Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಂಪಿ ಅದ್ದೂರಿಯಾಗಿ ಜರುಗಿದ ವಿರುಪಾಕ್ಷೇಶ್ವರ ರಥೋತ್ಸವ








ಸುದ್ದಿಮೂಲ ವಾರ್ತೆ ,


ಹೊಸಪೇಟೆ (ವಿಜಯನಗರ) ಏ೦೭ : ದಕ್ಷಿಣದ ಕಾಶಿ, ವಿಶ್ವ ಪಾ ರಂಪರಿಕ ತಾಣ, ವಿಶ್ವಪ್ರ ಸಿದ್ಧ ಹಂಪಿ ರಥಬೀದಿಯಲ್ಲಿ ಗುರುವಾರ ಸಂಜೆ ಪಂಪಾ ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ಸಡಗರ, ಸಂಭ್ರಮದ ನಡುವೆ ಜರುಗಿತು.


ರಥೋತ್ಸವಗಳನ್ನು ನೋಡಲು ಭಕ್ತರು ಬಂಡೆಗಲ್ಲುಗಳು, ಮಂಟಪಗಳು ಹಾಗೂ ಸ್ಮಾರಕಗಳ ಮೇಲೆ ಕುಳಿತು ಕೊಂ ಡು ಉರಿ ಬಿಸಿಲು ಲೆಕ್ಕಿಸದ ಭಕ್ತಾದಿಗಳು ರ ಥೋತ್ಸವ ವನ್ನು ಕಣ್ತುಂಬಿಕೊಂಡರು. ರಥಬೀದಿಯಲ್ಲಿ ತೇರುಗಳನ್ನು  ಎಳೆಯುತ್ತಿ ದ್ದಂತೆ ಭಕ್ತರಿಂದ ಜಯಘೋಷ ಮುಗಿಲು ಮುಟ್ಟಿತು.


ಭಕ್ತರು ಬಾಳೆಹಣ್ಣು, ಉತ್ತತ್ತಿಯನ್ನು ತೇರಿನ ಮೇಲೆ ತೂರಿ ಹರಕೆ ತೀರಿಸಿದರು. ರಥೋತ್ಸವದ ಅಂಗವಾಗಿ ಬೆಳಿಗ್ಗೆ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿದರು.


ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತುಂಗಭ ದ್ರೆಯಲ್ಲಿ ಮಿಂದೆದ್ದು, ದೇವರ ದರ್ಶನ ಪಡೆದರು. ದೇಗು ಲದ ಆವರಣದಲ್ಲಿ ಮಡಿ ತೇರು ಎಳೆದರು. ಎರಡು ತೇರು ಗಳ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳಿಂದ  ರಥಬೀದಿ ತುಂಬಿ ತುಳುಕುತ್ತಿತ್ತು.


ಪ್ರತಿವರ್ಷದಂತೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪಂಪಾ ವಿರೂಪಾಕ್ಷೇಶ್ವ ರ  ಸ್ವಾಮಿ ಹಾಗೂ ಚಂದ್ರಮೌ ಳೇಶ್ವರ ಸ್ವಾಮಿ ಪಟವನ್ನು ಹರಾಜಿನಲ್ಲಿ ಬಿಜೆಪಿ ಯುವ ನಾಯಕ ವಿಜಯನಗರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ  ಸಿದ್ದಾರ್ಥ ಸಿಂಗ್ ಅವರು ₹1.8 ಲಕ್ಷ ಹಾಗೂ ₹99 ಸಾವಿರಕ್ಕೆ‌ ಕ್ರಮವಾಗಿ  ತನ್ನದಾಗಿಸಿಕೊಂಡರು.












Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ