Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ ಸ್ಟಾರ್‌ ರಜನೀಕಾಂತ್‌

ಸುದ್ದಿಮೂಲ ವಾರ್ತೆ

ಬೆಂಗಳೂರು,ಆ.29: ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ದಿಢೀರ್‌ ಆಗಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗೆ ತೆರೆ ಕಂಡ ಜೈಲರ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಅವರು ಬೆಂಗಳೂರಿನಲ್ಲಿ ತಾವು ಇದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಮೊದಲು ಜಯನಗರದ ಬಸ್ ಡಿಪೋಗೆ ಭೇಟಿ ನೀಡಿ ಬಿಎಂಟಿಸಿ ಸಿಬ್ಬಂದಿ ಜೊತೆ ಕಾಲ ಕಳೆದರು. ಬಳಿಕ ಚಾಮರಾಜಪೇಟೆಯ ರಾಯರ ಮಠಕ್ಕೂ ತೆರಳಿ ದೇವರ ದರ್ಶನ ಪಡೆದರು.

ಜಯನಗರದ ಬಿಎಂಟಿಸಿ ಡಿಪೋಗೆ ಅಚ್ಚರಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇಡೀ ಜಗತ್ತಿನಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ತಮ್ಮ ಡಿಪೋನಲ್ಲಿ ನೋಡಿ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಅಚ್ಚರಿಪಟ್ಟಿದ್ದಾರೆ.

ಜಯನಗರ ಬಿಎಂಟಿಸಿ ಡಿಪೋಗೆ ಬೆಳಗ್ಗೆ 11.30ಕ್ಕೆ ಆಗಮಿಸಿದ ರಜನಿಕಾಂತ್ 11.45 ರವರೆಗೂ ಡಿಪೋದಲ್ಲೇ ಕಾಲ ಕಳೆದಿದ್ದಾರೆ. ಅಲ್ಲಿನ ಸಿಬ್ಬಂದಿ ಮತ್ತು ನೌಕರರ ಜತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ರಜನಿಕಾಂತ್ ಅವರು ತಾವು ಚಿಕ್ಕಂದಿನಲ್ಲಿ ಓಡಾಡಿ, ಆಟ ಆಡಿ ಬೆಳೆದ ಪರಿಸರದಲ್ಲಿರುವ ಸೀತಾಪತಿ ಅಗ್ರಹಾರ ಶ್ರೀ ರಾಘವೇಂದ್ರ ಮಠಕ್ಕೆ ಮಂಗಳವಾರ ಬೆಳಗ್ಗೆ ದಿಢೀರನೆ ಆಗಮಿಸಿ ರಾಯರ ದರ್ಶನ ಪಡೆದರು. ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ರಾಯರಿಗೆ ಪೂಜೆ ಸಲ್ಲಿಸುವ ವೇಳೆ ರಜನಿಕಾಂತ್ ತಮ್ಮ ಡಿಫರೆಂಟ್‌ ಸ್ಟೈಲ್ ಪ್ರದರ್ಶಿಸಿದ್ದಾರೆ. ಮಂಗಳಾರತಿ ತಟ್ಟೆಗೆ ಸಾಮಾನ್ಯವಾಗಿ ಎಲ್ಲರೂ ತಮ್ಮ ಜೇಬಿನಿಂದ ಹಣ ತೆಗೆದು ಕಾಣಿಕೆ ಹಾಕುತ್ತಾರೆ. ಆದರೆ, ರಾಯರ ಮಠದಲ್ಲಿ ರಜನಿಕಾಂತ್ ತಮ್ಮ ಶರ್ಟ್‌ನಲ್ಲಿ ಮಡಿಚಿಟ್ಟ ಹಣವನ್ನು ತೆಗೆದು ಮಂಗಳಾರತಿ ತಟ್ಚೆಗೆ ಹಾಕಿದ್ದಾರೆ. ರಾಯರ ಮಠದಲ್ಲಿ ರಜನಿಕಾಂತ್ ಪೂಜೆ ಸಲ್ಲಿಸಿದ ವಿಡಿಯೋ ಇದೀಗ ವೃರಲ್‌ ಆಗಿದೆ.

ರಜಿನಿಕಾಂತ್ ಅವರನ್ನು ನೋಡಿ ಜಯನಗರ ಡಿಪೋ ಸಿಬ್ಬಂದಿ ಮಾತ್ರ ತುಂಬಾ ಖುಷಿ ಪಟ್ಟಿದ್ದಾರೆ. ಅಲ್ಲದೆ, ಸಿಬ್ಬಂದಿ ಜತೆ ಕ್ಯಾಮೆರಾಗೆ ಪೋಸ್ ಸಹ ನೀಡಿದ್ದಾರೆ. ಸೆಲ್ಫಿಗೆ ಸಹಕಾರ ನೀಡಿದ್ದಾರೆ.

ರಾಯರ ಮಠದ ಆಡಳಿತಾಧಿಕಾರಿ ವೆಂಕಣ್ಣ ಆಚಾರ್ ಅವರು ಇವತ್ತು ರಜನಿಕಾಂತ್ ಅವರು ಇಲ್ಲಿಗೆ ಬರ್ತಾರೆ ಅಂತಾ ಯಾರಿಗೂ ಗೊತ್ತಿರಲಿಲ್ಲ. ಸಡನ್ ಆಗಿ ಬಂದು ರಾಯರ ದರ್ಶನ ಪಡೆದು ಹೋಗಿದ್ದಾರೆ. ಸುಮಾರು 15 ನಿಮಿಷ ರಜನಿಕಾಂತ್ ಅವರು ಮಠದಲ್ಲಿ ಇದ್ದರು. ಒಬ್ಬರೇ ಆಗಮಿಸಿದ್ದು ವಿಶೇಷ ಅರ್ಚನೆ ಮಾಡಿಸಿದ್ದಾರೆ ಎಂದಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ