Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶತಾಯುಷಿ ಮತದಾರರಿಗೆ ಗೌರವ ಸನ್ಮಾ

ಸುದ್ದಿಮೂಲವಾರ್ತೆ

ಕೊಪ್ಪಳ,ಅ.1:ಹಿರಿಯ ನಾಗರಿಕ ದಿನಾಚರಣೆ ಹಿನ್ನಲೆಯಲ್ಲಿ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಶತಾಯುಷಿ ಮತದಾರರಿಂದ ಕೇಕ್‌ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.

ದೀರ್ಘಾಯುಷ್ಯ ದೊರೆಯುವದು ಅವರ ಸೌಭಾಗ್ಯವೆಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹೇಳಿದರು.

ಆಧುನಿಕ ಜೀವನ ಬಹಳಷ್ಟು ಒತ್ತಡದಿಂದ ಕೂಡಿದ್ದು ಎಲ್ಲರೂ ಸಮಾಧಾನ, ತಾಳ್ಮೆ ತೆಗೆದುಕೊಂಡು ಕಾರ್ಯನಿರ್ವಹಿಸುವದು ಅವಶ್ಯವಾಗಿದೆ. ಹಾಲಿ ಇರುವ ಶತಾಯುಷಿ ಮತದಾರರಿಗೆ ದೀರ್ಘಾಯುಷ್ಯ ಕಲ್ಪಿಸಿರುವದು ದೇವರು ಅವರಿಗೆ ನೀಡಿದ ಕಾಣಿಕೆಯಾಗಿದೆ. ಆರೋಗ್ಯ ಇದ್ದಲ್ಲಿ ಮಾತ್ರ ನಾವು ದೀರ್ಘಾಯುಷಿಗಳಾಗುವದರಲ್ಲಿ ಸಂದೇಹವಿಲ್ಲವೆಂದರು. ತಹಶೀಲ್ದಾರರಾದ ವಿಠ್ಠಲ್‌ ಚೌಗಲಾ ಶತಾಯುಷಿ ಮತದಾರರ ಜೊತೆಗೆ ಚರ್ಚಿಸಿದರು.

ಹೊಸಲಿಂಗಾಪುರ ಗ್ರಾಮದ ಶತಾಯುಷಿ ಮತದಾರ ಹನಮಮ್ಮ ಕೊಂ.ಹನಮಂತಗೌಡ ಹೊಟ್ಟಿ (103) ಹಾಗು ಹೊಸಳ್ಳಿ ಗ್ರಾಮದ ಶತಾಯುಷಿ ಮತದಾರ ಶಾರದಮ್ಮ ಗುರುಸೋಮಪ್ಪ ಈಳಿಗೇರ (100) ಇವರ ವಾಸದ ಗೃಹಕ್ಕೆ ತಹಶೀಲ್ದಾರರು ಹಾಗು ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ತಂಡವು ಆಗಮಿಸಿ ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಿಸಿ ಶಾಲು ಹೋದಿಸಿ ಹಣ್ಣು ತಟ್ಟೆ, ಪ್ರಶಸ್ತಿ ವಿತರಿಸಿ ಗೌರವಿಸಿತು.

ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಮಾರುತಿ ಬಗನಾಳ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗನಗೌಡ ಬೇವೂರು, ಖಾಜಾವಲಿ ಕಿನ್ನಾಳ, ಶರೀಫಸಾಬ ದೊಡ್ಡಮನಿ, ಉಪತಹಶೀಲ್ದಾರ ರೇಖಾ ದೀಕ್ಷಿತ್‌, ತಾಲೂಕ ಪಂಚಾಯತಿಯ ಬಸವರಾಜ ಬಳಿಗಾರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಅಲ್ಲಾಭಕ್ಷಿ, ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ