Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಂಗಭದ್ರಾ ನದಿಯಲ್ಲಿ ನೀರು ನಾಯಿಗಳಿಗೆ ಆಪತ್ತು. ಅಭಿಯಾನ ಆರಂಭಿಸಿದ ಅಧಿಕಾರಿ

ಸುದ್ದಿಮೂಲವಾರ್ತೆ
ಕೊಪ್ಪಳ‌ ಜೂ 06: ಜಲಾಶಯ ಕೆಳಭಾಗದ ಹೊಳೆ ಮದ್ಲಾಪುರದಿಂದ ಕಂಪ್ಲಿಯವರೆಗಿನ ಪ್ರದೇಶವನ್ನು ಅಪರೂಪದ ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಸರಕಾರ ಘೋಷಿಸಿದೆ. ಆದರೆ ನೀರು ನಾಯಿಗಳಿಗೆ ಈಗ ಆಪತ್ತು ಬಂದಿದೆ. ನದಿಯಲ್ಲಿಯ ನೀರು ಕಲುಷಿತ, ಮೀನು ಬೇಟೆಗಾರರಿಂದಾಗಿ ಅಪರೂಪದ ಜೀವಿ ನೀರು ನಾಯಿಗಳಿಗೆ ಕುತ್ತು ಬಂದಿದೆ.



ಕೊಪ್ಪಳ ಜಿಲ್ಲೆಯ ಒಂದು ದಡ ಹಾಗು ವಿಜಯನಗರ ಹಾಗು ಬಳ್ಳಾರಿ ಜಿಲ್ಲೆಯ ಇನ್ನೊಂದು ದಡದ ಮಧ್ಯೆದ ನದಿ ಪಾತ್ರದಲ್ಲಿ ವಾಸಿಸುವ ಅಪರೂಪದ ಜೀವಿಗಳು ಹೆಚ್ಚಾಗಿ ವಾಸಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ತುಂಗಭದ್ರಾ ನದಿಯು ಮಲೀನವಾಗುತ್ತಿದೆ. ನದಿಗೆ ಪ್ಲಾಸ್ಟಿಕ್, ಬಟ್ಟೆ , ಇನ್ನಿತರ ವಸ್ತುಗಳನ್ನು ಜನರು ಹಾಕುತ್ತಿದ್ದಾರೆ. ಅದರಲ್ಲಿಯೂ ಪ್ರಸಿದ್ದ ದೇವಸ್ಥಾನಗಳಾದ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನ. ಹಂಪಿ ವಿರುಪಾಕ್ಷ ದೇವಸ್ಥಾನ, ಪುರಂದರ ಮಂಟಪ ಸೇರಿದಂತೆ ದೇವಸ್ಥಾನಕ್ಕೆ ಬರುವ ಭಕ್ತರು ಕಸ ಕಡ್ಡಿ, ಬಟ್ಟೆಗಳನ್ನು ಎಸೆಯುತ್ತಿದ್ದಾರೆ. ಅಲ್ಲದೆ ವಿಜಯನಗರ ಜಿಲ್ಲೆಯ ಗಣಿಗಾರಿಕೆ. ನದಿ ಪಾತ್ರದ‌ ಜಮೀನುಗಳಿಗೆ ಅಧಿಕ ಪ್ರಮಾಣದ ರಸಗೊಬ್ಬರ ಹಾಗು ಕ್ರಿಮಿನಾಶಕ ಬಳಕೆಯಿಂದಾಗಿ ನದಿಯ ನೀರು ಕಲುಷಿತಗೊಂಡಿದೆ ಇದರಿಂದಾಗಿ ತುಂಗಭದ್ರಾ ನದಿಯಲ್ಲಿರುವ ಅಪಾರ ಪ್ರಮಾಣದ ನೀರು ನಾಯಿಗಳು ಸಾವನ್ನಪ್ಪುತ್ತಿವೆ.

ಅನುಪಯುಕ್ತ ವಸ್ತುಗಳಿಂದ ನೀರುನಾಯಿಗಳ ಜೀವಕ್ಕೆ ಕುತ್ತು ಬರುತ್ತಿರುವ ಹಿನ್ನೆಲೆಯಲ್ಲಿ ನೀರುನಾಯಿಗಳನ್ನು ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.ಜಿಲ್ಲಾ ಅರಣ್ಯ ಅಧಿಕಾರಿ ಕಾವ್ಯ ಚರ್ತುವೇದಿಯಿಂದ ಅಭಿಯಾನ ಆರಂಭಿಸಿದ್ದಾರೆ.ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನದಿ ಸ್ವಚ್ಚತೆ ಮಾಡುತ್ತಿದ್ದಾರೆ.

34 ಕಿಲೋಮಿಟರ ನದಿ ಸಂರಕ್ಷಣಾ ಪ್ರದೇಶದಲ್ಲಿ ನೂರಾರು ನೀರು ನಾಯಿಗಳ ವಾಸವಾಗಿವೆ ಎಂಬ ಅಂದಾಜಿದೆ.ನದಿ ಅಪವಿತ್ರತೆಯಿಂದ ನೀರು ನಾಯಿ ಸಂತತಿ ನಾಶವಾಗುವ ಆತಂಕ ಉಂಟಾಗಿದೆ. ಮೇ 31 ನೀರು ನಾಯಿ ದಿನ ಅಂದಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ನದಿ ಸ್ವಚ್ಛತೆ ಮಾಡಿ ನೀರು ನಾಯಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ