Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು: ಬೊಮ್ಮಾಯಿ‌

ಸುದ್ದಿಮೂಲ ವಾರ್ತೆ

ಹಾವೇರಿ, ಮೇ 11: ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು. ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ನನಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾವಿಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಮತದಾನ ಮಾಡುವುದರಲ್ಲಿ ವ್ಯತ್ಯಾಸ ಏನಿಲ್ಲ. ಕರ್ನಾಟಕದ ನಾಗರಿಕನಾಗಿ ನಾ‌ನು ಮತದಾನ ಮಾಡಿದ್ದೇನೆ ಎಂದರು.

ಬಜರಂಗಬಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಚುನಾವಣೆಗಾಗಿ ನಾವು ಯಾವುದನ್ನು ಮಾಡುವುದಿಲ್ಲ. ನಾವು ಬಜರಂಗಬಲಿ ಮೇಲಿನ ನಂಬಿಕೆ, ವಿಶ್ವಾಸಕ್ಕಾಗಿ ಮಾಡಿದ್ದೇವೆ. ನಮ್ಮ ಮತ್ತು ದೇವರ ನಡುವೆ ಇರುವ ಸಂಬಂಧ ಹಾಗಿದೆ. ಕಾಂಗ್ರೆಸ್ ನವರು ಕೂಡ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ‌. ಅವರು ಹೇಳಿದ್ದನ್ನು ಮಾಡುವುದಿಲ್ಲ. ಮಾಡೋದನ್ನು ಅವರು ಹೇಳುವುದಿಲ್ಲ ಎಂದರು.

ಎಲ್ಲರೂ ಮತದಾನ ಮಾಡಬೇಕು, ನಾನು ಮತದಾನ ಮಾಡಿದ್ದೇನೆ. ತಾವು ಹೊರಗಡೆ ಬನ್ನಿ ಹಕ್ಕನ್ನು ಚಲಾಯಿಸಿ. ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು ಎಂದರು.

ಈ ಚುನಾವಣೆ ಒಂದು ಕಡೆ ಅಭಿವೃದ್ಧಿ, ಮತ್ತೊಂದು ಕಡೆ ಸುಳ್ಳಿನ‌ ಚುನಾವಣೆ. ಕಳೆದ ಬಾರಿ ಅಪವಿತ್ರ ಮೈತ್ರಿ ಮಾಡಿಕೊಂಡು‌ ಸರಕಾರ ನಡೆಸಲು‌ ಆಗದಿದ್ದಾಗ ನಮಗೆ ಕೊಟ್ಟರು ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ