Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಇಟಿಯಲ್ಲಿ ಮಹಿಳೆಯರೇ ಮೇಲುಗೈ

ಸುದ್ದಿಮೂಲ ವಾರ್ತೆ

ಬೆಂಗಳೂರು, ಜೂ. 15: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ಮೇ ತಿಂಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ- ಸಿಇಟಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಬಾರಿಯೂ ಸಿಇಟಿಯಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ. ಸುಧಾಕರ್, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2,33,081 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಇಂಜಿನಿಯರಿಂಗ್ ಕೋರ್ಸಿಗೆ 2,03,381 ರ‍್ಯಾಂಕ್‌ ನೀಡಲಾಗಿದೆ. ಕೃಷಿ ವಿಜ್ಞಾನ ಕೋರ್ಸುಗಳಿಗೆ 1,64,187 ವಿದ್ಯಾರ್ಥಿಗಳು, ಪಶುಸಂಗೋಪನೆಗೆ 1,66,756 ವಿದ್ಯಾರ್ಥಿಗಳು, ಯೋಗ ಮತ್ತು ನ್ಯಾಚುರೋಪತಿಗೆ 2,06,191 ವಿದ್ಯಾರ್ಥಿಗಳು ಬಿ. ಫಾರ್ಮ ಕೋರ್ಸಿಗೆ ಮತ್ತು ಫಾರ್ಮ-ಡಿ ಕೋರ್ಸಿಗೆ 2,06,340 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ. ಬಿ.ಎಸ್.ಸಿ (ನರ್ಸಿಂಗ್) ಕೋರ್ಸಿಗೂ ಸಹ ಸಿಇಟಿ ನಡೆಸಲಾಗಿದ್ದು, ಒಟ್ಟು 1,66,808 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ.

ಈ ಸಾಲಿನಲ್ಲಿ ಐಎನ್‌ಸಿ ಕ್ರಮದ ಅನುಸಾರ ಮತ್ತು ಸರ್ಕಾರದ ಆದೇಶನ್ವಯ ಬಿಎಸ್ ಸಿ ನರ್ಸಿಂಗ್ ಕೋರ್ಸಿಗೂ ಸಿಇಟಿ ನಡೆಸಲಾಗಿದ್ದು, 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.

ಒಟ್ಟು 2,61,610 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ 2,44,345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರಾಗಿದ್ದರು. ಕಳೆದ ತಿಂಗಳು ಮೇ 20 ಮತ್ತು 21ರಂದು ರಾಜ್ಯದ ಒಟ್ಟು592 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲಾಗಿತ್ತು ಎಂದು ಸಚಿವರು ತಿಳಿಸಿದರು.

ಇಂಜಿನಿಯರಿಂಗ್ ವಿಭಾಗದ ಟಾಪರ್ಸ್:

ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪರೀಕ್ಷೆಯ ಟಾಪ್ 10 ನಲ್ಲಿ ಬೆಂಗಳೂರಿನ 8 ವಿದ್ಯಾರ್ಥಿಗಳು ರ‍್ಯಾಂಕ್‌ ಗಳಿಸಿದ್ದಾರೆ. ಬೆಂಗಳೂರಿನ ಮಲ್ಲಸಂದ್ರದ ಶ್ರೀ ಕುಮಾರನ್ಸ್‌ ಕಾಲೇಜಿನ ವಿಘ್ನೇಶ್‌ ನಟರಾಜ್‌ ಕುಮಾರ್‌ ಪ್ರಥಮ ರ‍್ಯಾಂಕ್‌ ಪಡೆದರೆ ಬೆಂಗಳೂರಿನ ಆರ್‌ವಿ ಕಾಲೇಜಿನ ಅರುಣ್‌ ಕೃಷ್ಣಮೂರ್ತಿ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ. ಇನ್ನು ಧಾರವಾಡ ಹಾಗೂ ಬಳ್ಳಾರಿಗೆ ಒಂದೊಂದು ರ‍್ಯಾಂಕ್‌ ಬಂದಿದೆ.

ಹಾಗೆಯೇ ಯೋಗ ಮತ್ತು ನ್ಯಾಚುರೋಪತಿ ಕೋರ್ಸನಲ್ಲಿ ಬೆಂಗಳೂರಿಗೆ 5 ರ‍್ಯಾಂಕ್‌ ಬಂದಿದ್ದು, ಮಂಗಳೂರಿಗೆ 2, ಹುಬ್ಬಳ್ಳಿ 1, ರಾಜಸ್ಥಾನ -1 , ದಾವಣಗೆರೆಯ ಓರ್ವ ವಿದ್ಯಾರ್ಥಿ ರ‍್ಯಾಂಕ್‌ ಪಡೆದಿದ್ದಾರೆ.

ಇಂಜಿನಿಯರಿಂಗ್ ಟಾಪರ್ಸ್:

ವಿಜ್ಞೇಶ್ ನಟರಾಜ್ ಕುಮಾರ್ (ಉತ್ತರಹಳ್ಳಿ ಕುಮಾರನ್ಸ್ ಕಾಲೇಜ್) - ಶೇ.97.889%

ಅರ್ಜುನ್ ಕೃಷ್ಣಸ್ವಾಮಿ (ಆರ್.ವಿ ಪಿ.ಯು. ಕಾಲೇಜ್ ಜಯನಗರ)- ಶೇ.- 97.5%

ಸಮೃದ್ಧ ಶೆಟ್ಟಿ (ವಿದ್ಯಾನಿಕೇತನ್ ಸೈನ್ಸ್ ಕಾಲೇಜ್ ಹುಬ್ಬಳ್ಳಿ) ಶೇ. 97.167%

ಯೋಗ ಮತ್ತು ನ್ಯಾಚುರೋಪತಿ ಟಾಪರ್ಸ್:

ಪ್ರತೀಕ್ಷಾ ಆರ್ - (ಶ್ರೀ ಕುಮಾರನ್ಸ್ ಚಿಲ್ಡ್ರನ್ ಹೋಮ್ ಕಂಪೋಸಿಟ್ ಪ್ರೀ ಯೂನಿವರ್ಸಿಟಿ ಕಾಲೇಜು ಬೆಂಗಳೂರು)- ಶೇ.98.611%

ಬೈರೇಶ್ ಎಸ್ ಎಚ್ (ಎಕ್ಸ್ಪರ್ಟ್ ಪ್ರೀ ಯೂನಿವರ್ಸಿಟಿ ಕಾಲೇಜ್ ಮಂಗಳೂರು) ಶೇ. 98.167%

ಶ್ರೀಜನ್ ಎಂ ಎಚ್ - (ಬೇಸ್ ಪಿಯು ಕಾಲೇಜ್ ಹುಬ್ಬಳ್ಳಿ) ಶೇ. 97.889%

ಬಿ.ಎಸ್.ಸಿ ಅಗ್ರಿಕಲ್ಚರ್ ಟಾಪರ್ಸ್:

ಬೈರೇಶ್ ಎಸ್ ಎಚ್- (ಎಕ್ಸ್ ಪರ್ಟ್ ಪ್ರೀ ಯೂನಿವರ್ಸಿಟಿ ಕಾಲೇಜ್ ಮಂಗಳೂರು) ಶೇ. 96.75%

ಅನುರಾಗ ರಂಜನ್ (ಪರಮಾಣ ಪಿಯು ಕಾಲೇಜ್ ರಾಯಚೂರು) ಶೇ.95.417 %

ಕಾರ್ತಿಕ್ ಮನೋಹರ್ - ಸಿಬಿಎಸ್ಸಿ ಔಟ್ ಸೈಡ್ ಕರ್ನಾಟಕ (ರಾಜಸ್ಥಾನ ಜಹಲ್ವಾರ್) ಶೇ.95.25%

ಪಶು ಸಂಗೋಪನಾ ವಿಜ್ಞಾನದ ಟಾಪರ್ಸ್:

ಮಾಳವಿಕಾ ಕಪೂರ್ - (ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 97.222%

ಪ್ರತೀಕ್ಷಾ ಆರ್ - (ಶ್ರೀ ಕುಮರನ್ ಚಿಲ್ಡ್ರನ್ ಹೋಮ್ ಕಂಪೋಸೈಟ್ ಪಿಯು ಕಾಲೇಜ್ ಬೆಂಗಳೂರು) ಶೇ. 97.222%

ಚಂದನ್ ಗೌಡ ಸಿ ಎನ್ - (ಮಹೇಶ್ ಪಿಯು‌ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 96.667%

ಬಿ ಫಾರ್ಮಾ ಹಾಗೂ ಡಿ ಫಾರ್ಮಾ ಟಾಪರ್ಸ್:

ಪ್ರತೀಕ್ಷಾ ಆರ್- (ಶ್ರೀ ಕುಮಾರನ್ ಚಿಲ್ಡ್ರನ್ ಹೋಮ್ ಕಂಪೋಸೈಟ್ ಪಿಯು ಕಾಲೇಜ್ ಬೆಂಗಳೂರು) ಶೇ.97.222%

ಮಾಳವಿಕಾ ಕಪೂರ್- (ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 97.222%

ಮಾಧವ ಸೂರ್ಯ ತಡೇಪಲ್ಲು (ನಾರಾಯಣ ಇ ಟೆಕ್ನೋ ಸ್ಕೂಲ್ ಮಾರತಹಳ್ಳಿ) ಶೇ. 96.667 %

ಬಿಎಸ್ಸಿ ನರ್ಸಿಂಗ್ ಟಾಪರ್ಸ್:

ಮಾಳವಿಕಾ ಕಪೂರ್ (ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ, ಬೆಂಗಳೂರು) ಶೇ. 97.222%

ಪ್ರತಿಕ್ಷ ಆರ್ (ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂ ಪಿಯು ಕಾಲೇಜ್ ಬೆಂಗಳೂರು) ಶೇ. 97.222%

ಚಂದನ್ ಗೌಡ ಸಿಎನ್ ಮಹೇಶ್ (ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 96.667%

ಫಲಿತಾಂಶದ ಅಧಿಕೃತ ವೆಬ್‌ಸೈಟ್‌ : ಸಿಇಟಿ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಾದ http://kea.kar.nic.in/ ಅಥವಾ htt

ps://cetonline.karnataka.gov.in/kea/ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ.

 

 

 

 

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ