Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನಸಿಕ ಆರೋಗ್ಯಕ್ಕಾಗಿ ವಾಕಥಾನ್

ಸುದ್ದಿಮೂಲ ವಾರ್ತೆ

ಬೆಂಗಳೂರು, ನ. 05 : ಹಿಮಾಲಯ ವೆಲ್‌ನೆಸ್ ಕಂಪನಿಯು ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್ ಅನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿತ್ತು.

ಐದು ಕಿಲೋಮೀಟರ್ ಗಳ ವಾಕಥಾನ್, ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಮತ್ತು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾಗಿತ್ತು. ಮಕ್ಕಳಿಂದ ಹಿರಿಯರವರೆಗೆ, ದೈಹಿಕ ಸದೃಢತೆಯ ಬಗ್ಗೆ ಅತೀವ ಕಾಳಜಿ ಇರುವವರಿಂದ ಹಿಡಿದು ಸಾಮಾನ್ಯ ನಡಿಗೆಗಾರರವರೆಗೆ ಮಾನಸಿಕ ಯೋಗಕ್ಷೇಮದ ಅನ್ವೇಷಣೆಯಲ್ಲಿ ಭಾಗವಹಿದ್ದರು.

ಜಯಶ್ರೀ ಉಳ್ಳಾಲ್, ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್ ಮಾನಸಿಕ ಆರೋಗ್ಯದ ಮಹತ್ವದ ಆಚರಣೆಯಾಗಿದೆ. ಹೆಚ್ಚುತ್ತಿರುವ ಒತ್ತಡಗಳು ಮತ್ತು ಆಧುನಿಕ ಜೀವನದ ವೇಗ ಸ್ವಭಾವದ ಕಾಲದಲ್ಲಿ ಮಾನಸಿಕ ಆರೋಗ್ಯದ ಕಾಪಾಡುವಿಕೆಯು ಅಗತ್ಯವಾದ ಕಾಳಜಿಯ ವಿಷಯವಾಗಿದೆ. ವ್ಯಕ್ತಿಗತವಾಗಿ ಮತ್ತು ಸಮುದಾಯಗಳಲ್ಲಿರುವ ಮಾನಸಿಕ ಆರೋಗ್ಯದ ಬಗೆಗಿನ ತಪ್ಪುಗ್ರಹಿಕೆಯನ್ನು ತೊಡೆದುಹಾಕಿ ಧನಾತ್ಮಕವಾದ ಬದಲಾವಣೆಗಳನ್ನು ತರಲು ನಾವು ಮುಂದೆ ಬರಬೇಕು ಎಂದು ಹೇಳಿದರು.

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಿಮಾಲಯ ವೆಲ್ ನೆಸ್ ಕಂಪನಿ ಸದಾ ಬದ್ಧವಾಗಿದೆ” ಎಂದು ಎಂದು ಕೆ.ಜಿ.ಉಮೇಶ್ ಹೇಳಿದರು. ದಿ ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್‌ನಲ್ಲಿ ಭಾಗವಹಿಸಿದವರು ನಗರದ ಅತ್ಯಂತ ಸುಂದರವಾದ ಸ್ಥಳಗಳಾದ ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್, ಕಬ್ಬನ್ ಪಾರ್ಕ್‌ ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ಮತ್ತು ಜವಾಹರ್ ಬಾಲಭವನ ಆಡಿಟೋರಿಯಂ ಮೂಲಕ ಹಾದು ಹೋಗುವ ರಮಣೀಯವಾದ ಮರ‍ಗವನ್ನು ಆನಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ