Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಡಾಡಿ ದನಗಳ ಹಾವಳಿ : ಶಾಶ್ವತ ಪರಿಹಾರಕ್ಕೆ ಒತ್ತಾಯ

ಸುದ್ದಿಮೂಲ ವಾರ್ತೆ ಮಸ್ಕಿ, ಜ.31:
ತಾಲೂಕಿನಲ್ಲಿ ಮಿತಿ ಮೀರಿರುವ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವುದರ ಜತೆಗೆ ಬೆಳೆ ನಷ್ಟ ಅನುಭವಿಸಿರುವ ರೈತರು ಮತ್ತು ಬೆಳೆಗಾರಿಗೆ ಪರಿಹಾರ ನೀಡುವಂತೆ ಒತ್ತಾಾಯಿಸಿ ರೈತ ಹಿತರಕ್ಷ ಣಾ ಸಮಿತಿ ಮಸ್ಕಿಿ, ರೈತ ಸಂಘದ ಮುಖಂಡರು ಮತ್ತು ಗ್ರಾಾಮಸ್ಥರು ಬಸವೇಶ್ವರ ವೃತ್ತದಿಂದ ಪ್ರತಿಭಟನೆ ಆರಂಭಗೊಂಡು ತಹಶೀಲ್ದಾಾರ್ ಕಚೇರಿವರೆಗೆ ಶುಕ್ರವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾ ಅಧಿಕಾರಿಗೆ, ತಹಸೀಲ್ದಾಾರ್ ಮಂಜುನಾಥ್ ಭೋಗಾವತಿ ಅವರ ಮುಖಾಂತರ ಮನವಿ ಸಲ್ಲಿಸಿ ಒತ್ತಾಾಯಿಸಿದರು.
ಮಸ್ಕಿಿ ತಾಲೂಕಿನ ಬುದ್ದಿನ್ನಿಿ ಎಸ್, ಸಾನಬಾಳ, ಹೂವಿನಭಾವಿ, ಮುದಬಾಳ, ಅಂಕುಶದೊಡ್ಡಿಿ, ಕಾಟಗಲ್, ವೆಂಕಟಾಪುರ, ಜಿನ್ನಾಾಪುರ ಮತ್ತು ಮಸ್ಕಿಿ ಸೀಮಾಂತರ ವ್ಯಾಾಪ್ತಿಿಯ ಪ್ರದೇಶದ ರೈತರ ಜಮೀನುಗಳಿಗೆ ನೂರಾರು ಬಿಡಾಡಿ ದನಗಳು ಹಿಂಡು-ಹಿಂಡಾಗಿ ನುಗ್ಗಿಿ ಬೆಳೆ ಹಾನಿಗೀಡು ಮಾಡುತ್ತಿಿದ್ದು,ಅನೇಕ ವರ್ಷಗಳಿಂದ ತಾಲೂಕಿನಲ್ಲಿ ಗುಂಪು ಗುಂಪಾಗಿ ಬರುವಂತಹ ಬೀಡಾಡಿದನಗಳು ರೈತರು ಬೆಳೆದ ಬೆಳೆ ತಿನ್ನುವುದಲ್ಲದೆ ಅಲ್ಲದೆ ತೋಟಗಳಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡಲು ಭಯ ಪಡುತ್ತಿಿದ್ದಾರೆ ಎಂದು ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸಿದರು.
ರೈತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ನಾಗರೆಡ್ಡಿಿಪ್ಪ ದೇವರಮನಿ ಮಾತನಾಡಿ, ಬಿಡಾಡಿ ದನಗಳು ಗುಂಪು ಗುಂಪಾಗಿ ಗ್ರಾಾಮಗಳಿಗೆ ಆಗಮಿಸಿ ಕೇವಲ ರೈತರ ಬೆಳೆ ಹಾಳು ಮಾಡುವುದು ಮಾತ್ರವಲ್ಲ ರೈತರ ಮೇಲೆ ದಾಳಿ ನಡೆಸಿ ಪ್ರಾಾಣ ತೆಗೆಯುತ್ತಿಿವೆ. ಇದಕ್ಕೆೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ತಾಲೂಕಿನಲ್ಲಿ ಅನೇಕ ರೈತರು ಕೃಷಿ ಜಮೀನನ್ನು ಪಾಳು ಬಿಟ್ಟಿಿದ್ದು, ಹಾಗೂ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರೈತರು ಬೆಳೆಗಳನ್ನು ಬೆಳೆಯುತ್ತಾಾರೆ ಬಿಡಾಡಿ ದನಗಳಿಂದ ಸಂಪೂರ್ಣವಾಗಿ ಬೆಳೆಗಳನ್ನೆೆಲ್ಲ ತಿಂದು ನಾಶ ಮಾಡುತ್ತವೆ.ರೈತರು ಬೆಳೆಯುವ ಬೆಳೆ ಅಂದಾಜಿಸಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ದನಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಾಗಮಿಸಿದ ತಹಶೀಲ್ದಾಾರ್ ಮಂಜುನಾಥ್ ಬೋಗವತಿ ಮನವಿ ಸ್ವೀಕರಿಸಿ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಕಳಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರೆಡ್ಡೆೆಪ್ಪ ದೇವರಮನಿ, ಬಸವರಾಜ ಹಳ್ಳಿಿ, ಬಸವರಾಜ ಬಡಿಗೇರ, ಶರಣಪ್ಪ ಉಪ್ಪಲದಡ್ಡಿಿ, ವಿಶ್ವನಾಥ್ ಬಡಿಗೇರ, ಹಾಗೂ ವಿವಿಧ ಗ್ರಾಾಮಗಳಿಂದ ಆಗಮಿಸಿದ ರೈತರು ಭಾಗಿಯಾಗಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ