Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ಪುಸ್ತಕ ಮಳಿಗೆಗಳಿಗಿಂತ ಮದ್ಯದಂಗಡಿಗಳೇ ಹೆಚ್ಚು

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ.6: ರಾಜ್ಯದಲ್ಲಿ ಪುಸ್ತಕ ಮಳಿಗೆಗಳಿಗಿಂದ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ವಿಷಾದ ವ್ಯಕ್ರಪಡಿಸಿದ್ದಾರೆ.

ನಗರದ ಸೌಂದರ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಪುಸ್ತಕಗಳ ಬಿಡುಗಡೆ ಹಾಗೂ ಹಲವು ಕ್ಷೇತ್ರದಲ್ಲಿ ಸಂಶೋಧನೆ ನಡೆಸಿರುವ ಪ್ರಾಧ್ಯಾಪಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪುಸ್ತಕ ಮಳಿಗೆಗಳಿಗಿಂತ ಬಾರ್‌ಗಳ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಿದೆ. ಓದುವ ಅಭಿರುಚಿಗಿಂತ ವ್ಯಸನಕ್ಕೆ ಆದ್ಯತೆ ದೊರೆಯುತ್ತಿದೆ. ಹೀಗಾಗಿ ಇಂದಿನ ಜನಾಂಗ ಮಾನವೀಯ ಮೌಲ್ಯಗಳಿಂದ ವಿಮುಖವಾಗುತ್ತಿದ್ದು, ಮನೆಯ ಹಿರಿಯರೊಂದಿಗೆ ಮಕ್ಕಳು ಬೆರೆಯುತ್ತಿಲ್ಲ. ಮೊಬೈಲ್‌ ಗೀಳಿಗೆ ಬಿದ್ದಿರುವವರಿಗೆ ಪ್ರಮಾಣಿಕತೆ, ಸಮಯ ಪ್ರಜ್ಞೆ ಎರಡೂ ಕಡಿಮೆಯಾಗಿದೆ ಎಂದು ಹೇಳಿದರು.

ಮೊಬೈಲ್ ನಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಕೃತಕ ಬುದ್ದಿಮತ್ತೆ ಯುಗದಲ್ಲಿ ಆಲೋಚನೆಗೆ ಆಸ್ಪದ ಇಲ್ಲದಂತಾಗಿದೆ. ಮನೆಯಲ್ಲಿ ಅಜ್ಜ-ಅಜ್ಜಿಯರಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳುವುದು ಮರೆಯಾಗಿವೆ. ಮನಷ್ಯ ದಿನದಿಂದ ದಿನಕ್ಕೆ ಸತ್ ಸಂಪ್ರದಾಯಗಳಿಂದ ದೂರ ಸಾಗುತ್ತಿದ್ಧಾನೆ ಎಂದರು.

ಅಮೆರಿಕದ ಸಂಸ್ಥೆಯೊಂದು ವಿಶ್ವದಲ್ಲಿ ಸ್ಪಷ್ಟ ಮತ್ತು ಸುಂದರ ಭಾಷೆ ಕುರಿತು ಸಂಶೋಧನೆ ನಡೆಸಲು ಮುಂದಾಗಿತ್ತು. ಬರೆದಂತೆ ಓದುವ, ಉಚ್ಚಾರಣೆ ಮಾಡುವ, ಉಚ್ಚರಿಸಿದಂತೆ ಬರೆಯುವ ಭಾಷೆಯಾಗಿರಬೇಕು ಎಂಬ ಮಾತದಂಡ ನಿಗದಿಪಡಿಸಿತ್ತು. ವಿಶ್ವವನ್ನು ಆಳುತ್ತೇವೆ ಎಂದುಕೊಂಡಿದ್ದ ಇಂಗ್ಲಿಷ್ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದೆ. ಈ ಸಂಶೋಧನೆಯಲ್ಲಿ ಪೂರ್ಣಗೊಂಡ ಭಾಷೆಗಳು ಎಂದರೆ ಮೂರೇ ಮೂರು. ಅದರಲ್ಲಿ ಕನ್ನಡವೂ ಒಂದಾಗಿತ್ತು. ಅಂತಹ ಅದ್ಭುತ ಭಾಷೆ ಕನ್ನಡ ಎಂದು ಹೇಳಿದರು.

ಪ್ರತಿಯೊಬ್ಬರಲ್ಲಿಯೂ ಸಮಾನ ಜ್ಞಾನ ಹಾಗೂ ಪ್ರತಿಭೆ ಇರುತ್ತದೆ. ಶಿಕ್ಷಣ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಜ್ಞಾನವನ್ನು ಕಲಿಸಬಹುದು. ಆದರೆ ವಿಜ್ಞಾನ ಮಾತ್ರ ಸಂಶೋಧನೆಯ ಮೂಲಕವೇ ಹೊರ ಹೊಮ್ಮುತ್ತದೆ. ಇಂತಹ ಸಂಶೋಧನೆಗೆ ಸೌಂದರ್ಯ ಕಾಲೇಜು ಹೆಚ್ಚಿನ ಅವಕಾಶ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಾ. ಮಹೇಶ್ ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ಸೌಂದರ್ಯ ಕಾಲೇಜಿನ ಸಂಶೋಧನೆ ನಡೆಸಿರುವ 35 ಉಪನ್ಯಾಸಕರಿಗೆ ಗೌರವ ಸಲ್ಲಿಸಲಾಯಿತು. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಬರೆದಿರುವ ಒಟ್ಟು ಒಂಬತ್ತು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಕಾಲೇಜಿನ ಸಿಇಒ ಕೀರ್ತನ್ ಕುಮಾರ್, ಕ್ರೈಸ್ಟ್ ವಿಶ್ವವಿದ್ಯಾಲಯ ಡಾ.ರವೀಂದ್ರ ಬಾಬು, ಸೌಂದರ್ಯ ಕಾಲೇಜಿನ ಪ್ರಾಂಶುಪಾಲ ಡಾ.ವಾಸು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ