Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೆಹಲಿಯಲ್ಲಿ ನಾವೇ ಹೋರಾಟ ಮಾಡ್ತೀವಿ : ಬಡಗಲಪುರ ನಾಗೇಂದ್ರ

ಸುದ್ದಿಮೂಲ ವಾರ್ತೆ

ಮೈಸೂರು, ಸೆ.30:ರಾಜ್ಯದ ಎಂಪಿಗಳು ನರ ಸತ್ತವರು ಮಾತ್ರವೇ ಅಲ್ಲ. ನಾಲಾಯಕ್ ಎಂಪಿಗಳು.‌ ಬೀದಿಗಿಳಿದು ರಾಜ್ಯದ ಜನರ ಪರ ಹೋರಾಟ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತೀವ್ರವಾಗಿ ಟೀಕಾಪ್ರಹಾರ ಮಾಡಿದ್ದಾರೆ.

ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಿಮ್ಮನ್ನು ಆಯ್ಕೆ ಮಾಡಿದ್ದು ಜನರ ಪರ ಕೆಲಸ ಮಾಡಲಿ ಎಂದು. ಮನೇಲಿ ಕೂತು ಬಿಟ್ಟಿ ಭೋದನೆ ಮಾಡಲಿ ಅಂತಲ್ಲ. ರಾಜ್ಯದ ಬಿಜೆಪಿ ಎಂಪಿಗಳು ಮೋದಿ ಮುಂದೆ ತುಟಿ ಬಿಚ್ಚಲ್ಲ. ಇವರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದರು ಏನು ಮಾಡದ ಕಾರಣ ನಾವು ದೆಹಲಿಯ ಜಂತರ್ ಮಂತರ್ ನಲ್ಲಿ ನಮ್ಮ ಹೋರಾಟ ಮಾಡುತ್ತೇವೆ. ಕಾವೇರಿ ವಿಚಾರದಲ್ಲಿ ಅನ್ಯಾಯವಾಗಿದೆ. ಸಿಎಂ ಸಿದ್ದರಾಮಯ್ಯ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ ತಪ್ಪು. ಪಾಲಿಸಲಾಗದ ಆದೇಶ ಉಲ್ಲಂಘನೆ ಮಾಡಿದರೆ ತಪ್ಪಾಗಲ್ಲ. ಆದೇಶ ಉಲ್ಲಂಘನೆ ಮಾಡಿದರೆ ಜಲಾಶಯದ ಕೀ ಕಿತ್ತುಕೊಳ್ಳುವ ಭಯ ನಿಮಗಿದೆ ಅನಿಸುತ್ತದೆ. ನಿಮ್ಮಿಂದ ಕಿತ್ತು ಕೊಳ್ಳಬಹುದು ರೈತರಿಂದಲ್ಲ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಈ ಬಗ್ಗೆ ಯೋಚನೆ ಮಾಡಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಕಾವೇರಿ ವಿಚಾರಕ್ಕೆ ಮಧ್ಯ ಪ್ರವೇಶಿಸಬೇಕು. ಕಾವೇರಿ ಕೊಳ್ಳದ 9 ಎಂಪಿಗಳು ಮೋದಿ ಭೇಟಿ ಮಾಡಿ ಒತ್ತಾಯಿಸಬೇಕು. 9 ಜನ ಎಂಪಿಗಳೂ ಬೀದಿಗಿಳಿದು ಜನರ ಪರ ನಿಲ್ಲಬೇಕು. ಈ ಭಾಗದ 50ಕ್ಕೂ ಹೆಚ್ಚು ಶಾಸಕರು ಕೂಡ ಬೀದಿಗೆ ಇಳಿಯಬೇಕು ಎಂದು ಒತ್ತಾಯಿಸಿದರು..

ಇಲ್ಲದಿದ್ದರೆ ನಿಮ್ಮನ್ನು ಮನೆಯಿಂದ ನಾವೇ ಹೊರಕ್ಕೆ ಎಳೆ ತರುವ ಕೆಲಸ ಮಾಡುತ್ತೇವೆ. ಭಾರತ ಒಕ್ಕೂಟ ವ್ಯವಸ್ಥೆ, ಎರಡು ರಾಜ್ಯಗಳ ನಡುವೆ ಕಂದಕ ಉಂಟಾದಾಗ ಕೇಂದ್ರ ಮಧ್ಯೆ ಬರಬೇಕು. ಇಲ್ಲದಿದ್ದರೆ ಒಕ್ಕೂಟದ ವಿರುದ್ಧ ಅಪಸ್ವರ ಬರುತ್ತದೆ. ಎಲ್ಲವನ್ನೂ ಮನಗೊಂಡು ತೀರ್ಮಾನ ಮಾಡಬೇಕು ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ