Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾರರ ಪರಿಷ್ಕರಣೆ ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳು- ಕೆ.ವಿರೂಪಾಕ್ಷಪ್ಪ

 ಸುದ್ದಿಮೂಲ ವಾರ್ತೆ ಸಿಂಧನೂರು, ಜ.13:
ಪ್ರಜಾತಂತ್ರ ವ್ಯವಸ್ಥೆೆಯಲ್ಲಿ ಮತದಾನ ಮೂಲಭೂತ ಹಕ್ಕು. ದೇಶದ ಭದ್ರತೆ ದೃಷ್ಠಿಿಯಿಂದ ಮತದಾರರನ್ನು ಗುರುತಿಸುವದು ಅನಿವಾರ್ಯವಾಗಿದ್ದು, ಮತದಾರರ ಪರಿಷ್ಕರಣೆ ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳಾಗಿದ್ದಾಾರೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಿಯಲ್ಲಿ ಅವರು ಮಾತನಾಡಿದರು. ಭಾರತಕ್ಕೆೆ ಸ್ವಾಾತಂತ್ರ ಬಂದು 78 ವರ್ಷಗಳು ಕಳೆದಿವೆ. ನಿಜವಾಗಿಯೂ ಮತದಾನದ ಹಕ್ಕು ಸಿಕ್ಕಿಿದೆಯಾ? ಬೊಗಸ್ ಮತದಾನ ಎಲ್ಲಾಾ ಕ್ಷೇತ್ರಗಳಲ್ಲೂ ಇದೆ. ಗ್ರಾಾಮೀಣ ಭಾಗದ ಅನೇಕರು ಸಿಂಧನೂರು ನಗರದಲ್ಲಿ ವಾಸಿಸುತ್ತಿಿದ್ದಾಾರೆ. ಎರಡು ಕಡೆಯೂ ಮತದಾನದ ಹಕ್ಕು ಹೊಂದಿದ್ದಾಾರೆ. ನಮ್ಮ ಸುಕಾಲಪೇಟೆಯ ಅನೇಕರು ಸುಕಾಲಪೇಟೆ ಹಾಗೂ ಆರ್.ಹೆಚ್.ನಂ-1, ಈರಣ್ಣ ಕ್ಯಾಾಂಪ್‌ಗಳಲ್ಲೂ ಹೊಂದಿದ್ದಾಾರೆ. ತಾಲೂಕಿನಲ್ಲಿ ಹಿಂದೆ ನಡೆದ ಚುನಾವಣೆಗಳಲ್ಲಿ ದೌರ್ಜಜ್ಯ, ಖೊಟ್ಟಿಿ, ಬೋಗಸ್ ಮತದಾರರಿಂದಲೇ ಕೆಲವು ಬಾರಿ ನಾನು ಸೋತಿದ್ದೇನೆ. ಮತ ಹಾಕಿಸಿಕೊಳ್ಳದೇ ಸೋತಿಲ್ಲ. ಖೊಟ್ಟಿಿ, ಬೋಗಸ್ ಮತದಾರರನ್ನು ತೆಗೆದು ಹಾಕಲೇಬೇಕು ಎಂದರು.
ದೇಶದ ಭದ್ರತೆ ದೃಷ್ಠಿಿಯಿಂದ ಮತದಾರರ ಪರಿಷ್ಕರಣೆ ಅನಿವಾರ್ಯ. ವಿಪಕ್ಷಗಳಿಗೆ ದೇಶದ ಹಿತ, ಕಾಳಜಿಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆೆ ಉಳಿಬೇಕಾದರೆ ಅನ್ಯದೇಶದವರನ್ನು ಹೊರಹಾಕಲೇಬೇಕು. ಕಮ್ಯುನಿಷ್ಟ ಪಕ್ಷಗಳಿಗೆ ಯಾವ ದೇಶದ ಬಗ್ಗೆೆ ಅಭಿಮಾನ, ಭಕ್ತಿಿಯಿದೆ. ಚೀನಾ, ರಷ್ಯಾಾ ಬಗ್ಗೆೆ ನಿಷ್ಟೆೆಯಿದೆ. ಭಾರತದ ಬಗ್ಗೆೆ ಏಕಿಲ್ಲ. ಕೇಂದ್ರ ಸರಕಾರ ಮತದಾನದ ಚೀಟಿಗೆ ಆಧಾರ ಲಿಂಕ್ ಮಾಡಿದರೆ ಸ್ಪಷ್ಟವಾದ ಮತದಾರರು ಸಿಗಲಿದ್ದಾಾರೆ. ಕಾಂಗ್ರೆೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಯಾಕೆ ಇದನ್ನು ವಿರೋಧಿಸುತ್ತಿಿದೆ? ಬಿಜೆಪಿಯವರು ನಮ್ಮ ಮತದಾರರನ್ನು ತೆಗೆದು ಹಾಕುತ್ತಿಿದೆ ಎಂದು ಹೇಳುತ್ತಿಿದ್ದಾಾರೆ. ದೇಶದ ಮತದಾರರನ್ನು ತಮ್ಮ ಪಕ್ಷದವರು ಎಂದು ಹೇಗೆ ಗುರುತಿಸುತ್ತಾಾರೆ. ಭಾರತೀಯ ಮತದಾರರ ಮೇಲೆ ವಿಶ್ವಾಾಸವಿಲ್ಲವೆ? ಮತದಾರರನ್ನು ಮೂರ್ಖರನ್ನಾಾಗಿ ಮಾಡುವ ಪ್ರಯತ್ನ ನಡೆದಿದೆ. ಮತದಾರರು ಯಾವ ಪಕ್ಷದ ಗುಲಾಮರಲ್ಲ. ಯಾವ ಪಕ್ಷಕ್ಕೆೆ ಸಿಮೀತವಾಗಿಲ್ಲ. ಅರ್ಹರೆಲ್ಲರೂ ಸೇರ್ಪಡೆಗೆ ಅವಕಾಶವಿದೆ. ಕೌಟುಂಬಿಕ ಪಕ್ಷಗಳಾದ ಹಿನ್ನಲೆಯಲ್ಲಿ ಹಿಡಿತ ತಪ್ಪಬಾರದು ಎಂದು ವಿರೋಧಿಸುತ್ತಿಿವೆ. ಪ್ರತಿಯೊಬ್ಬರಿಗೂ ಸ್ವಾಾತಂತ್ರ, ತಿಳುವಳಿಕೆಯಿದೆ. ಮತದಾರರು ಪ್ರಬುದ್ಧರಾಗಿದ್ದಾಾರೆ. ಪಕ್ಷ, ವ್ಯಕ್ತಿಿ ನೋಡಿ ನಿರ್ಧರಿಸುತ್ತಾಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಾಳ, ನಗರ ಮಂಡಲದ ಅಧ್ಯಕ್ಷ ಸಿದ್ರಾಾಮೇಶ ಮನ್ನಾಾಪುರ, ಲಿಂಗರಾಜ ಹೂಗಾರ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ