Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರಿನಲ್ಲಿ ಪಕ್ಕದ ಮನೆಯವರಿಂದಲೇ  ಕಳ್ಳತನ 

ಸುದ್ದಿಮೂಲ ವಾರ್ತೆ


ಮೈಸೂರು, ಜೂ.8: ನೆರೆಹೊರೆಯವರೊಡನೆ ಉತ್ತಮ ರೀತಿಯಲ್ಲಿ ಸಂಬಂಧ, ಸ್ನೇಹ ಇಟ್ಟುಕೊಳ್ಳಬೇಕು ಎಂದು ಹೇಳುವುದುಂಟು.ಆದರೆ, ಪಕ್ಕದ ಮನೆಯವರೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಹಣವನ್ನು ಕಳುವು ಮಾಡಿದ್ದಾರೆ.


ಕುಟುಂಬ ಸಮೇತ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಟ್ಟಿದ್ದ 27 ಲಕ್ಷ ರೂಪಾಯಿ ನಗದು ಹಾಗೂ 308 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ಮೈಸೂರು ಜಿಲ್ಲೆ ಬನ್ನೂರು ಪಟ್ಟಣದ ಹೊರಕೇರಿ ವಾರ್ಡ್ ನಲ್ಲಿ ನಡೆದಿದೆ.


ಗೋವಿಂದ ಎಂಬುವರ ಮನೆಯ ಬೀರು ಬಾಗಿಲು ಮುರಿದಿರುವ ಚಾಲಾಕಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಪಕ್ಕದ ಮನೆಯವರೇ ಕಳ್ಳತನ ಮಾಡಿದ್ದಾರೆ. ತಮ್ಮ ಮನೆಗೆ ಹೊಂದಿಕೊಂಡಂತೆ ಇರುವ


ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿರುವ ತಾಯಿ- ಮಗಳು ಕಳ್ಳತನ ಮಾಡಿರುವುದಾಗಿ ಗೋವಿಂದ ಅವರು ಬನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಜೂ 5 ರಂದು ಗೋವಿಂದ ಕುಟುಂಬದವರು ಮತ್ತು ಅವರ ಸಹೋದರನ ಕುಟುಂಬದವರು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಜೂನ್ 6 ರಂದು ಹಿಂದಿರುಗಿದಾಗ ಮನೆಯಲ್ಲಿದ್ದ ಲಾಕರ್ ಬೀಗ ಮುರಿದಿದ್ದು ಅದರಲ್ಲಿದ್ದ 27 ಲಕ್ಷ ರೂ. ನಗದು ಹಾಗೂ 308 ಗ್ರಾಂ ಒಡವೆಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.


ನನ್ನ ಮಗನ ಮದುವೆಗೆ ಉಡುಗೊರೆಯಾಗಿ ನಿವೇಶನ ಖರೀದಿಸುವ ಸಲುವಾಗಿ ಗೋವಿಂದ ಹಣವನ್ನ ಹೊಂದಿಸಿ ಇಟ್ಟಿದ್ದರು .ಈ ವಿಚಾರ ಮುಂದಿನ ಮನೆಯಲ್ಲಿದ್ದ ತಾಯಿ ಮಗಳಾದ ಮೀನಾಕ್ಷಮ್ಮ ಹಾಗೂ ರತ್ನ ಇಬ್ಬರಿಗೆ ಮಾತ್ರ ತಿಳಿದಿತ್ತು. ಮನೆಯ ಸದಸ್ಯರಂತೆ ಗೋವಿಂದ ಮನೆಯವರ ಜೊತೆ ಇವರು ಆತ್ಮೀಯವಾಗಿದ್ದರು. ನಗದು ಮತ್ತು ಒಡವೆಗಳನ್ನು ಮೀನಾಕ್ಷಮ್ಮ ಹಾಗೂ ರತ್ನ ಕಳವು ಮಾಡಿದ್ದಾರೆಂದು ಗೋವಿಂದ ಆರೋಪಿಸಿದ್ದಾರೆ ಹಾಗೂ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.


ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ