Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಂಗಭದ್ರಾಾ ಎಡದಂಡೆ : 31 ಉಪಕಾಲುವೆಗೆ 20 ಕೋ.ರೂ - ತಂಗಡಗಿ

ಸುದ್ದಿಮೂಲ ವಾರ್ತೆ ಕಾರಟಗಿ, ಸೆ.29:
ತುಂಗಭದ್ರಾಾ ಎಡಂಡೆ ನಾಲೆಯ 31ನೇ ಉಪ ಕಾಲುವೆಯ ಕೊನೆ ಭಾಗದಲ್ಲಿ ಸುಮಾರು ವರ್ಷಗಳಿಂದ ನೀರು ಹರಿಯದೇ ಹೂಳು ತುಂಬಿ, ಜಾಲಿ ಗಿಡಗಳು ಬೆಳೆದು ಮುಚ್ಚಿಿ ಹೋಗಿದ್ದರಿಂದ, ತುಂಬಿದ ಹೂಳು ತಗೆದು, ಸ್ವಚ್ಛಗೊಳಿಸಿ ಸಿಸಿ (ಲೈನಿಂಗ್) ಕಾಮಗಾರಿಗೆ ಸರ್ಕಾರದಿಂದ 20 ಕೋಟಿರೂ. ಟೆಂಡರ್ ಕರೆಯಲಾಗಿದೆ. ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸೋಮವಾರ ತಾಲೂಕಿನ ಉಳೇನೂರು ಏತನೀರಾವರಿ ಯೋಜನೆ ಉದ್ಘಾಾಟಿಸಿ ಅವರು ಮಾತನಾಡಿದ ಅವರು, ಕಿಂದಿಕ್ಯಾಾಂಪ್ ಮತ್ತು ಬುಳ್ಳಾಾಬಾಯಿಕ್ಯಾಾಂಪ್‌ನ ನೀರು ಬಾದಿತ ಜಮೀನುಗಳಿಗೂ ಮುಂದಿನ ದಿನ ಉಳೇನೂರು ಯೋಜನೆ ಮಾದರಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾಾನಕ್ಕೆೆ ತರುವ ಮೂಲಕ ನೀರುಣಿಸಲು ಪ್ರಯತ್ನಿಿಸುವೆ. ಉಳೇನೂರು ಏತ ನೀರಾವರಿಯಿಂದ ಉಳೇನೂರು, ಬೆನ್ನೂರು ಸೆರಿದಂತೆ ನದಿ ಪಾತ್ರದ ಗ್ರಾಾಮಗಳ ರೈತರು ತಮ್ಮ ಜಮೀನಿಗೆ ನದಿಯಲ್ಲಿ ನೀರಿನ ಕೊರತೆಯಾಗುತ್ತದೆ ಎಂದು ಆತಂಕ ಪಡಬೇಕಿಲ್ಲ. ನಿಮ್ಮ ಹಿತವನ್ನೂ ಕಾಪಾಡುವೆ ಎಂದರು.
ನನಗೆ ಕನಕಗಿರಿ ಕ್ಷೇತ್ರದ ಜನ ರಾಜಕೀಯ ಜೀವನ ಕೊಟ್ಟಿಿದ್ದೀರಿ. ನನ್ನನ್ನು ಶಾಸಕ ಮತ್ತು ಸಚಿವನಾಗಿಸಿದ್ದೀರಿ. ಹೀಗಾಗಿ ನಾನು ಕಳೆದ 2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನವಲಿ ಬಳಿ ರೈಸ್ ಟೆಕ್ಲಾಾಲೋಜಿಪಾರ್ಕ್ ಅನುಷ್ಠಾಾನಗೊಳಿಸಿದೆ. ಕನಕಗಿರಿ-ಕಾರಟಗಿ ತಾಲೂಕು ಘೋಷಣೆ ಮಾಡಿಸಿದೆ. ಕನಕಗಿರಿ ಪಟ್ಟಣ ಕನಕಗಿರಿ ಪಟ್ಟಣ ಪಂಚಾಯ್ತಿಿ, ಕಾರಟಗಿ ಪುರಸಭೆಯನ್ನಾಾಗಿ ಮೇಲರ್ದ್ಜೆೆಗೇರಿಸಿದೆ. ನಂತರ ಎರಡನೇ ಬಾರಿಗೆ ಶಾಸಕ, ಸಚಿವನಾದ ಬಳಿಕ 2013ರ ಕಾಂಗ್ರೆೆಸ್ ಸರ್ಕಾರದಲ್ಲಿ ಕನಕಗಿರಿ ತಾಲೂಕಿನ ಒಣ ಬೇಸಾಯದ ಪ್ರದೇಶಗಳ ವಿವಿಧ ಕೆರೆಗಳಿಗೆ ತುಂಗಭದ್ರಾಾ ನದಿ ನೀರು ಭರ್ತಿ ಯೋಜನೆ ಕಾರ್ಯರೂಪಕ್ಕೆೆ ತಂದಿದ್ದೆೆ. ಊಳೇನೂರು ಏತ ನೀರಾವರಿ ಯೋಜನೆ ಮಂಜೂರು ಮಾಡಿಸಿದ್ದೆೆ ಎಂದರು.
ಈಗ ಮೂರನೇ ಭಾರಿಗೆ ಶಾಸಕ, ಸಚಿವನಾಗಿ ಊಳೇನೂರು ಏತ ನೀರಾರಿ ಈ ಯೋಜನೆ ಕಾರ್ಯಗತಗೊಳಿಸಿರುವೆ. ಕಾರಟಗಿ-ಕನಕಗಿರಿಯಲ್ಲಿ ಪ್ರಜಾಸೌಧ, ಎರಡೂ ಕಡೆ ತಲಾ 36 ಕೋಟಿರೂ. ವೆಚ್ಚದ 100 ಹಾಸಿಗೆ ಆಸ್ಪತ್ರೆೆ, ಕನಕಗಿರಿ ಪಟ್ಟಣಕ್ಕೆೆ 160 ಕೋಟಿರೂ. ಶಾಶ್ವತ ಶುದ್ಧ ಕುಡಿಯುವ ನೀರು, ಸಿರಿವಾರದ ಬಳಿ 300 ಎಕರೆ ಪ್ರದೇಶದಲ್ಲಿ ಹೈಟೆಕ್ ತೋಟಗಾರಿಕೆ ಪಾರ್ಕ್ ಯೋಜನೆಗಳನ್ನು ಮಂಜೂರು ಮಾಡಿಸಿದ್ದು ಈ ಎಲ್ಲ ಯೋಜನೆಗಳಿಗೆ ಮುಂದಿನ ತಿಂಗಳ ಮುಖ್ಯಮಂತ್ರಿಿಗಳು ಕೊಪ್ಪಳದಲ್ಲಿ ಚಾಲನೆ ನೀಡಲಿದ್ದಾಾರೆ ಎಂದರು.
ಉಳಿದ ಅವಧಿಯಲ್ಲಿ ಕ್ಷೇತ್ರದ ಎಲ್ಲ ರಸ್ತೆೆ ದುರಸ್ಥಿಿಗೊಳಸಿ ಸುಗಮ ಸಂಚಾರಕ್ಕೆೆ ಅನುಕೂಲ ಮಾಡಿಕೊಡುವೆ. ಕಾರಟಗಿ ಪಟ್ಟಣಕ್ಕೂ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸಿ ಸರ್ಕಾರಕ್ಕೆೆ ಅನುದಾನ ಮಂಜೂರಿಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ. ಕನಕಗಿರಿ ಹಾಗೂ ಕಾರಟಗಿ ಪಟ್ಟಣಗಳಲ್ಲಿ ಒಳ ಚರಂಡಿ ಯೋಜನೆ ಮುಂದಿನ ದಿನಗಳಲ್ಲಿ ಅನುಷ್ಠಾಾನಗೊಳಿಸಲು ಮುಂದಾಗಿರುವೆ. ನನ್ನ ಕ್ಷೇತ್ರದಲ್ಲಿ ಇತಿಹಾಸ ಪುಟದಲ್ಲಿ ಬರೆದಿಡುವ ಜನೋಪಯೋಗಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾಾಮಾಣಿಕ ಪ್ರಯತ್ನ ಮಾಡುವೆ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ