Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಠಾಚಾರ ಉಲ್ಲಂಘನೆ ಸಲ್ಲ. ವಿಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕಾರಣ ಪಕ್ಷದ ಚಿಹ್ನೆ ಬಿಟ್ಟು ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಸವಾಲು ಅಧಿಕಾರಿಗಳ ಮೂಲಕ ಸಣ್ಣತನ ಪ್ರದರ್ಶನ ಹಂಪನಗೌಡರಿಂದ ಸಣ್ಣತನದ ರಾಜಕಾರಣ - ಬಾದರ್ಲಿ

ಸುದ್ದಿಮೂಲ ವಾರ್ತೆ ಸಿಂಧನೂರು, ಜ.05:
ಹಿರಿಯರು, ಐದು ಬಾರಿ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಅವರು ತಮಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದ ಅವರ ಸಣ್ಣತನದ ರಾಜಕಾರಣವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಆರೋಪಿಸಿದರು.
ನಗರದ ಬಸ್ ನಿಲ್ದಾಾಣದಲ್ಲಿ ಆಯೋಜಿಸಿದ್ದ ಕೆಕೆಆರ್‌ಡಿಬಿಯಿಂದ ಮಂಜೂರಾಗಿ ಬಂದಿದ್ದ 14 ಬಸ್‌ಗಳ ಉದ್ಘಾಾಟನೆ ಹಾಗೂ ಶಾಸಕರೊಂದಿಗೆ ವಿದ್ಯಾಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡದೇ ಅಪಮಾನ ಮಾಡಿದ ಹಿನ್ನಲೆಯಲ್ಲಿ ತಮ್ಮ ಜನಸ್ಪಂದನಾ ಕಾರ್ಯಾಲಯದಲ್ಲಿ ತುರ್ತು ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು.
ತಾವು ಪರಿಷತ್ ಶಾಸಕರಾದ ನಂತರ ಕ್ಷೇತ್ರದ ಜನತೆಯ, ವಿದ್ಯಾಾರ್ಥಿಗಳ, ಯುವ ಜನರ, ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾಾ ಬಂದಿದ್ದೇನೆ. ಬಸ್‌ಗಳ ಕೊರತೆಯಿಂದ ಸರಿಯಾದ ಸಮಯಕ್ಕೆೆ ವಿದ್ಯಾಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಿಲ್ಲ ಎನ್ನುವ ಸಮಸ್ಯೆೆಯ ಕುರಿತು ಅಧಿವೇಶನದಲ್ಲಿ ಮಾತನಾಡಿದ್ದೇನೆ. ನಮ್ಮ ಸರಕಾರ ವಿದ್ಯಾಾರ್ಥಿಗಳ ಅನುಕೂಲಕ್ಕಾಾಗಿ 14 ಬಸ್‌ಗಳನ್ನು ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿಪೋ ವ್ಯವಸ್ಥಾಾಪಕ ಹೊನ್ನಪ್ಪ ನಮ್ಮ ಕಛೇರಿಗೆ ಬಂದು ಆಹ್ವಾಾನಿಸಿದ ಹಿನ್ನಲೆಯಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆೆ. ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನಡೆದುಕೊಂಡ ರೀತಿ, ವರ್ತನೆ ಸರಿಯಾಗಿಲ್ಲ. ಸರಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಾಚಾರ ಉಲ್ಲಂಘನೆಯಾಗಿದೆ. ಸರಕಾರದ ಬಸ್‌ಗಳು ನಿಮ್ಮ ಮನೆಯಿಂದ ತಂದ ಬಸ್‌ಗಳಲ್ಲ. ನೀವು ಶಾಸಕರು, ನಾನು ಶಾಸಕ. ನೀವು ಅಧಿಕಾರಿಗಳ ಮೂಲಕ ವರ್ತನೆ ತೋರಿಸಿದ್ದೀರಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೋಮನಗೌಡ ಬಾದರ್ಲಿ, ಶಿವಕುಮಾರ ಜವಳಿ ಇದ್ದರು.
ನನ್ನ ಮುಗಿಸಲು ಯತ್ನ:
ಹಂಪನಗೌಡ ಬಾದರ್ಲಿ ಅವರೇ ನೀವು ಕಾಂಗ್ರೆೆಸ್ ಪಕ್ಷದ ಶಾಸಕರು. ಪಕ್ಷದಿಂದ ಸ್ಪರ್ಧಿಸದಿದ್ದರೆ ನೀವು ಠೇವಣಿ ಕಳೆದುಕೊಳ್ಳುತ್ತಿಿದ್ದಿರಿ. ನಿಮಗೆ ತಾಕತ್ತು ಇದ್ದರೆ ಪಕ್ಷ ಬಿಟ್ಟು ಹೋಗಿ ನಿಮ್ಮ ಸಾಮರ್ಥ್ಯ ಗೊತ್ತಾಾಗುತ್ತದೆ. ನಿಮ್ಮಿಿಂದ ಪಕ್ಷ ಹಾಗೂ ಸರಕಾರ ಇಲ್ಲ. ಸರಕಾರಿ ಕಾರ್ಯಕ್ರಮದಲ್ಲಿ ನನಗೆ ಮಾಡಿದ ಅಗೌರವ ಇಡೀ ವಿಧಾನ ಪರಿಷತ್‌ಗೆ ಮಾಡಿದ ಅಗೌರವವಾಗಿದೆ. ರೈತನ ಮಗನಿಗೆ ಮಾಡಿದ ಅವಮಾನವಾಗಿದೆ. ನನ್ನ ಬೆಳವಣಿಗೆ ಸಹಿಸಲು ನಿಮ್ಮಿಿಂದ ಸಾಧ್ಯವಾಗುತ್ತಿಿಲ್ಲ. ನನ್ನ ಮುಗಿಸಲು ವಿಪಕ್ಷಗಳೊಂದಿಗೆ ಕೈ ಜೋಡಿಸಿದ್ದೀರಿ. ಹಗೆತನ ಇದ್ದರೆ ನೇರವಾಗಿ ಮಾಡಿ ಎಂದು ಸವಾಲೆಸೆದರು.
ಹೊಂದಾಣಿಕೆ ರಾಜಕಾರಣ:
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್ ಕಾರ್ಯಕರ್ತರ ಪರಿಶ್ರಮದಿಂದ ನೀವು ಗೆದ್ದಿದ್ದೀರಿ. ವಿಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿಿದ್ದೀರಿ. ನಿಮ್ಮ ಮೇಲಿನ ಅನೇಕ ಆರೋಪಗಳನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆೆ ತಂದಿದ್ದೇನೆ. ಐದು ಬಾರಿ ಶಾಸಕರಾಗಿ ಕ್ಷೇತ್ರಕ್ಕೆೆ ತಾಂತ್ರಿಿಕ ಕಾಲೇಜುಗಳಾಗಲಿ, ಕೈಗಾರಿಕೆಗಳಾಗಲಿ ತಂದಿಲ್ಲ. ಎಸ್ಸಿಿ-ಎಸ್‌ಟಿ ಮಂಜೂರಾಗಿದ್ದ ಬೋರ್‌ವೆಲ್‌ಗಳನ್ನು ತಡೆಹಿಡಿಯಲು ಪತ್ರ ಬರೆದಿದ್ದು, ನೀವು ಯಾವ ಸಮಾಜದ ಪರವಾಗಿದ್ದೀರಿ? ನಾನು ಪರಿಷತ್ ಶಾಸಕನಾದ ನಂತರ ಏನೇನು ಕೆಲಸಗಳಾಗಿವೆ ಎನ್ನುವದು ಕ್ಷೇತ್ರದ ಜನತೆಗೆ ಗೊತ್ತಿಿದೆ. ನೀವು ಹಾಗೂ ನಾನು ಮಾಡಿದ ಕೆಲಸಗಳ ಬಗ್ಗೆೆ ಬರಹಿಂಗ ಚರ್ಚೆಗೆ ಬನ್ನಿಿ ಎಂದು ಸವಾಲೆಸೆದ ಬಸನಗೌಡ, ನನ್ನ ಪಕ್ಷನಿಷ್ಠೆೆ ಗುರುತಿಸಿ ಎಮ್‌ಎಲ್‌ಸಿ ಮಾಡಿದೆ. ನಾನು ನೇರವಾಗಿ ನಿಮ್ಮಿಿಂದಲೇ ಉತ್ತರ ಬಯಸುವೆ. ನಿಮ್ಮ ಕುಟುಂಬದ ಸದಸ್ಯರಿಂದಾಗಲಿ, ನಿಮ್ಮ ಹಿಂಬಾಲಕರಿಂದಾಗಲಿ ಬೇಕಿಲ್ಲ ಎಂದರು.
ಭಯದ ವಾತಾವರಣ:
ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಭಯಭೀತರನ್ನಾಗಿ ಮಾಡುವ ಕೆಲಸ ನಡೆದಿದೆ. ಕಾನೂನಿನ ಕೆಲಸ ಮಾಡಲು ಬಿಡುತ್ತಿಿಲ್ಲ. ಅಧಿಕಾರಿಗಳು ನೀವು ಏನು ಮಾಡುತ್ತಿಿದ್ದೀರಿ ಎನ್ನುವದು ನನಗೆ ಗೊತ್ತಿಿದೆ. ಜನತೆಗೆ ಸರಕಾರದ ಮೇಲೆ ನಂಬಿಕೆ, ವಿಶ್ವಾಾಸವಿದೆ. ಸಂವಿಧಾನ, ಕಾನೂನಿಡಿ ಕೆಲಸ ಮಾಡಲು ಮತ್ತೊೊಮ್ಮೆೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಶಾಸಕರು ಅಧಿಕಾರಿಗಳ ಮೂಲಕ ಕಾನೂನು ಬಾಹೀರ ಚಟುವಟಿಕೆಗಳನ್ನು ಮಾಡಿಸುತ್ತಿಿದ್ದಾಾರೆ. ಮುಂದಿನ ದಿನಗಳಲ್ಲಿ ನನ್ನ ಕಾರ್ಯಕರ್ತರ ಮೇಲೆ ಗುಂಡಾಗಿರಿ ನಡೆದರೆ ಸಹಿಸುವದಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ