Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆನೇಕಲ್: ರಂಗಭೂಮಿಯ 110 ಕಲಾವಿದರಿಗೆ ಗೌರವ ಸಮರ್ಪಣೆ

ಸುದ್ದಿಮೂಲ ವಾರ್ತೆ

ಆನೇಕಲ್, ಜು.2: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಮ ಕುಟೀರದಲ್ಲಿ ಇಂದು ಶ್ರೀ ರೇಣುಕಾರಾಧ್ಯ ಕಲಾವಿದರ ಬಳಗ ಶ್ರೀ ಕ್ಷೇತ್ರ ಗೆರೆಟಿಗಿನ ಬೆಲೆ ಇವರ ವತಿಯಿಂದ ಗುರುವಂದನ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಗುರು ಪೂರ್ಣಿಮೆ ಅಂಗವಾಗಿ 9 ದಿನಗಳ ಕಾಲ ಗುರುಗಳನ್ನು ಸ್ಮರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಅಲ್ಲದೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ರಂಗಭೂಮಿ ಕಲಾವಿದರಿಗೆ ನಿರ್ದೇಶಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು‌.

ಕಾರ್ಯಕ್ರಮದಲ್ಲಿ ಶಾಸಕ ಶಿವಣ್ಣ ಮಾತನಾಡಿ, ಗುರಿಯನ್ನು ತಲುಪಲು ಗುರು ತುಂಬಾ ಅವಶ್ಯಕ. ಅಂತಹ ಗುರುವನ್ನ ಸ್ಮರಣೆ ಮಾಡಿ ಗೌರವ ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಮುಂದಿನ ದಿನಗಳಲ್ಲಿ ರವೀಂದ್ರ ಕ್ಷೇತ್ರ ಮಾದರಿಯಲ್ಲಿ ಆನೇಕಲ್ ಅಂಬೇಡ್ಕರ್ ಭವನವನ್ನು ಮುಂದಿನ ವರ್ಷದ ವೇಳೆಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.

ರಂಗಭೂಮಿ ಕಲಾವಿದರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಅಂತ ಮಾಹಿತಿ ಹಂಚಿಕೊಂಡರು. ಅಲ್ಲದೆ ಪ್ರಮುಖವಾಗಿ ಆನೇಕಲ್ ತಾಲೂಕಿನಲ್ಲಿ ಕಳೆದ ಬಾರಿ ಬಾಕಿ ಇದ್ದ ಕೆಲಸಗಳನ್ನು ಈ ಬಾರಿ ಪೂರ್ಣ ಮಾಡಲಾಗುವುದು. ಅಲ್ಲದೆ ನಾಳೆ ಸಂಜೆ ಆನೇಕಲ್ ತಾಲೂಕದ್ಯಾಂತ ಪ್ರತಿ ಹಳ್ಳಿಗೂ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸಚಿವರ ಜೊತೆ ಸಭೆ ಇದೆ. ಎಲ್ಲಾ ಗ್ರಾಮಗಳಿಗೂ ಕೂಡ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಭ ಮಾತನಾಡಿ, ರಂಗಭೂಮಿ ಕಲಾವಿದರನ್ನ ಕರೆಯಿಸಿ ಸನ್ಮಾನ ಮಾಡುತ್ತಿರುವುದು ಖುಷಿ ವಿಚಾರ. ಅದರಲ್ಲೂ 110 ರಂಗಭೂಮಿ ಕಲಾವಿದರನ್ನು ರಾಜ್ಯದ ನಾನಾ ಭಾಗಗಳನ್ನು ಕರೆಸಿ ಅವರುಗಳಿಗೆ ಗೌರವ ಮತ್ತು ಸನ್ಮಾನ ಮಾಡುತ್ತಿರುವುದು ಒಳ್ಳೆಯದು. ಇದೇ ರೀತಿ ಒಳ್ಳೆಯ ಕಾರ್ಯ ಮುಂದುವರೆಯಲಿ ಎಂದು ಹೇಳಿದರು.

ಬಸವೇಶ್ವರ ಎಂಟರ್ಪ್ರೈಸ್ ರೇಣುಕಾರಾಧ್ಯ ಮಾತನಾಡುತ್ತಾ, ನಮ್ಮ ಹಳ್ಳಿಗಳು ಗಡಿ ಭಾಗದಲ್ಲಿ ಇರುವುದರಿಂದ ಇಲ್ಲಿ ಪೌರಾಣಿಕ ನಾಟಕಗಳನ್ನು ಆಡುವವರು ಕಡಿಮೆಯಾಗಿದ್ದಾರೆ. ಅವರನ್ನು ಗುರುತಿಸುವವರು ಇಲ್ಲ. ನಾವು ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಬೇಕೆಂದು ಈ ಹಿಂದಿನ ವರ್ಷ 25 ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಲಾಗಿತ್ತು. ಈ ಬಾರಿ ಮೈಸೂರು, ಮಂಡ್ಯ, ಕನಕಪುರ, ರಾಮನಗರ, ಕೋಲಾರ ಕಲಾವಿದರನ್ನು ಆಹ್ವಾನಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಗುರುತಿಸಿ ಸನ್ಮಾನಿಸುವ ಆಶಯ ಇದೆ ಎಂದರು.

ಇದೇ ವೇಳೆ ರೈನ್‌ಬೋ ಶಾಲೆಯ ಮುಖ್ಯ ಕಾರ್ಯದರ್ಶಿ, ವಿಜಯಕುಮಾರ್ ಗೌಡ ಅವರು ನಮ್ಮ ಊರಿನಲ್ಲಿ 250 ಮನೆಗಳಿದ್ದರೂ ಸಹ ರಂಗಭೂಮಿಯ ಕಲಾವಿದರು ರಾಜ್ಯ ವ್ಯಾಪ್ತಿ ಹೆಸರಾಗಿರುತ್ತಾರೆ. ನಾವು ಗಡಿಭಾಗದಲ್ಲಿ ಇದ್ದರೂ ಸಹ ಕಲೆಯಲ್ಲಿ ಶ್ರೀಮಂತರಾಗಿದ್ದಾರೆ ಹೇಳಿದರು.

ಪುರಸಭೆ ಸದಸ್ಯ ಎನ್‌.ಎಸ್‌. ಪದ್ಮನಾಭ, ಡಾ ರಾಜೇಶ್ವರ್ ಶಿವಾಚಾರ್ಯ ಸ್ವಾಮಿಗಳು, ರಾಜಪುರ ಮಠ ಶಿವಾನಂದ ಮಹಾಸ್ವಾಮಿಗಳು, ಗುಮ್ಮಳಾಪುರ ಮಠ ಆನೇಕಲ್ ತಾಲೂಕಿನ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಕೆ ಚಂದ್ರಶೇಖರ್, ರೇಣುಕಾರಾಧ್ಯ, ವಿಜಯ್ ಕುಮಾರ್ ಗೌಡ್ರು, ಪಾಪಣ್ಣ ಗೌಡ್ರು, ಕುಪೇಂದ್ರ ಗೌಡರು, ಮಾದೇಶ್ ಗೌಡರು, ನವಕುಮಾರ್, ಮುನಿರಾಜು ಇನ್ನಿತರ ಗಣ್ಯರು ಭಾಗಿಯಾಗಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ