Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಸ್ಕಿ : ಹಿಂದೂ ಧರ್ಮದ ರಕ್ಷಣೆಗೆ ಕಂಕಣಬದ್ಧರಾಗಿ - ಶ್ರೀನಿವಾಸ್

ಸುದ್ದಿಮೂಲ ವಾರ್ತೆ ಮಸ್ಕಿ, ಜ.28:
ರಾಷ್ಟ್ರ ಹಿತಕ್ಕಾಾಗಿ ಶ್ರಮಿಸುವುದು ಪ್ರತಿಯೊಬ್ಬರ ಜವಾಬ್ದಾಾರಿಯಾಗಿದ್ದು, ಹಿಂದೂ ಎಂಬ ಭಾವನೆ ಬೆಳೆಸಿಕೊಂಡು ಧರ್ಮ ರಕ್ಷಣೆಗೆ ಕಂಕಣಬದ್ಧರಾಗ ಬೇಕು ಎಂದು ಸಂಸ್ಕಾಾರ ಭಾರತಿ ಪ್ರಾಾಂತ ಸಂಘ ಟನಾ ಕಾರ್ಯದರ್ಶಿ ಶ್ರೀನಿವಾಸ ಹೇಳಿದರು.
ಮಸ್ಕಿಿ ಪಟ್ಟಣದ ತೇರಿನ ಮನೆ ಹತ್ತಿಿರ ಬುಧವಾರ ಶೋಭಾ ಯಾತ್ರೆೆ ಹಾಗೂ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಮಸ್ಕಿಿ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಒಳ ಜಗಳದಿಂದ ಭಾರತಕ್ಕೆೆ ವಿಶ್ವ ಗುರುವಿನ ಪಟ್ಟ ವಂಚಿತವಾಯಿತು. ದೇಶದ ಪ್ರತಿಯೊಬ್ಬ ಹಿಂದೂ ಒಂದಾಗಬೇಕು. ದೇಶ ಮೊದಲು ಎಂಬ ಭಾವನೆ ಬಂದಾಗ ಭಾರತ ವಿಶ್ವ ಗುರುವಿನ ಪಟ್ಟ ಅಲಂಕರಿಸಲಿದೆ. ಭಾರತ ಶ್ರೇೇಷ್ಠವಾದ ಸಂಸ್ಕೃತಿ ಹೊಂದಿದ ರಾಷ್ಟ್ರ ಎಂದರು.
ಹಿಂದೂ ಸಮಾಜದ ಏಕತೆಗಾಗಿ ದೇಶದ ಹಲವೆಡೆ ಸಮ್ಮೇಳನ ಆಯೋಜಿಸಲಾಗುತ್ತಿಿದೆ.ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು ಎಂಬ ಭಾವ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು. ಸ್ವಧರ್ಮದ ಬಗ್ಗೆೆ ಅಭಿಮಾನ ಇರಬೇಕು. ಪರಿಸರ ರಕ್ಷಣೆ, ನೀರಿನ ಮಿತ ಬಳಕೆ, ಸ್ವದೇಶಿ ಭಾಷೆ, ಸ್ವದೇಶಿ ವಸ್ತುಗಳ ಬಳಕೆಯೂ ಹೆಚ್ಚಾಾಗಬೇಕು. ಭಾರತದ ಹಿರಿಮೆ, ಗರಿಮೆ, ಸಂಸ್ಕೃತಿ, ಸಂಸ್ಕಾಾರ ಅಪಾರವಾಗಿದೆ. ನಮ್ಮಲ್ಲಿನ ಹಲವು ವಿಶ್ವವಿದ್ಯಾಾಲಯಗಳು ಜಗತ್ತಿಿಗೆ ಉನ್ನತ ಜ್ಞಾನ ಕೊಟ್ಟಿಿವೆ. ಋಷಿ ಮುನಿಗಳು ಖಗೋಳ ಶಾಸದಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದು, ಅದರ ಸತ್ಯ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ ಎಂದರು.
ಸದಾನಂದ ಶಿವಾಚಾರ್ಯ ಮಾತನಾಡಿ, ಪ್ರಪಂಚಕ್ಕೆೆ ವೈಜ್ಞಾನಿಕ ಉಡುಗೆ, ತೊಡುಗೆ, ಆಹಾರ ಪದ್ಧತಿ ಮೊಟ್ಟ ಮೊದಲಿಗೆ ಕೊಟ್ಟ ಕೀರ್ತಿ ಭಾರತಕ್ಕೆೆ ಸಲ್ಲುತ್ತದೆ. ನಮ್ಮವರು ಹಾಕಿ ಕೊಟ್ಟ ಮೌಲ್ಯಗಳನ್ನು ಕಡೆಗಣಿಸಿ ನಾವೇ ಹಾಳಾಗುತ್ತಿಿದ್ದೇವೆ. ಋಷಿಮುನಿಗಳು, ಹಿರಿಯರು ಕೊಟ್ಟಿಿರುವ ಜ್ಞಾನ ಪಾಲಿಸಬೇಕು ಎಂದು ಹೇಳಿದರು.
ಗಮನಸೆಳೆದ ಭವ್ಯ ಶೋಭಾಯಾತ್ರೆೆ : ಸಮ್ಮೇಳನದ ಅಂಗವಾಗಿ ಭವ್ಯ ಶೋಭಾಯಾತ್ರೆೆ ಜರುಗಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆೆಯಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿ ಭಾರತ್ ಮಾತಾ ಕೀ ಜೈ ಸೇರಿ ದೇಶಭಕ್ತಿಿಯ ಘೋಷಣೆ ಹಾಕಿದರು. ವಿವಿಧ ಕಲಾ ತಂಡಗಳು ವಾದ್ಯ ಮೇಳಗಳು ಸಾರೋಟದಲ್ಲಿ ಭಾರತ ಮಾತೆ ಟ್ರ್ಯಾಾಕ್ಟರ್ ಮೇಲೆ ದೇವರು ಸಂತರು ಶರಣರು ಮಹಾತ್ಮರ ದೇಶದ ಮಹಾನ್ ನಾಯಕರ ಮಕ್ಕಳ ವೇಷ ಭೂಷಣ ನೋಡುಗರನ್ನು ಸೆಳೆದವು.
ಈ ಸಂದರ್ಭದಲ್ಲಿ ಷ. ಬ್ರ.ಮಹಾಂತ ಶಿವಾಚಾರ್ಯ ಸ್ವಾಾಮಿಗಳು ಸಂತೆ ಕಲ್ಲೂರು, ಗೌರವ ಅಧ್ಯಕ್ಷ ಬಸವರಾಜ ಹಾಲ್ದಾಾವರ್,ಮಾಜಿ ಶಾಸಕ ಪ್ರತಾಪ್ ಗೌಡ, ಶರಣಬಸವ ಸೊಪ್ಪಿಿ ಮಠ,ಅಶೋಕ ಠಾಕೂರ್, ಅಪ್ಪಾಾಜಿಗೌಡ, ಅಮರೇಶ ಬ್ಯಾಾಳಿ, ಡಾ.ನಾಗನಗೌಡ, ಡಾ. ಬಸವಲಿಂಗಪ್ಪ ದಿವಟರ್, ಪ್ರಕಾಶ್ ದಾರಿವಾಲ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ