Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಮಕೂರಿನಲ್ಲೂ ವಂದೇ ಭಾರತ್ ರೈಲಿಗೆ ಅದ್ದೂರಿ ಸ್ವಾಗತ     

ಸುದ್ದಿಮೂಲ ವಾರ್ತೆ

ತುಮಕೂರು, ಜೂ 27 : ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುರಕ್ಷತೆ ಮತ್ತು ಸುಖಕರವಾಗಿರುತ್ತದೆ ಎಂದು ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲಿಗೆ ಅದ್ದೂರಿ ಸ್ವಾಗತ ಕೋರಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರೈಲುಗಳು ನಿಗದಿತ ಸಮಯದಲ್ಲಿ ಬರುತ್ತಿರಲಿಲ್ಲ, ಆದರೆ ಇಂದು ರೈಲುಗಳು ಯಾವ ನಿಲ್ದಾಣಕ್ಕೆ ಎಷ್ಟು ಗಂಟೆಗೆ ತಲುಪುತ್ತವೆ ಎಂಬುವುದನ್ನು ಆ್ಯಪ್ ಮೂಲಕ ನೋಡಬಹುದಾಗಿದೆ. ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುರಕ್ಷತೆ ಮತ್ತು ಸುಖಕರವಾಗಿರುತ್ತದೆ ಎಂದು ಹೇಳಿದರು.

ಈ ಹಿಂದೆ ರೈಲಿನಲ್ಲಿ ಪ್ರಯಾಣ ಮಾಡಿ ನಿಲ್ದಾಣದಲ್ಲಿ ಸುಸಜ್ಜಿತವಾದ ಮೂಲಭೂತ ಸೌಕರ್ಯ ಇರಲಿಲ್ಲ, ಆದರ ಈ ಯಾವುದೇ ಸಮಸ್ಯೆಗಳು ರೈಲ್ವೇ ನಿಲ್ದಾಣಗಳಲ್ಲಿ ಇಲ್ಲ ಎಂದರು.

ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಭಾರತೀಯ ರೈಲ್ವೆಗಳಲ್ಲಿ ಅನೇಕ ಬದಲಾವಣೆ ತರಲಾಗಿದೆ. ನರೇಂದ್ರ ಮೋದಿಯವರ 9 ವರ್ಷಗಳ ಆಡಳಿತದಲ್ಲಿ ಭಾರತ ದೇಶದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು ಎಂದರು.

ಮೇಕ್‌ ಇನ್ ಇಂಡಿಯಾ ಮೂಲಕ ಭಾರತೀಯ ರೈಲ್ವೇ ಇಂಜಿನ್ ಹಾಗೂ ಕೋಚ್‌ಗಳನ್ನೊಳಗೊಂಡಂತೆ ಎಲ್ಲವನ್ನು ನಮ್ಮ ದೇಶದಲ್ಲಿಯೇ ಸಿದ್ದಪಡಿಸಲಾಗುತ್ತಿರುವುದು ಹೆಮ್ಮೆಯ ಸಂಗತಿ. ಭಾರತವು ಅಭಿವೃದ್ದಿಯತ್ತ ಸಾಗುತ್ತಿರುವುದರಿಂದ ದೇಶದ ಜಿಡಿಪಿಯೂ ಕೂಡಾ ಏರುತ್ತಿದೆ ಎಂದರು.

ತಮಕೂರು ರೈಲ್ವೇ ನಿಲ್ದಾಣದಕ್ಕೆ ವಂದೇ ಭಾರತ್ ರೈಲು ಆಗಮಿಸುವ ಮುನ್ನ ಮತ್ತು ನಂತರ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಬಿ.ಸಿ.ನಾಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಸೇರಿದಂತೆ ವಂದೇ ಭಾರತ್ ರೈಲಿನಲ್ಲಿ ತಿಪಟೂರಿನಿಂದ ತುಮಕೂರಿನವರಗೆ ಪ್ರಯಾಣಿಸಿದರು.

ಇದೇ ವೇಳೆ ಶಾಸಕ ಸುರೇಶ್ ಗೌಡ, ನರೇಂದ್ರ ಬಾಬು , ಮೇಯರ್ ಪ್ರಭಾವತಿ ಸುಧಿಶ್ವರ್, ಪಾಲಿಕೆ ಸದಸ್ಯೆ ಗಿರಿಜ ಧನಿಯಾಕುಮಾರ್, ರೈಲ್ವೇ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ