Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆರೆಯಲ್ಲಿ ಈಜಲು ಹೋದ ಬಾಲಕನ ದಾರುಣ ಸಾವು

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.19:
ಕೆರೆಯಲ್ಲಿ ಈಜಲು ಹೋಗಿದ್ದ 10 ವರ್ಷದ ಬಾಲಕನೊಬ್ಬ ಗುಂಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಿ ತಾಲೂಕಿನ ರಾಗಿಮಸಲವಾಡ ಗ್ರಾಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಿದ್ಧಾಾರ್ಥ (10) ಎಂದು ಗುರುತಿಸಲಾಗಿದ್ದು, ಸ್ಥಳೀಯ ಭಾಗಮ್ಯ ಹಾಗೂ ಹನುಮಂತಪ್ಪ ದಂಪತಿಯ ಪ ಪುತ್ರನಾಗಿದ್ದಾನೆ.
ನಿನ್ನೆೆ ಸಾಯಂಕಾಲದ ವೇಳೆಯಲ್ಲಿ ಸಿದ್ಧಾಾರ್ಥ ಸೇರಿದಂತೆ ಮೂವರು ಬಾಲಕರು ಗ್ರಾಾಮದ ಗೋ ಕಟ್ಟೆೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆರೆಯೊಳಗಿನ ಆಳವಾದ ಗುಂಡಿಯಲ್ಲಿ ಸಿಲುಕಿದ ಸಿದ್ಧಾಾರ್ಥ ನೀರಿನಲ್ಲಿ ಮುಳುಗಿದ್ದಾನೆ. ಉಳಿದ ಇಬ್ಬರು ಬಾಲಕರು ಅದೃಷ್ಟವಶಾತ್ ಪ್ರಾಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿಿದ್ದಂತೆ ಗ್ರಾಾಮಸ್ಥರು ಸ್ಥಳಕ್ಕೆೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಬಳಿಕ ಅಗ್ನಿಿಶಾಮಕ ಸಿಬ್ಬಂದಿ ಹಾಗೂ ನುರಿತ ಈಜುಪಟುಗಳ ಸಹಾಯದಿಂದ ಬಾಲಕನಿಗಾಗಿ ಶೋಧ ನಡೆಸಲಾಯಿತು. ಕೆರೆಯ ಆಳ ಹೆಚ್ಚಿಿದ್ದರಿಂದ ಶೋಧ ಕಾರ್ಯಕ್ಕೆೆ ಅಡಚಣೆ ಉಂಟಾಗಿತ್ತು. ಇದರಿಂದ ಗ್ರಾಾಮಸ್ಥರು ಜೆಸಿಬಿ ಮೂಲಕ ಗೋ ಕಟ್ಟೆೆಯ ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದರು.
ಸೋಮವಾರ ಬೆಳಗಿನ ಜಾವ ಶೋಧ ಕಾರ್ಯದ ವೇಳೆ ಬಾಲಕ ಸಿದ್ಧಾಾರ್ಥನ ಮೃತದೇಹ ಪತ್ತೆೆಯಾಯಿತು. ಏಕೈಕ ಗಂಡು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿಿದ್ದು, ಗ್ರಾಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಹರಪನಹಳ್ಳಿಿ ತಾಲೂಕಿನ ಹಲವಾಗಿಲು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೆಲಗಿ ಪ್ರಾಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆೆ ರವಾನೆ ಮಾಡಲಾಗಿದೆ. ಈ ಸಂಬಂಧ ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿಿದೆ. ಆಗ್ನಿಿ ಶಾಮಕ ಠಾಣಾಧಿಕಾರಿ ಕೆ.ಚಂದ್ರಶೇಖರ್, ಎ.ಬಸವರಾಜ್, ಆರ್.ಶ್ರೀನಿವಾಸ, ಶಿವರಾಜ್, ರಫೀಕ್ ಸಿಧ್ದಾಾರ್ಥ ಮೃತ ದೇಹದ ಕಾರ್ಯಚರಣೆಯಲ್ಲಿ ಬಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ