ ವಿತರಣೆ ಯನ್ನು ಸಂಸದ ಸಂಗಣ್ಣ ಕರಡಿ ಮಾಡಲಿದ್ದಾರೆ. ಪಾನಮುಕ್ತರಿಗೆ ಅಭಿನಂದನೆಯನ್ನು ಶಾಸಕ ರಾಘವೇಂದ್ರ ಪಾನಗಂಟಿ ಮಾಡಲಿದ್ದಾರೆ.ಜಾಥವನ್ನು ನಳಿನ ಅತುಲ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಮದ್ಯದ ಅಂಗಡಿಗಳನ್ನು ಆರಂಭಿಸಬಾರದು ಈಗಾಗಲೇ ಸಾಕಷ್ಟು ಭಾರಿ ಪತ್ರ ಚಳುವಳಿ ಮಾಡಲಾಗಿದೆ ಎಂದರು.

ಇಲ್ಲಿಯವರೆಗೂ ಒಂದು ಲಕ್ಷ ಮೂವತ್ತು ಸಾವಿರ ಜನರು ಮದ್ಯವರ್ಜನೆ ಮಾಡಲಾಗಿದೆ. ಪ್ರತಿ ತಿಂಗಳು ಮದ್ಯವರ್ಜನೆಗಳ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ಹೇಳಿದರು.

ಪಾನಮುಕ್ತರನ್ನು ಈಶ್ವರ ಪಾರ್ಕಿನಿಂದ ಭಾಗ್ಯನಗರದ ಬಾಲಾಜಿ ಪಂಕ್ಷನ್ ಹಾಲ್ ನವರೆಗೂ ನಡೆಯಲಿದೆ. ಸುಮಾರು 3 ಸಾವಿರ ಜನರಿಂದ ಮನೋರಂಜನೆಯ ಹಾಗು ಮಳೆಗಾಗಿ ದೇವರ ಪ್ರಾರ್ಥನೆ ಮಾಡಲಾಗುತ್ತಿದೆ ಎಂದು ಬಂಗೇರಾ ತಿಳಿಸಿದರು.

ಜಿಲ್ಲೆಯಲ್ಲಿ 210 ಜನ ನಿರ್ಗತಿಕರಿಗೆ ಧನ ಸಹಾಯ ಹಾಗು ನಿವೇಶನ ನೀಡಿ ಮನೆ ಕಟ್ಟಿಸಿಕೊಡಲಾಗುತ್ತಿದೆ. ಪಂಚಾಯತ್ ಯವರ ಸಹಕಾರದಿಂದ ಕುಡಿವ ನೀರಿನ ಘಟಕ ತೆರೆಯಲಾಗಿದೆ. ಅಂಗವಿಕಲರಿಗೆ ವೀಲ್ ಚೇರ್ ಸೇರಿ ಹಲವು ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಕರಾದ ರಾಧ ಕುಲಕುರ್ಣಿ, ತ್ರೀಶೂಲ, ಯೋಜನಾಧಿಕಾರಿಗಳಾದ ರಘರಾಮ,ಜಗದೀಶ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ