ಮುಂಬೈ ರೈಲಿಗೆ ಸ್ವಾಗತ
ಸುದ್ದಿಮೂಲ ವಾರ್ತೆ
ಕೊಪ್ಪಳ ಆ 29: ಇನ್ಮುಂದೆ ಕೊಪ್ಪಳದಿಂದ ಪುಣೆ , ಮುಂಬೈಗೆ ನೇರ ರೈಲು ಮೂಲಕ ಪ್ರಯಾಣಿಸುವ ಸೌಲಭ್ಯ ಲಭ್ಯವಾಗಲಿದೆ.
ಮುಂಬೈ -ಗದಗ ನಡುವೆ ಸಂಚರಿಸುತ್ತಿದ್ದ ರೈಲು ಅಗಸ್ಟ್ ಇಂದಿನಿಂದ ಹೊಸಪೇಟೆಯಿಂದ ವಯಾ ಕೊಪ್ಪಳ ಸಂಚಾರ ಆರಂಭಿಸಲಿದೆ.
ಅಗಸ್ಟ್ 29 ರಂದು ಹೊಸಪೇಟೆ ರೈಲು ನಿಲ್ದಾಣದಲ್ಲಿ ಹೊಸಪೇಟೆ - ಸಿಎಸ್ಎಂಟಿ ಮುಂಬೈ ರೈಲಿಗೆ ಬಳ್ಳಾರಿ ಸಂಸದರಾದ ದೇವೇಂದ್ರಪ್ಪ ಹಾಗೂ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಹಸಿರು ನಿಶಾನೆ ತೋರಿದರು.
ಈ ರೈಲು ಅಗಸ್ಟ್ 28 ರಂದು ರಾತ್ರಿ 9.20 ಕ್ಕೆ ಮುಂಬೈನಿಂದ ಹೊರಟಿತ್ತು ಸೋಲಾಪುರ ಮೂಲಕ ಅಗಸ್ಟ್ 29 ರಂದು ಬೆಳಗ್ಗೆ 6.50 ಕ್ಕೆ ವಿಜಯಪುರ, 8.40 ಕ್ಕೆ ಬಾಗಲಕೋಟೆ, 9.09 ಕ್ಕೆ ಬಾದಾಮಿ, ಗದಗ 10.40 ಕ್ಕೆ, ಕೊಪ್ಪಳ 11.40 ಕ್ಕೆ, ಮುನಿರಾಬಾದ್ 11.55 ಕ್ಕೆ ಮೂಲಕ ಹೊಸಪೇಟೆ ತಲುಪಿತ್ತು.
ಇದೇ ಟ್ರೈನ್ ಇಂದು (ಆಗಸ್ಟ್ 29 )ರ ಮಧ್ಯಾಹ್ನ 2 ಗಂಟೆಗೆ ಹೊಸಪೇಟೆಯಿಂದ ಹೊರಟು ಈ ರೈಲು ಮುನಿರಾಬಾದ್ 2.09 ಕ್ಕೆ , ಕೊಪ್ಪಳ 2.36 ಕ್ಕೆ , ಗದಗ 3.15 ಕ್ಕೆ , ಬಾದಾಮಿ 4.19 ಕ್ಕೆ ಬಾಗಲಕೋಟೆ 4.48 ಕ್ಕೆ ವಿಜಯಪುರ 6.25 ಕ್ಕೆ ತಲುಪಲಿದ್ದು ಸೋಲಾಪುರ ಮೂಲಕ ಮರುದಿನ ಬೆಳಗ್ಗೆ 5.10ಕ್ಕೆ ಸಿಎಸ್ಎಂಟಿ ಮುಂಬೈ ತಲುಪಲಿದೆ.
ಈ ಸಂದರ್ಭದಲ್ಲಿ ಕೊಪ್ಪಳದಲ್ಲಿಯೂ ಸಂಸದ ಸಂಗಣ್ಣ ಕರಡಿ ಸೇರಿ ಹಲವು ಬಿಜೆಪಿ ಮುಖಂಡರು ಸ್ವಾಗತಿಸಿ ಬೀಳ್ಕೊಟ್ಟರು. ನಿತ್ಯ ಸಂಚರಿಸುವ ರೈಲಿಗೆ ಪೂಜೆ ಸಲ್ಲಿಸಿ ರೈಲು ಚಾಲಕರಿಗೆ ಗೌರವಿಸಲಾಯಿತು. ಭಾರತ ಮಾತಾ ಕೀ ಜೈ ಎಂಬ ಘೋಷಣೆಯೊಂದಿಗೆ ರೈಲಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿ ಎಂ ಭೂಸನೂರಮಠ, ಆರ್ ಬಿ ಪಾನಗಂಟಿ, ಮಂಜುಳಾ ಕರಡಿ, ಸುನೀಲ ಹೆಸರೂರು ಸೇರಿ ಹಲವರು ಭಾಗಿಯಾಗಿದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.