Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀರಿನ ಬಾಕಿಗೆ ಒಂದು ಬಾರಿ ತೀರುವಳಿ ಪ್ರಸ್ತಾವನೆ ಸಲ್ಲಿಸಿ

ಸುದ್ದಿಮೂಲ ವಾರ್ತೆ

ಬೆಂಗಳೂರು, ಆ.31: ನೀರಿನ ತೆರಿಗೆ ಬಾಕಿಯನ್ನು ಕಟ್ಟಲು ಒಂದು ಬಾರಿ ತೀರುವಳಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ವಿಧಾನಸೌದದ ಸಮಿತಿ ಕೊಠಡಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತಂತೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿರುತ್ತಾರೆ.

ನೀರಿನ ತೆರಿಗೆ ಬಾಕಿ ಇಲ್ಲಿವರೆಗೂ ರೂ. 200 ಕೋಟಿಗಳು ಇದ್ದು, ಇದು ಅಸಲು ಬಡ್ಡಿ ಸೇರಿದಂತೆ ಇರುತ್ತದೆ. ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದವರೇ ಬಾಕಿ ಉಳಿಸಿ ಕೊಂಡಿರುವುದರಿಂದ ಬಡ್ಡಿಯನ್ನು ಮನ್ನಾ ಮಾಡಿ ಅಸಲನ್ನು ಕಟ್ಟುವುದಕ್ಕೆ ಸರ್ಕಾರ ಅನುಮತಿ ನೀಡುವ ಚಿಂತನೆ ನಡೆಸಿದ್ದು, ಇದಕ್ಕಾಗಿ ಪಾಲಿಕೆ ವತಿಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುತ್ತಾರೆ.

ಇದಲ್ಲದೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಇರುವ ವಾಹನಗಳ ವಾರ್ಷಿಕ ದುರಸ್ಥಿ ಮಾಡಲು ಕಳೆದ 5 ವರ್ಷಗಳಿಂದ ಟೆಂಡರ್ ಕರೆಯದೆ ಒಬ್ಬರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಟೆಂಡರ್ ಕರೆಯದೆ ಏಕೆ ನೀಡುತ್ತಿದ್ದೀರಿ ಎಂದು ಸಚಿವ ಬೈರತಿ ಸುರೇಶ ರವರು ಪ್ರಶ್ನಿಸಿದರು.

ಟೆಂಡರ್ ಕರೆಯದೆ ಏಕ ವ್ಯಕ್ತಿಗೆ ನೀಡಿರುವುದು ಲೋಪವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಮೈಸೂರು ನಗರದಲ್ಲಿ ಎಲ್ಲಿ ನೋಡಿದರು ಬೃಹದಾಕರದ ಜಾಹೀರಾತು ಫಲಕಗಳು ಕಾಣುತ್ತವೆ ಹೀಗಿದ್ದು, ಆದಾಯದ ಅಂದಾಜನ್ನು ನೀವೆ ನಿರ್ಧಾರಿಸುವುದು ಸರಿಯಲ್ಲ. ಇದನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಲಕ್ಷ 27 ಸಾವಿರದ 893 ಆಸ್ತಿಗಳಿದ್ದು, ಇವುಗಳಿಗೆ ಸರಿಯದ ಕರ ನಿರ್ಧಾರವಾಗಬೇಕು. ಪ್ರಸಕ್ತ ಸಾಲಿನಲ್ಲಿ ತಾವು ಹಾಕಿಕೊಂಡಿರುವ ಬೇಡಿಕೆ ರೂ. 162 ಕೋಟಿಗಳಿದ್ದು, ನಿಯಮಾನುಸಾರ ತೆರಿಗೆ ನಿರ್ಧಾರಣೆ ಮತ್ತು ವಸೂಲಾತಿ ಮಾಡಿದರೆ ಅದು ರೂ. 180 ಕೋಟಿ ದಾಟ್ಟುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಗೆ ಎಲ್ಲಾ ವಲಯದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11 ಇಂದಿರಾ ಕ್ಯಾಂಟಿನ್ ಇದ್ದು, ಮತ್ತೆ 2 ಅನ್ನು ಕಟ್ಟಲು ಸರ್ಕಾರ ಅನುಮತಿ ನೀಡಲು ಅಧಿಕಾರಿಗಳು ಕೇಳಿದಾಗ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುತ್ತದೆ. ಸರ್ಕಾರ ಬಡವರ ಪರವಾಗಿದ್ದು, ಇಂದಿರಾ ಕ್ಯಾಂಟಿನ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಬೈರತಿ ಸುರೇಶ್ ರವರು ಸೂಚಿಸಿದರು.

ಸಾರ್ವಜನಿಕರ ಅಹಾವಾಲುಗಳು, ಕುಂದುಕೊರತೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಇ-ಆಫೀಸ್ ಅದಷ್ಟು ಬೇಗ ಅನುಷ್ಟಾನಕ್ಕೆ ತರಬೇಕು. ಇ-ಆಫೀಸ್ ಬಂದು ಇಷ್ಟು ವರ್ಷವಾದರು ಇದನ್ನ ಏಕೆ ಅಳವಡಿಸಿಲ್ಲವೆಂದು ಪ್ರಶ್ನಿಸಿದ ಸಚಿವರು 1 ವಾರದೊಳಗೆ ಆಗಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಡಾ. ಎಂ.ಎನ್. ಅಜಯ್ ನಾಗಭೂಷಣ, ಪೌರಾಡಳಿತ ನಿರ್ದೇಶನಾಲಯದ ನಿದೇಶಕರಾದ ಎನ್. ಮಂಜುಶ್ರೀ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಅಶಾದ್ ರೆಹ್ಮಾನ್ ಶರೀಫ್, ಹೆಚ್ಚುವರಿ ಆಯುಕ್ತರಾದ ರೂಪ, ಅಧೀಕ್ಷಕ ಅಭಿಯಂತರರಾದ ಸಿಂಧೂ ಸೇರಿದಂತೆ ಪಾಲಿಕೆ ಹಿರಿಯ ಅಧಿಕಾರಿಗಳ ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ