Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸರ್ಕಾರ ಎರಡು ಪಟ್ಟು ಬೆಳೆ ಪರಿಹಾರ ಕೊಡಲಿ:ಬಸವರಾಜ ಬೊಮ್ಮಾಾಯಿ ರಾಜ್ಯದಲ್ಲಿ ಎಲ್ಲವೂ ದಾರಿ ತಪ್ಪಿಿದೆ:ಬಸವರಾಜ ಬೊಮ್ಮಾಾಯಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಅ.09:
ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹಕ್ಕೆೆ ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿಿ ಹಾಗೂ ಸಂಸದ ಬಸವರಾಜ ಬೊಮ್ಮಾಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹಕ್ಕೆೆ ಸರಿಯಾದ ಪರಿಹಾರ ನೀಡದಿರುವ ಬಗ್ಗೆೆ ಕೇಳಿದ ಪ್ರಶ್ನೆೆಗೆ ಯಡಿಯೂರಪ್ಪ ಅವರ ಕಾಲದಲ್ಲಿ ಪ್ರವಾಹ ಆದಾಗ 63 ಹೊಸ ಗ್ರಾಾಮಗಳನ್ನೆೆ ಕಟ್ಟಿಿಸಿದರು. ಎರಡನೇ ಸಾರಿ ಪ್ರವಾಹ ಆದಾಗ ಸುಮಾರು ಮೂರು ಲಕ್ಷ ಮನೆಗಳಿಗೆ ಐದು ಲಕ್ಷ ಪರಿಹಾರ ನೀಡಿದ್ದೇವೆ. ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಿದ್ದೇವು. ಒಣ ಬೇಸಾಯಕ್ಕೆೆ 13 ಸಾವಿರ, ನೀರಾವರಿಗೆ 18 ಸಾವಿರ, ತೋಟಗಾರಿಗೆ ಬೆಳೆಗಳಿಗೆ 25 ಸಾವಿರ ರೂ. ಪ್ರತಿ ಎಕರೆಗೆ ಪರಿಹಾರ ನೀಡಿದ್ದೇವು. ಸುಮಾರು ಏಳು ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಎರಡು ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು
ಬಿಗ್‌ಬಾಸ್ ಸಮಸ್ಯೆೆ ಬಗೆಹರಿಸಲಿ :
ಬಿಗ್‌ಬಾಸ್ ವಿಚಾರ ಆ ಸ್ಟುಡಿಯೋ ಮಾಲೀಕರು ಮತ್ತು ಅಧಿಕಾರಿಗಳ ನಡುವೆ ನಡೆಯುವುದು ಯಾವ ಕಾನೂನಿನ ಅಡಿಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕೂ ಕಾನೂನು ಪ್ರಕಾರ ನಡೆಯುವ ಪದ್ದತಿ ಇದೆ. ಈ ಮಧ್ಯೆೆ ಅದಕ್ಕೆೆ ಡಿಸಿಎಂ ಅವರು ಹಿಂದೆ ಆಡಿದ ಮಾತು ಸೇರಿಸಿ ಕೆಲವರು ಹೇಳುತ್ತಿಿದ್ದಾರೆ. ಅದು ಮುಖ್ಯವಲ್ಲ. ಎಲ್ಲೊ ದಾರಿ ತಪ್ಪುುತ್ತಿಿದೆ ಎನಿಸುತ್ತಿಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ವ್ಯಾಾಪ್ತಿಿ ಏನು ಬಂದ್ ಮಾಡುವ ಅಧಿಕಾರ ಇದೆಯಾ ಇಲ್ಲವಾ ನೋಡಬೇಕು. ಒಂದು ಕಡೆ ಮನರಂಜನಾ ಉದ್ಯಮ ನಡೆಯಬೇಕು ಇನ್ನೊೊಂದೆಡೆ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕಿದೆ. ಎಷ್ಟು ದಿನದಿಂದ ಈ ಸಮಸ್ಯೆೆ ಇದೆ. ಈಗ್ಯಾಾಕೆ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆೆ ಮೂಡುತ್ತದೆ. ಇಕೊ ಎಕನಾಮಿಕ್ಸ್ ಅಂತಾರೆ, ಆರ್ಥಿಕತೆಯೂ ನಡೆಯಬೇಕು, ಪರಿಸರವೂ ಉಳಿಯಬೇಕು. ಅದು ಈ ರಾಜ್ಯದಲ್ಲಿ ತಪ್ಪಿಿ ಹೋಗಿದೆ. ರಾಜ್ಯದಲ್ಲಿ ಎಲ್ಲವೂ ದಾರಿ ತಪ್ಪಿಿದೆ. ನಡೆದದ್ದೇ ದಾರಿ ಎನ್ನುವಂತಾಗಿದೆ. ಹಾಗೆ ಆದಾಗಲೇ ಈ ರೀತಿಯ ಘಟನೆಗಳು ನಡೆಯುತ್ತವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಗ್‌ಬಾಸ್ ಕಾರ್ಯಕ್ರಮಕ್ಕೆೆ ಅನುಮತಿ ಕೊಡಿಸಿ ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸಾಬೀತು ಪಡಿಸುವ ಪ್ರಯತ್ನ ಮಾಡಿದ್ದಾಾರೆ ಎಂದು ಹೇಳಿದರು.
ಕಾಂಗ್ರೆೆಸ್ ಹೈಕಮಾಂಡ್‌ಗೆ ಸ್ಪಷ್ಟತೆಯಿಲ್ಲ :
ರಾಜ್ಯ ಕಾಂಗ್ರೆೆಸ್‌ನಲ್ಲಿ ನವೆಂಬರ್ ಕ್ರಾಾಂತಿಯಾಗುವ ಕುರಿತು ಕೇಳಿದ ಪ್ರಶ್ನೆೆಗೆ ಪ್ರತಿಕ್ರಿಿಯಿಸಿದ ಅವರು, ನವೆಂಬರ್‌ನಲ್ಲಿ ಏನಾಗುತ್ತೊೊ ಬಿಡುತ್ತದೊ ಅದು ಕಾಂಗ್ರೆೆಸ್ ಆಂತರಿಕ ವಿಚಾರ. ಆದರೆ, ಒಂದು ವಿಚಾರ ಸ್ಪಷ್ಟ ಆಡಳಿತ ಮಾಡುವುದನ್ನು ಬಿಟ್ಟು ಸಿಎಂ ನಾನು ಮುಂದುವರೆಯುತ್ತೇನೆ ಎನ್ನುವುದು ಕೆಲವರು ಅವರು ಮುಂದುವರೆಯುವುದಿಲ್ಲ ಎನ್ನುವುದು. ಕಾಂಗ್ರೆೆಸ್ ಶಾಸಕರು ಮತ್ತು ಮಂತ್ರಿಿಗಳ ನಡುವೆ ಸಾಕಷ್ಡು ಗೊಂದಲ ಇದೆ. ಅಶಿಸ್ತು ತೋರಿದರೆ ಕ್ರಮ ಕೈಗೊಳ್ಳುತ್ತೇನೆ ಎಂದರೂ ಶಾಸಕರು ಸುಮ್ಮನಿಲ್ಲ. ಹೈಕಮಾಂಡ್ ನವರಿಗೂ ಇದರ ಸ್ಪಷ್ಟತೆ ಇಲ್ಲಾ. ಸಿಎಂ ಸಿದ್ದರಾಮಯ್ಯ ಅವರ ಹಿನ್ನೆೆಲೆ ಮತ್ತು ಇಮೇಜ್ ಬಗ್ಗೆೆ ಯೋಚನೆ ಮಾಡುತ್ತಿಿದ್ದಾರೆ. ಡಿಸಿಎಂ ಶಿವಕುಮಾರ್ ಪಕ್ಷ ಕಟ್ಟಿಿದ್ದಾರೆ ಅವರ ಬಗ್ಗೆೆಯೂ ಯೋಚನೆ ಮಾಡಿ ಯಾವುದೇ ನಿರ್ಧಾರಕ್ಕೆೆ ಬರಲು ಆಗುತ್ತಿಿಲ್ಲ. ಕ್ರಾಾಂತಿ ನವೆಂಬರ್‌ನಲ್ಲಿ ಆಗುತ್ತದೊ ಡಿಸೆಂಬರ್‌ನಲ್ಲಿ ಆಗುತ್ತದೊ ಕಾದು ನೋಡಬೇಕು ಎಂದು ಹೇಳಿದರು.
ಕೇಂದ್ರದ ಅನುದಾನದಿಂದ ಅಭಿವೃದ್ಧಿಿ :
ಕೇಂದ್ರದಿಂದ ರಾಜ್ಯಕ್ಕೆೆ ಅನುದಾನ ತಾರತಮ್ಯವಾಗುತ್ತಿಿದೆ ಎಂದು ಕಾಂಗ್ರೆೆಸ್ ನಾಯಕರು ಮಾಡುತ್ತಿಿರುವ ಆರೋಪದ ಕುರಿತು ಕೇಳಿದ ಪ್ರಶ್ನೆೆಗೆ ನರೇಂದ್ರ ಮೋದಿ ಸರ್ಕಾರ 15 ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಿಗೆ ನೀಡಿದೆ. 15 ನೇ ಹಣಕಾಸು ಯೋಜನೆಯಲ್ಲಿ 14 ನೇ ಹಣಕಾಸು ಆಯೋಗಕ್ಕಿಿಂತ ಒಂದು ಲಕ್ಷ ಕೊಟಿ ಹೆಚ್ಚಿಿಗೆ ಕೊಟ್ಟಿಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆೆ ಯೋಜನೆಗಳಿಗೆ ಐದು ವರ್ಷದಲ್ಲಿ ಒಟ್ಟು 7 ಸಾವಿರ ಕೋಟಿ ರೂ. ಬಂದಿತ್ತು. ಈಗ ಪ್ರತಿ ವರ್ಷ ಏಳು ಸಾವಿರ ಕೋಟಿ ಬರುತ್ತಿಿದೆ. 6 ಸಾವಿರ ಕಿ.ಮೀ. ಹೈವೆ ಆಗುತ್ತಿಿದೆ. ರಾಜ್ಯದಲ್ಲಿ ಕೇಂದ್ರದ ಅನುದಾನದಿಂದಲೇ ಯೋಜನೆಗಳು ನಡೆಯುತ್ತಿಿವೆ. ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಹೇಳಿದರು.
ಸೌಜನ್ಯ ಪ್ರಕರಣದ ಕುರಿತು ಕೇಳಿದ ಪ್ರಶ್ನೆೆಗೆ ಅವಳಿಗೆ ನ್ಯಾಾಯ ಸಿಗಬೇಕು ಅಷ್ಟೆೆ ಎಂದು ಹೇಳಿದರು.
ಸಮೀಕ್ಷೆಗೆ ಮಹತ್ವ ಇಲ್ಲ :
ಸಾಮಾಜಿಕ ಆರ್ಥಿಕ ಸಮೀಕ್ಷೆಯಿಂದ ಮಕ್ಕಳು ಮತ್ತು ಶಿಕ್ಷಕರಿಗೆ ದೊಡ್ಡ ಅನ್ಯಾಾಯವಾಗುತ್ತಿಿದೆ. ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಸಮೀಕ್ಷೆ ನಡೆಯುತ್ತಿಿಲ್ಲ. ಬಹಳಷ್ಟು ಜನ ಮನೆಯಲ್ಲಿ ಇರುವುದಿಲ್ಲ. ಸಹಕಾರ ನೀಡುತ್ತಿಿಲ್ಲ ಹೀಗಾಗಿ ಈ ಸಮೀಕ್ಷೆಗೆ ಯಾವುದೇ ಮಹತ್ವ ಉಳಿದಿಲ್ಲ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ