Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವಸ್ಥಾನದ್ದೆ ರೊಕ್ಕ ಐತಿ. ಬಳಸಿಕೊಳ್ಳಲು ಆಗುತ್ತಿಲ್ಲ

ಸುದ್ದಿಮೂಲವಾರ್ತೆ

ಕೊಪ್ಪಳ ಜು 20:ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ದೇವಸ್ಥಾನಗಳು ಫುಲ್ ರಷ್ ಇವೆ. ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಅವ್ಯವಸ್ಥೆಯಿಂದ ಮುಜಗರಕ್ಕೊಳಗಾಗಬಾರದು ಆದರೆ ಕೊಪ್ಪಳದ ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಮೂಲಭೂತ ಸೌಲಭ್ಯದಿಂದ ಬೇಸರಗೊಳ್ಳುತ್ತಿದ್ದಾರೆ. ಆಡಳಿತ ಮಂಡಳಿ ಅಭಿವೃದ್ದಿಗಾಗಿ ನೀಲನಕ್ಷೆ ಸಿದ್ದಪಡಿಸಿದೆ. ಆದರೆ ಸರಕಾರದ ವೈಫಲ್ಯದಿಂದಾಗಿ ಅಭಿವೃದ್ದಿಯಾಗುತ್ತಿಲ್ಲ.

ಕರ್ನಾಟಕ. ಆಂಧ್ರ. ತೆಲಂಗಾಣ ಹಾಗು ಮಹಾರಾಷ್ಟ್ರದಿಂದ ಲಕ್ಷಾಂತರ ಜನರು ಬರುವ ಆದಿ ಪರಾಶಕ್ತಿ ಶ್ರೀ ಹುಲಿಗೆಮ್ಮ ದೇವಸ್ಥಾನ ಅಭಿವೃದ್ದಿ ಕುರಿತು ದಶಕಗಳಿಂದ ಕೇಳಿ ಬರುತ್ತಿದೆ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮೂಲಭೂತ ಸೌಲಭ್ಯ ಕೊರತೆ ಇದೆ. ರಸ್ತೆಯಲ್ಲಿಯೇ ಮಲಗುವ ಅನಿವಾರ್ಯತೆ ಇದೆ. ಮಂಗಳವಾರ. ಶುಕ್ರವಾರ ಹಾಗು ಪ್ರತಿ ಹುಣ್ಣಿಮೆಯ ದಿನ ದೇವಸ್ಥಾನಕ್ಕೆ ಸರಿಸುಮಾರು ಒಂದು, ಒಂದೂವರೆ ಲಕ್ಷ ಜನ ಭಕ್ತರು ಬರುತ್ತಾರೆ. ಇತ್ತೀಚಿಗೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಬಂದ ಭಕ್ತರು ಇಲ್ಲಿ ಅವ್ಯವಸ್ಥೆಯಿಂದಾಗಿ ಪರದಾಡುವಂತಾಗಿದೆ.

ಈ ಮಧ್ಯೆ ಹತ್ತು ವರ್ಷಗಳ ಹಿಂದೆ ದೇವಸ್ಥಾನದ ಗರ್ಭ ಗುಡಿ ಸೇರಿ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದಿಂದ ನೀಲನಕ್ಷೆ ಸಿದ್ದಪಡಿಸಲಾಗಿದೆ. ಧಾರ್ಮಿಕ ಪರಿಷತ್ತು ಸಹ ಈ ನೀಲನಕ್ಷೆಯನ್ನು ಒಪ್ಪಿಕೊಂಡಿದೆ. ಈಗ ನೀಲನಕ್ಷೆಯ ಪ್ರಕಾರ ಅಭಿವೃದ್ದಿ ಪಡಿಸಬೇಕು. ಆದರೆ ಸರಕಾರದ ನಿರ್ಲಕ್ಷ್ಯದಿಂದಾಗಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ.

ಈಗಾಗಲೇ ಅಲ್ಲಲ್ಲಿ ನೀಲನಕ್ಷೆಯ ಪ್ರಕಾರ ಕಾಮಗಾರಿಗಳು ನಡೆದಿವೆ. ಆದರೆ ನಿಧಾನಗತಿಯಲ್ಲಿ ನಡೆಯುತ್ತಿವೆ. ಇದಕ್ಕೆ ಆಡಳಿತ ಮಂಡಳಿ ಕಾರಣವಲ್ಲ. ಸರಕಾರದ ವೈಫಲ್ಯ ಎನ್ನುತ್ತಾರೆ ಆಡಳಿತ ಮಂಡಳಿಯ ಮಾಜಿ ಸದಸ್ಯ ವಿಜಯಶೆಟ್ಟಿ. ಉದಾಹರಣೆಗೆ ನಾಲ್ಕು ವರ್ಷಗಳ ಹಿಂದೆ ಐದು ಕೋಟಿ ರೂಪಾಯಿ ಯೋಜನೆಗೆ ಟಿಂಡರ ಕರೆಯಲಾಗಿತ್ತು. ಸರಕಾರದಿಂದ ಸಕಾಲಕ್ಕೆ ಪರವಾನಿಗೆ ಸಿಗದೆ ಇರುವುದರಿಂದ ಕಾಮಗಾರಿ ಆರಂಭಿಸಲು ವಿಳಂಭವಾಗಿದೆ. ಇದರಿಂದಾಗಿ ಗುತ್ತಿಗೆದಾರ ಹೆಚ್ಚುವರಿ 60 ಲಕ್ಷ ರೂಪಾಯಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ, ಈ ಸಂದರ್ಭದಲ್ಲಿ ಸರಕಾರ ಮರುಟೆಂಡರಿಗೆ ಆದೇಶ ಹೊರಡಿಸಿದೆ. ಇದೇ ರೀತಿ ಸರಕಾರ ಸಕಾಲಕ್ಕೆ ನಿರ್ಧಾರ ತೆಗೆದುಕೊಳ್ಳದೆ ಇರುವದರಿಂದ ದೇವಸ್ಥಾನ ಅಭಿವೃದ್ದಿಯಾಗುತ್ತಿಲ್ಲ ಎನ್ನುತ್ತಾರೆ ವಿಜಯ ಶೆಟ್ಟಿ.

ಹುಲಿಗೆಮ್ಮ ದೇವಸ್ಥಾನದ ಅಭಿವೃದ್ದಿಗೆ ಸರಕಾರವೇನು ಹಣ ನೀಡಬೇಕಾಗಿಲ್ಲ. ದೇವಸ್ಥಾನದ್ದೆ 54 ಕೋಟಿ ರೂಪಾಯಿ ಹಣ ಫಿಕ್ಸ್ ಡಿಪಾಜಿಟ್ ಇದೆ. ಇನ್ನು ಪ್ರತಿ ವರ್ಷ 10 ಕೋಟಿ ರೂಪಾಯಿ ಹುಂಡಿ ಸಂಗ್ರಹವಾಗುತ್ತಿದೆ. ಈಗ ಶಕ್ತಿ ಯೋಜನೆ ಜಾರಿಯ ನಂತರ ಎರಡು ತಿಂಗಳು 2 ಕೋಟಿ ರೂಪಾಯಿ ಹುಂಡಿ ಸಂಗ್ರಹವಾಗಿದೆ. ನಮ್ಮ ದೇವಸ್ಥಾನದ ಹಣವನ್ನು ಸರಕಾರಕ್ಕೆ ಡಿಪಾಜಿಟ್ ಮಾಡಬಹುದೇ ಹೊರತು ಆಡಳಿತ ಮಂಡಳಿ ಅದನ್ನು ಬಳಸಲು ಸರಕಾರದ ಪರವಾನಿಗೆ ಬೇಕಾಗುತ್ತದೆ. ಸರಕಾರದ ನಿರ್ಲಕ್ಚ್ಯದಿಂದಾಗಿ ಹುಲಿಗೆಮ್ಮ ದೇವಸ್ಥಾನ ಅಭಿವೃದ್ದಿಗೆ ಹಿನ್ನಡೆಯಾಗಿದೆ.

ಈ ಬಗ್ಗೆ ಶ್ರೀಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿಯನ್ನು ಕೇಳಿದರೆ ಸರಕಾರಕ್ಕೆ ಅಭಿವೃದ್ದಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಪರವಾನಿಗೆ ನೀಡುವ ಹಂತದಲ್ಲಿದೆ. ಅಭಿವೃದ್ದಿ ಕಾರ್ಯಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ