Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟ್ಯಾಕ್ಸ್ ವಸೂಲಾತಿ ಅಭಿಯಾನಕ್ಕೆೆ ಚಾಲನೆ ‘ತೆರಿಗೆ ಪಾವತಿಸಿ ಅಭಿವೃದ್ಧಿಿಗೆ ಸಹಕರಿಸಿ’

ಸುದ್ದಿಮೂಲ ವಾರ್ತೆ ಮಸ್ಕಿಿ, ಡಿ.11:
ಪ್ರತಿಯೊಬ್ಬರು ತೆರಿಗೆ ಪಾವತಿಸುವ ಮೂಲಕ ಗ್ರಾಾಮೀಣಾಭಿವೃದ್ಧಿಿಗೆ ಸಹಕರಿಸಬೇಕು ಎಂದು ಮಸ್ಕಿಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಸಲಹೆ ನೀಡಿದರು.
ಮಸ್ಕಿಿ ತಾಲೂಕಿನ ಪಾಮನಕಲ್ಲೂರು ಗ್ರಾಾಮದಲ್ಲಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನಕ್ಕೆೆ ಚಾಲನೆ ನೀಡಿ ಮಾತನಾಡಿದರು.
ವಿಕೇಂದೀಕೃತ ಆಡಳಿತ ವ್ಯವಸ್ಥೆೆಯಲ್ಲಿ ಗ್ರಾಾಮ ಪಂಚಾಯತಿಗಳ ಪಾತ್ರ ಮಹತ್ವದ್ದಾಗಿದೆ. ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳು, ಅರಿವು ಕೇಂದ್ರಗಳ ನಿರ್ವಹಣೆ, ಸಮುದಾಯದ ಆರೋಗ್ಯ ಕಾಪಾಡಲು ಕೈಗೊಳ್ಳುವ ಸ್ವಚ್ಛತಾ ಕಾರ್ಯಗಳು ಸೇರಿ ಗ್ರಾಾಮೀಣ ಪ್ರದೇಶದ ಜನರು ಒಂದಲ್ಲ ಒಂದು ಕಾರ್ಯಕ್ಕೆೆ ಗ್ರಾಾಮ ಪಂಚಾಯತಿಗಳನ್ನು ಆಶ್ರಯಿಸುತ್ತಾಾರೆ. ಈ ಹಿನ್ನಲೆಯಲ್ಲಿ ಗ್ರಾಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲಗಳ ಬಳಕೆ ಮೂಲಕ ಸದೃಢವಾಗಿ ಕಾರ್ಯನಿರ್ವಹಿಸುವಂತಾಗಲು ಸ್ಥಳೀಯರ ಸಹಕಾರ ಅಗತ್ಯ. ಹೀಗಾಗಿ, ರಾಯಚೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಪ್ರತಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನ ಏರ್ಪಡಿಸಲಾಗುವುದು. ತಾಲೂಕಿಗೆ ನಿಗದಿಗೊಳಿಸಿದ ಒಂದು ಕೋಟಿ ರೂ. ತೆರಿಗೆ ಸಂಗ್ರಹಕ್ಕೆೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತೆರಿಗೆ ಪಾವತಿಸುವವರಿಗೆ ಗ್ರಾಾಪಂಯಿಂದ ಡಿಜಿಟಲ್ ರಸೀದಿ ವಿತರಿಸುತ್ತಿಿದ್ದು, ಆಸ್ತಿಿಗೆ ಸಂಬಂಧಿಸಿದಂತೆ ಮುಂದೆ ಎದುರಾಗಬಹುದಾದ ತಕಾರರುಗಳಿಗೆ ಸೂಕ್ತ ದಾಖಲೆಯಾಗಲಿದೆ. ಹೀಗಾಗಿ ಪ್ರತಿಯೊಬ್ಬರು ತೆರಿಗೆ ಪಾವತಿಸಿ, ಸರ್ಕಾರದ ಆಶಯ ಈಡೇರಿಸಬೇಕು ಎಂದರು. ತದ ನಂತರ ಅಮೀನಗಡ, ವಟಗಲ್, ಹಾಲಾಪುರ, ತೋರಣದಿನ್ನಿಿ, ಹಿರೇದಿನ್ನಿಿ, ಮಲ್ಲದಗುಡ್ಡ ಗ್ರಾಾಪಂಗೆ ಭೇಟಿ ನೀಡಿ, ತೆರಿಗೆ ವಸೂಲಾತಿ ಅಭಿಯಾನವನ್ನು ಖುದ್ದು ಪರಿಶೀಲಿಸಿದರು.
ಸಹಾಯಕ ನಿರ್ದೇಶಕರಾದ (ಪಂ.ರಾ) ಸೋಮನಗೌಡ ಪಾಟೀಲ್ ಸಂತೆಕಲ್ಲೂರು, ಅಂಕುಶದೊಡ್ಡಿಿ, ಅಡವಿಬಾವಿ (ಮಸ್ಕಿಿ), ಮಾರಲದಿನ್ನಿಿ, ಮೆದಕಿನಾಳ, ಕನ್ನಾಾಳ, ಮಟ್ಟೂರು, ತಲೇಖಾನ್, ಸಹಾಯಕ ನಿರ್ದೇಶಕರಾದ (ಗ್ರಾಾ.ಉ) ಶಿವಾನಂದರಡ್ಡಿಿ ಕೊಳಬಾಳ, ಬಪ್ಪೂೂರು, ಗುಂಡ, ಗುಡದೂರು, ಉದ್ಬಾಾಳ, ಗೌಡನಬಾವಿ ಗ್ರಾಾಪಂಗೆ ತೆರಿಗೆ ವಸೂಲಾತಿ ಅಭಿಯಾನದ ನೋಡಲ್ ಅಧಿಕಾರಿಗಳನ್ನಾಾಗಿ ನಿಯೋಜಿಸಲಾಗಿತ್ತು. ಈ ವೇಳೆ ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು, ಗ್ರಾಾಪಂ ಸಿಬ್ಬಂದಿ ಇದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ