Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜ.1ರಂದು ವಿಜಯೋತ್ಸವ ಆಚರಣೆ ಭೀಮ ಕೋರೆಗಾಂವ ದಲಿತ ವಿಮೋಚನೆಗೆ ಪ್ರೇರಣೆ -ಎಂ.ಗಂಗಾಧರ್

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.29:
ಜಾತಿವಾದ, ಅಸ್ಪೃಶ್ಯತೆ ಹಾಗೂ ಸಕಲ ತಾರತಮ್ಯಗಳ ವಿರುದ್ಧ ನಡೆದ ಹೋರಾಟ ಭೀಮಕೋರೆಗಾಂವ ಯುದ್ಧವಾಗಿದೆ. ಈ ಯುದ್ಧದಿಂದ ಮತ್ತು ಇದರ ವಿಜಯದಿಂದ ದಲಿತರು ವರ್ತಮಾನದ ಜಾತಿ ವಿನಾಶ, ವರ್ಗವಿನಾಶ, ಸರ್ವ ತಾರತಮ್ಯ ವಿನಾಶಗಳ ಹೋರಾಟಕ್ಕೆೆ ಮಹಾನ್ ಪ್ರೇೇರಣೆಯಾಗಿದೆ ಎಂದು ಹೋರಾಟಗಾರ ಎಂ.ಗಂಗಾಧರ್ ಹೇಳಿದರು.
ಸೋಮವಾರ ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿನಡೆಸಿ ಮಾತನಾಡಿದರು. ಶತಮಾನಗಳ ಸಿಟ್ಟನ್ನು ಸಿಡಿಮದ್ದಾಾಗಿಸಿಕೊಂಡು ಸಿದ್ದು ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್ ಯುದ್ಧವೀರರನ್ನು ನೆನೆಯಬೇಕಿದೆ. ಈ ಹಿನ್ನಲೆಯಲ್ಲಿ ಜ.1 ರಂದು ಸಿಂಧನೂರಿನ ಆಚರಣಾ ಸಮಿತಿಯಿಂದ ಭೀಮ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಶತಶತಮಾನಗಳ ಸಿಟ್ಟನ್ನು ಸಿಡಿಮದ್ದಾಾಗಿಸಿಕೊಂಡು ಸಿದ್ದು ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವದ ಯುದ್ಧವೀರರನ್ನು ನೆನೆಯದೆ ಹೋದರೆ ಚರಿತ್ರೆೆ ಕ್ಷಮಿಸದು. ಜಾತಿ ಅಸ್ಪೃಶ್ಯತೆ ದಮನ ದಬ್ಬಾಾಳಿಕೆಯಿಂದ ಕುದಿಯುತ್ತಿಿದ್ದ ಮರಾಠವಾಡದ ಬ್ರಾಾಹ್ಮಣವಾದಿ ಪೇಶ್ವೆೆಗಳನ್ನು ಮಣ್ಣು ಮುಕ್ಕಿಿಸಿ ಅಧಿಕಾರದಿಂದ ತೊಲಗಿಸಿದ ವಿರೋಚಿತ ಇತಿಹಾಸವಿದೆ ಎಂದರು.
ಈ ಹಿನ್ನಲೆಯಲ್ಲಿ ಜ.1 ರಂದು ಸಿಂಧನೂರಿನಲ್ಲಿ ಭೀಮ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಸಮಾನ ಮನಸ್ಕ ಹಲವಾರು ಸಂಘಟನೆಗಳ ಜಂಟಿ ವೇದಿಕೆಯಾಗಿ ಆಚರಣಾ ಸಮಿತಿ ರಚಿಸಿಕೊಳ್ಳಲಾಗಿದೆ. ಸಮಿತಿಯ ನೇತೃತ್ವದಲ್ಲಿ ಮಧ್ಯಾಾಹ್ನ 12ಕ್ಕೆೆ ತಾಲೂಕ ಪಂಚಾಯತನಿಂದ ಜೈ ಭೀಮ್ ರೆಜಿಮೆಂಟ್ ನಿಂದ ಪಿಡಬ್ಲ್ಯೂಡಿ ಕ್ಯಾಾಂಪ್ ವರೆಗೆ ಪಥಸಂಚಲನ ನಡೆಯಲಿದೆ. ತದನಂತರ ಬಹಿರಂಗ ಸಭೆ ಆಯೋಜಿಸಲಾಗಿದೆ. ಎಲ್ಲಾಾ ಅಂಬೇಡ್ಕರ ವಾದಿಗಳು, ಮಾರ್ಕ್‌ಸ್‌ ವಾದಿಗಳು, ಗಾಂಧಿವಾದಿಗಳು ಬಹಳ ಮುಖ್ಯವಾಗಿ ಪ್ರಜಾಪ್ರಭುತ್ವವಾದಿಗಳು ಬಿಳಿ ಶರ್ಟ್ ಬಿಳಿ ಪ್ಯಾಾಂಟ್ ಧರಿಸಿಕೊಂಡು ಅತಿ ಹೆಚ್ಚಿಿನ ಸಂಖ್ಯೆೆಯಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ ಎನ್ ಬಡಿಗೇರ್, ಮೌನೇಶ್ ಜಾಲವಾಡಿಗಿ, ರಾಮಣ್ಣ ಗೋನವಾರ, ವೆಂಕಟೇಶ್ ಗಿರಿಜಾಲಿ, ನಾರಾಯಣ ಬೆಳಗುರ್ಕಿ, ಹನುಮಂತಪ್ಪ ಹಂಪನಾಳ, ಹನುಮೇಶ್ ಕರ್ನಿ, ಮಹ್ಮದ್ ಆಸ್ೀ, ಪ್ರವೀಣ್ ದುಮತಿ, ವಿರೇಶ್ ಹಂಚಿನಾಳ, ನರಸಪ್ಪ ಕಟ್ಟಿಿಮನಿ, ಉಮೇಶ್ ಸುಕಲಾಪೇಟೆ, ವಿರುಪಾಕ್ಷಿ ಸಾಸಲಮರಿ ಸೇರಿದಂತೆ ಅನೇಕರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ