Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏಕರೂಪ ನಾಗರಿಕ ಸಂಹಿತೆ ಬರುತ್ತೆ: ಈಶ್ವರಪ್ಪ

ಸುದ್ದಿಮೂಲವಾರ್ತೆ

ಕೊಪ್ಪಳ ಜೂ 23: ನಮಗೆ ಒಂದೇ ಹೆಂಡತಿ ಆದರೆ ಮುಸ್ಲಿಂರಿಗೆ 25 ಹೆಂಡತಿ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಏಕರೂಪ ಕಾನೂನು ಬರುತ್ತೆ. ಇಲ್ಲಿಯ ಅನ್ನ ತಿಂದು ನಮ್ಮಂಗೆ ಇರಬೇಕು. ಎಲ್ಲರು ಒಂದೇ ಎಲ್ಲರೂ ಸಮಾನರು ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.

ಅವರು ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದರು.ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಡಿ ಕೆ ಶಿವಕುಮಾರ. ಇನ್ನೂ ಒಂದು ತಿಂಗಳು ಅವಕಾಶ ನೀಡುತ್ತೇವೆ. ಜುಲೈ 4 ರೊಳಗಾಗಿ ಗ್ಯಾರಂಟಿ ಕೊಡದಿದ್ದರೆ ವಿಧಾನಸಭೆ ಹಾಗು ಹೊರಗೋ ಬಿಡೋದಿಲ್ಲ.ಹುಲಿಗೆಮ್ಮನ ಮೇಲೆ ಆಣೆ ಮಾಡಿ ಹೇಳುತ್ತೇನೆ. ಮುಂದೆ ರಾಜ್ಯದಲ್ಲಿ ಬಿಜೆಪಿ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸರಕಾರ ಐದು ವರ್ಷವಿರುವುದಿಲ್ಲ. ಈಗಾಗಲೇ ಸಿದ್ದರಾಮಯ್ಯ ಡಿ ಕೆ ಶಿವಕುಮಾರ ಮುಖ್ಯಮಂತ್ರಿ ರೇಸ ನಡೆದಿದೆ

ಚುನಾವಣೆಯಲ್ಲಿ ಸೋಲಿಗೆ ನಾವು ಎದುರೋದಿಲ್ಲ. ಏದುರಿಸುವುದಿಲ್ಲ, ನಾವು ಹೆದರೋ ಪ್ರಶ್ನೆ ಇಲ್ಲ. ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕೇವಲೇ ಇಬ್ಬರು ಗೆದ್ದಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಗೆದ್ದಿದ್ದರುವಾಗ ಎದೆ ಗುಂದಿಲ್ಲ. ಯಾವುದೊ ಚುನಾವಣೆಯಾದಾಗ ಸೋತಾಗ ಹೆದರುತ್ತೇವೇನು. ಯವುದೊ ಗ್ಯಾರಂಟಿ ತೋರಿಸಿ ಗೆದ್ದಿಲ್ಲ. ಕಾಂಗ್ರೆಸ್ಸಿನವರು ಅಧಿಕಾರ ಬಂದಿದೆ ಎಂದು ಕುಣಿಬಹುದು. ಆದರೆ ಜನ ಲೋಕಸಭೆಯಲ್ಲಿ ಸೋಲಿಸಲು ಸೆಡ್ಡುಹೊಡೆದು ತಯಾರಿಯಾಗಿದ್ದಾರೆ. ಸೋಲಿನಲ್ಲಿ ದೃತಿಗೆಡುವ ಹೇಡಿಗಳಲ್ಲ ಎಂದರು.

ಸೈನಿಕರಿಗೆ ಶಸ್ತ್ರಗಳನ್ನು ಕೊಟ್ಟು ಅವರ ನಮ್ಮ ಒಬ್ಬ ಸೈನಿಕರನ್ನು ಹೊಡೆದರೆ ನೀವು ಹತ್ತು ಜನರನ್ನು ಹೊಡೆಯಿರಿ ಎಂದಿದ್ದಾರೆ. ಹೀಗಾಗಿ ಪಾಕಿಸ್ತಾನದವರು ಭಾರತದತ್ತ ತಲೆಹಾಕಿ ಮಲಗಿಕೊಳ್ಳುವುದಿಲ್ಲ ಎಂದರು.

ನಿರುದ್ಯೋಗಿ ಯುವಕರಿಗೆ 3000, ಮಹಿಳೆಯರಿಗೆ 2000 ರೂಪಾಯಿ ಎಂಬ ಸುಳ್ಳು ಹೇಳಿಲ್ಲ. ನರೇಂದ್ರ ಮೋದಿಯ ಐದು ಕೆಜಿ ಅಕ್ಕಿ ಆದರೆ ಇಲ್ಲಿ ಅವನ ಫೋಟೊ. ಯಾರ ಕೇಳಿ ಅಕ್ಕಿ ಕೊಡುತ್ತೀನಿ ಎಂದಿದ್ದರು. ನರೇಂದ್ರ ಮೋದಿಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.ಅಪಪ್ರಚಾರಕ್ಕೆ ಹೆದರೋದಿಲ್ಲ ಎಂದು ಹೇಳಿದರು.

2024 ರಲ್ಲಿ ಅಯೋದ್ಯ ರಾಮಮಂದಿರ ನಿರ್ಮಾಣವಾಗಿದೆ. ಪುಣ್ಯವಿದ್ದವರು ಉದ್ಘಾಟನೆಗೆ ಬನ್ನಿ. ಕಾಂಗ್ರೆಸ್ ರಾಮಮಂದಿರ ಕಟ್ಟೋದಿಲ್ಲ ಎಂದಿದ್ದರು. ಕಾಶಿ ವಿಶ್ವನಾಥನ ಕ್ಷೇತ್ರದಲ್ಲಿ ಈಶ್ವರ ನೀರು ತೊಳೆದುಕೊಂಡು ನಮಾಜಿಗೆ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ನಾವು ಬಿಡೋದಿಲ್ಲ. ಶ್ರದ್ಧಾ ಕೇಂದ್ರಗಳಲ್ಲಿ ಗೌರವ ತರುತ್ತೇವೆ. ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದಾರೊ ಅಲ್ಲಿ ಹೊಡೆದು ಮತ್ತೆ ಮಂದಿರ ಕಟ್ಟುತ್ತೇವೆ. ನಾವು ಹೊಸ ಮಸೀದಿ ಹಾಗು ಚರ್ಚಗಳನ್ಬು ಹೊಡೆಯುವದಿಲ್ಲ ಎಂದರು‌

ಸಂಸದ ಸಂಗಣ್ಣ ಕರಡಿ ಮಾತನಾಡಿ ನರೇಂದ್ರ ಮೋದಿ 9 ವರ್ಷದ ಸಾಧನೆಯನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು. 2014 ರಲ್ಲಿ ಮೋದಿ 15 ಲಕ್ಷ ರೂಪಾಯಿ ಹಾಕುತ್ತೀನಿ ಎಂದು ಕಾಂಗ್ರೆಸ್ ಟೀಕೆ ಮಾಡಿದ್ದಾರೆ. ಜನಧನ ಯೋಜನೆಯಲ್ಲಿ ಬ್ಯಾಂಕ ಅಕೌಂಟ ತೆಗೆದು ಭ್ರಷ್ಟಾಚಾರ ತಡೆದಿದ್ದೆ ಸಾಧನೆ. ಜನೌಷಧಿ ಯೋಜನೆಯನ್ನು ಜನರಿಗೆ ಉತ್ತಮ ಔಷಧಿ ನೀಡಲಾಗಿದೆ. ಕಲುಷಿತ ನೀರು ಕುಡಿದು ಜನರ ಸಾವನ್ನಪ್ಪುತ್ತಿರುವದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಿಂದಿನ ಆಡಳಿತದಲ್ಲಿ ಅಧಿಕಾರಕ್ಕೆ ಬಂದು 45 ದಿನಗಳಲ್ಲಿ ಬಂದ್ ಕರೆ ನೀಡಿರಲಿಲ್ಲ. ಆದರೆ ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗಿರುವದರಿಂದ ವ್ಯಾಪಾರಿಸ್ಥರು ಬಂದ್ ಕರೆ ನೀಡಿದ್ದರು. ಕಾಂಗ್ರೆಸ್ ಅಭಿವೃದ್ಧಿ ಗೆ ಒತ್ತು ನೀಡಿಲ್ಲ. ಕೇವಲ ಗ್ಯಾರಂಟಿಯ ಬಗ್ಗೆ ಮಾತನಾಡುತ್ತಾರೆ.ಈಗಾಗಲೇ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ ಮಧ್ಯೆ ಖುರ್ಚಿ ಪೈಪೋಟಿ ನಡೆದಿದೆ.ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಶಾಸಕ ದೊಡ್ಡನಗೌಡ ಪಾಟೀಲ ರಾಜಕಾರಣ ನಿಂತ ನೀರಲ್ಲ. ಪಕ್ಷಕ್ಕೆ ಸೋಲು ಮೊದಲು ಅಲ್ಲ. ಗ್ಯಾರಂಟಿ ಕೊಟ್ಟು ಅನುಷ್ಠಾನಗೊಳಿಸಲು ವಿಫಲವಾಗಿದೆ. ಈ ನಿಟ್ಟಿನಲ್ಲಿ ಕಾರಗಯಕರ್ತರು ಹೋರಾಡ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಮೂರನೆಯ ಬಾರಿ ಪ್ರಧಾನಿಯಾಗಲು ಮತ್ತೆ ಸಂಘಟಿತರಾಗಬೇಕು. ಯಾರೇದೆ ತಪ್ಪು ಇದ್ದರು ಸರಿಪಡಿಸಿಕೊಂಡು ಪಕ್ಷವನ್ನು ಮುನ್ನುಡಿಸಿಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅರಳಿಸೋಣ ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ ಚುನಾವಣೆಯಲ್ಲಿ ಸೋಲು ಅನುಭವಿಸಿದವರಿಗೆ ಸಂಕಟ ಗೊತ್ತಾಗುತ್ತೆ. ಸೋಲು ಗೊತ್ತಿಲ್ಲಸವರಿಗೆ ಗೊತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಸುಳ್ಳು ಹೇಳೋದು ಜಾಯಮಾನ ಹಿಂದೆ ಕೃಷ್ಞೆಯ ಯೋಜನೆ ವರ್ಷಕ್ಕೆ 10 ಸಾವಿರ ಕೋಟಿ ನೀಡುವುದಾಗಿ ಸುಳ್ಳು ಹೇಳಿದ್ದಾರೆ. ಈಗ ಸುಳ್ಳು ಹೇಗೆ ಹೇಳಬೇಕು ಎನ್ನುವದನ್ನು ತಮಿಳುನಾಡಿನಿಂದ ತಜ್ಞರ ಕರೆದುಕೊಂಡು ಬಂದಿದ್ದರು. ನರೇಂದ್ರ ಮೋದಿ ಪೊಳ್ಳು ಭರವಸೆಯನ್ನು ನೀಡಿಲ್ಲ. ಕಾಂಗ್ರೆಸ್ಸಿಗೆ ಅಭಿವೃದ್ದಿ ಮಾಡಿ ಗೆದ್ದವರಲ್ಲ. ಕಾಂಗ್ರೆಸ್ ನವರ ನಾಟಕ ಮಾಡಿ ಗೆದ್ದಿದ್ದಾರೆ. ಈಗ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ವಿದ್ಯುತ್ ಏರಿಕೆಯನ್ನು ಕೆಇಆರ್ ಸಿಯವರು ನೀಡುತ್ತಾರೆ. ಹಿಂದೆ ಬೊಮ್ಮಾಯಿಯವರು ಒಪ್ಪಿಕೊಂಡಿದ್ದಿಲ್ಲ. ಆದರೆ ಈ ವಿಷಯದಲ್ಲಿ ಸಚಿವ ಎಂ ಬಿ ಪಾಟೀಲ ಅಪ್ರಬುದ್ದರಾಗಿ ಮಾತನಾಡ್ತಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಪರಾಜಿತ ಅಭ್ಯರ್ಥಿ ಮಂಜುಳಾ ಕರಡಿ ನರೇಂದ್ರ ಮೋದಿಯವರು ಜನಪರ ಯೋಜನೆಗಳನ್ನು ಮನೆಗೆ ಮುಟ್ಟಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕೆಟ್ಟ ಕನಸು ಮರೆತುಬಿಡಬೇಕು. ಸೋಲೇ ಗೆಲುವಿನ ಮೆಟ್ಟಲು ಎಂದು ತಿಳಿದುಕೊಳ್ಳಬೇಕು‌ ಎಂದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೋಲಿನಿಂದ ದೃತಿಗೆಡಬಾರದು. ಜನರ ತೀರ್ಮಾನಕ್ಕೆ ಬದ್ದರಾಗಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಎಲ್ಲರೂ ಪ್ರಯತ್ನಿಸಬೇಕು. ನರೇಂದ್ರಯನ್ನು ಜಗತ್ತಿನ ಹಿರಯಣ್ಣ ಅಮೆರಿಕಾ ಸಹ ಮೋದಿಯವರನ್ನು ಹೊಗಳಿದ್ದು ಹೆಮ್ಮೆಯಾಗಿದೆ.ಸೋಲು ಗೆಲುವು ಸಹಜ. ಸೋಲನ್ನು ಏದುರಿಸುವ ಶಕ್ತಿ ಬಿಜೆಪಿಗಿದೆ. ಜಿಲ್ಲೆಯಲ್ಲಿ ಏನೇ ಸಮಸ್ಯೆ ಇದ್ದರೂ ನಿಮ್ಮೊಂದಿಗೆ ಇರುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಂಎಲ್ ಸಿ ಹೇಮಲತಾ ನಾಯಕ ಕೆಲಸ ಮಾಡಿ ಸೋತಿರುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಈಗಿನ ಸರಕಾರ ಪಠ್ಯಪುಸ್ತಕದಲ್ಲಿ ಸಣ್ಣತನ ಮಾಡಿ ಸಂಕುಚಿತವಾಗಿದೆ. ಗ್ಯಾರಂಟಿಯಲ್ಲಿ ಒಂದು ಬಸ್ ಫ್ರೀಯಾಗಿ ಯಶಸ್ವಿಯಾಗಿದ್ದಾರೆ. ಆದರೆ ಅಲ್ಲಿ ಗೊಂದಲವಿದೆ.‌ಬಸ್ ಗಳು ಕಡಿಮೆ ಇದ್ದು ಜನರಿಗೆ ಸಮಸ್ಯೆಯಾಗಿದೆ. ಗ್ಯಾರಂಟಿ ಘೋಷಿಸಿ ಮಂಕುಬೂದಿ ಎರಚಿದ್ದಾರೆ. ಮಹಿಳಾ ಮಣಿಗಳನ್ನು ಮನೆಯೊಳಗೆ ಇರದಂತೆ ಮಾಡಿದ್ದಾರೆ. ಯುವನಿಧಿಯಿಂದ ಯುವಕರು ಹಾಳಾಗುತ್ತಾರೆ. ಕೈಗಾರಿಕೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕೊಡಬೇಕು ಎಂದರು.

ಕೆ ಶರಣಪ್ಪ ಮಾತನಾಡಿ ಕಾರ್ಯಕರ್ತರ ನಿರಾಸೆರಾಗಿದ್ದಾರೆ. ಆಗ ಏನೇನೊ ಅಗಿ ಸೋತಿದ್ದೇವೆ. ಕಾರ್ಯಕರ್ತರು ನಿರಾಸರಾಗಿಲ್ಲ. ಮುಂಬರುವ ಚುಮಾವಣೆಗೆ ಈಗಾಗಲೇ ಸಂಘಟನೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಯನ್ನು ವಿಧಾನಸಭೆಯಲ್ಲಿ ಆಗಿರುವ ತಪ್ಪು ಲೋಕಸಭೆಯಲ್ಲಿ ಸರಿಪಡಿಸಬೇಕು. ಹಿಂದೆ ಆಗಿರುವ ತಪ್ಪು ಮುಂದಾಗಬಾರದು ಎಂದರು.

ವೇದಿಕೆಯಲ್ಲಿ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಸಚಿವ ಹಾಲಪ್ಪ ಆಚಾರ, ಗಿರಿಗೌಡ, ಹೇಮಲತಾ ನಾಯಕ, ಪರಣ್ಣ ಮುಮವಳ್ಳಿ, ಕೆ ಶರಣಪ್ಪ ವಕೀಲರು. ಮಂಜುಳಾ ಕರಡಿ, ಶಿವಲೀಲಾ ದಳವಾಯಿ.ಬಸವರಾಜ ಹಳ್ಳೂರು, ಉಮೇಶ ಸಜ್ಜನ, ಪ್ರದೀಪ ಹಿಟ್ನಾಳ, ಸುನೀಲ ಹೆಸರೂರು. ಮರಿಬಸಪ್ಪ. ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ