Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಮಕೂರು ಜಿಲ್ಲೆ: ಇಂದು 11 ನಾಮಪತ್ರ ಸಲ್ಲಿಕೆ

ಸುದ್ದಿಮೂಲ ವಾರ್ತೆ


ತುಮಕೂರು,ಏ.15: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ.

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 15, 2023) 11 ನಾಮಪತ್ರಗಳು ಸ್ವೀಕೃತಗೊಂಡಿರುತ್ತವೆ.

128-ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಸಿ.ಬಿ. ಸುರೇಶ್‌ಬಾಬು .

129-ತಿಪಟೂರು ವಿ.ಸ.ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಕೆ.ಟಿ. ಶಾಂತಕುಮಾರ

130-ತುರುವೇಕೆರೆ ವಿ.ಸ.ಕ್ಷೇತ್ರಕ್ಕೆ ಜನತಾದಳ ಜಾತ್ಯಾತೀತದಿಂದ ಎಂ.ಟಿ.ಕೃಷ್ಣಪ್ಪ 1 ನಾಮಪತ್ರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಮ್‌ಪ್ರಸಾದ್ 2 ನಾಮಪತ್ರ

ಸಲ್ಲಿಸಿರುತ್ತಾರೆ.

131-ಕುಣಿಗಲ್ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.

132-ತುಮಕೂರು ನಗರ ವಿ.ಸ.ಕ್ಷೇತ್ರಕ್ಕೆ ಸೋಷಿಯಾಲಿಸ್ಟಿಕ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಎಂ.ವಿ. ಕಲ್ಯಾಣಿ ಅವರು 1 ನಾಮಪತ್ರ ಸಲ್ಲಿಸಿರುತ್ತಾರೆ.

133-ತುಮಕೂರು ಗ್ರಾಮಾಂತರ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.

134-ಕೊರಟಗೆರೆ ವಿ.ಸ.ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಪಿ.ಆರ್.ಸುಧಾಕರಲಾಲ್ ಅವರು 1 ನಾಮಪತ್ರ,

ಉತ್ತಮ ಪ್ರಜಾಕೀಯ ಪಕ್ಷದಿಂದ ನಾಗೇಂದ್ರ ಟಿ.ಎನ್. ಅವರು 1 ನಾಮಪತ್ರ ಸಲ್ಲಿಸಿರುತ್ತಾರೆ.

135-ಗುಬ್ಬಿ ವಿ.ಸ.ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರವೀಣ್ ಎಸ್.ಆರ್. 1 ನಾಮಪತ್ರ ಸಲ್ಲಿಸಿರುತ್ತಾರೆ.

136-ಶಿರಾ ವಿ.ಸ.ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ರಂಗನಾಥ ಅವರು 1 ನಾಮಪತ್ರ,

ಆಮ್ ಆದ್ಮಿ ಪಕ್ಷದಿಂದ ಶಶಿಕುಮಾರ್ ಆರ್. ಅವರು 1 ನಾಮಪತ್ರ ಸಲ್ಲಿಸಿರುತ್ತಾರೆ.

137-ಪಾವಗಡ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.

138-ಮಧುಗಿರಿ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.

ಒಟ್ಟಾರೆ ಜನತಾದಳ(ಜಾತ್ಯಾತೀತ) ಪಕ್ಷದಿಂದ 4, ಆಮ್ ಆದ್ಮಿ ಪಕ್ಷದಿಂದ 1, ಸ್ವತಂತ್ರ 1 ಮತ್ತು ಇತರೆ ಪಕ್ಷಗಳಿಂದ 5 ನಾಮಪತ್ರಗಳು ಸ್ವೀಕೃತವಾಗಿವೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ