Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸವಾಲು ಎದುರಿಸಿದಾಗ ಯಶಸ್ಸು - ಯಾಳಗಿ

ಸುದ್ದಿಮೂಲ ವಾರ್ತೆ ಮಾನ್ವಿ, ೆ.03:

ಜೀವನದಲ್ಲಿ ಸೋಲು ಗೆಲುವು ಸಹಜ, ಆದರೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಎದೆಗಾರಿಕೆ ಬೆಳೆಸಿಕೊಂಡಾಗ ಮಾತ್ರ ನಾವು ಈ ಜೀವನ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

ಅವರು ಮಂಗಳವಾರ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಮಠ ವಿದ್ಯಾಾಸಂಸ್ಥೆೆಯ ಸಂಸ್ಥಾಾಪಕ ಅಧ್ಯಕ್ಷರಾಗಿದ್ದ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಾಮಿಗಳವರ ಪುಣ್ಯ ಸ್ಮರಣೆ ನಿಮಿತ್ತ ಎಸ್. ಎಸ್. ಎಲ್. ಸಿ ವಿದ್ಯಾಾರ್ಥಿಗಳಿಗೆ ಆಯೋಜಿಸಿದ್ದ ಪೂರ್ವ ಸಿದ್ಧತಾ ಪರೀಕ್ಷೆಯ ನಂತರ ನಡೆದ ಪ್ರೇೇರಣಾದಾಯಕ ಕಾರ್ಯಕ್ರಮದಲ್ಲಿ ವಿದ್ಯಾಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ವಿದ್ಯಾಾರ್ಥಿಗಳು ಪಠ್ಯಕ್ರಮವನ್ನು ಚೆನ್ನಾಾಗಿ ಅರ್ಥ ಮಾಡಿಕೊಂಡು, ಪ್ರತಿ ವಿಷಯಕ್ಕೂ ನಿರ್ದಿಷ್ಟ ಸಮಯ ನಿಗದಿಪಡಿಸಿಕೊಳ್ಳಬೇಕು. ಪ್ರತಿದಿನವೂ ಓದುವ ಅಭ್ಯಾಾಸ ರೂಢಿಸಿಕೊಳ್ಳಬೇಕು.

ಹಳೆಯ  ಪ್ರಶ್ನೆೆಪತ್ರಿಿಕೆಗಳನ್ನು ಬಿಡಿಸುವುದರಿಂದ ಪರೀಕ್ಷೆಯ ಮಾದರಿ ತಿಳಿಯುತ್ತದೆ ಮತ್ತು ಆತ್ಮವಿಶ್ವಾಾಸ ಹೆಚ್ಚುತ್ತದೆ. ಪರೀಕ್ಷೆಯ ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ವಿದ್ಯಾಾರ್ಥಿಗಳು  ಪೌಷ್ಟಿಿಕ ಆಹಾರ ಸೇವಿಸಿ, ಚೆನ್ನಾಾಗಿ ನಿದ್ದೆ ಮಾಡಬೇಕು. ಆರೋಗ್ಯವಾಗಿದ್ದರೆ ಮಾತ್ರ ಓದಿನ ಮೇಲೆ ಏಕಾಗ್ರತೆ ಬೆಳೆಸಿಕೊಳ್ಳಲು, ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ವಿವಿಧ ಶಾಲೆಗಳ ವಿದ್ಯಾಾರ್ಥಿಗಳಿಗೆ ಕಲ್ಮಠ ಕಾಲೇಜು ವತಿಯಿಂದ ನಡೆಸುತ್ತಿಿರುವ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ  15 ಸಾವಿರ ರೂಪಾಯಿ ಹಾಗೂ ದ್ವಿಿತೀಯ ಬಹುಮಾನ 10 ಸಾವಿರ ರೂಪಾಯಿ ನಗದು ಹಣದೊಂದಿಗೆ ವಿಜೇತ ವಿದ್ಯಾಾರ್ಥಿಗಳಿಗೆ ಸನ್ಮಾಾನಿಸಿ ಗೌರವಿಸುತ್ತಿಿರುವುದು ನಿಜಕ್ಕೂ ಶ್ಲಾಾಘನೀಯ ಎಂದು ಯಾಳಗಿ ಅವರು ಪ್ರಶಂಸಿಸಿದರು.

ಸಂಸ್ಥೆೆಯ ಆಡಳಿತಾಧಿಕಾರಿ ಸಂಗಯ್ಯಸ್ವಾಾಮಿ ಕಾರ್ಯಕ್ರಮ ಉದ್ಘಾಾಟಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಎಸ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಕಲ್ಮಠ ಪ್ರಾಾಥಮಿಕ ಶಾಲೆಯ ಪ್ರಭಾರಿ ಮುಖ್ಯೋೋಪಾಧ್ಯಾಾಯ  ಕೇಮ್ಯಾಾನಾಯಕ ಪ್ರೌೌಢಶಾಲಾ ಮುಖ್ಯೋೋಪಾಧ್ಯಾಾಯ ಪ್ರಭಯ್ಯಸ್ವಾಾಮಿ, ಪದವಿ ಮಹಾವಿದ್ಯಾಾಲಯದ ಪ್ರಾಾಚಾರ್ಯ ಸಿದ್ದನಗೌಡ ಪಾಟೀಲ್ ಭಾಗವಹಿಸಿದ್ದರು.

ವಿದ್ಯಾಾರ್ಥಿನಿ ಮಹೇಶ್ವರಿ ಪ್ರಾಾರ್ಥನಾಗೀತೆ ಹಾಡಿದರು ಎನ್.ಎಸ್.ಎಸ್.ಅಧಿಕಾರಿ ವಿರುಪಣ್ಣ ಪಾಟೀಲ್ ಸ್ವಾಾಗತಿಸಿದರು. ಉಪನ್ಯಾಾಸಕ ಅಯ್ಯಪ್ಪ ವಿಶ್ವಕರ್ಮ ನಿರೂಪಿಸಿದರು. ಉಪನ್ಯಾಾಸಕ ಹನುಮಂತಪ್ಪ ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ