ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಜಾತ್ಯಾಾತೀತ ಜನತಾ ದಳದ ರಾಯಚೂರು ಗ್ರಾಾಮಾಂತರ ರೈತ ಮೋರ್ಚಾ ಅಧ್ಯಕ್ಷರಾಗಿ ಸೂಗೂರಪ್ಪ ಸಾಹುಕಾರ ಅವರಿಗೆ ನೇಮಿಸಿ ಪತ್ರ ನೀಡಲಾಯಿತು.
ಇಂದು ನಗರದ ಗ್ರಾಾಮಾಂತರ ಘಟಕದ ಕಚೇರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ ಹಾಗೂ ರಾಯಚೂರು ಗ್ರಾಾಮಾಂತರ ವಿಧಾನಸಭಾ ಕ್ಷೇತ್ರದ ಮುಖಂಡ ಕೆ.ಸಣ್ಣ ನರಸಿಂಹ ನಾಯಕ ಹಾಗೂ ತಾಲೂಕಾಧ್ಯಕ್ಷ ಡಿ.ಎಂ ನಾಗರಾಜ್ ಗೌಡ ಅವರ ಶಿಾರಸ್ಸಿಿನ ಮೇರೆಗೆ ಸೂಗೂರಪ್ಪ ಸಾಹುಕಾರ ಅವರ ನೇಮಿಸಲಾಗಿದೆ.
ನೂತನ ರೈತ ಮೋರ್ಚಾ ಅಧ್ಯಕ್ಷ ಸೂಗರಪ್ಪ ಸಾಹುಕಾರ ಅವರು ಪಕ್ಷದ ಮುಖಂಡರನ್ನು ಸನ್ಮಾಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ ವಕೀಲ, ಗ್ರಾಾಮಾಂತರ ಕಾರ್ಯಧ್ಯಕ್ಷ ಅಮರೇಶ ಪಾಟೀಲ ಆಶಾಪೂರು ಇತರರಿದ್ದರು.