Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

68 ವಯಸಲ್ಲೂ ಯುವಕರಂತೆ ಕೆಲಸ ಮಾಡುವ ಜೊತೆಗೆ ಯಲ್ಲಪ್ಪ

ಸುದ್ದಿಮೂಲವಾರ್ತೆ

ಕೊಪ್ಪಳ ಜೂ 03 :ಇಳಿವಯಸಲ್ಲೂ ಯುವಕರಂತೆ ಕೆಲಸ ನರೇಗಾ ಕೆಲಸ ಮಾಡುವ ಈ ವೃದ್ಧ ಕೂಲಿಕಾರನ ಸಾಹಸ ನೋಡಿದ್ರೆ ನೀವೇ ಅಚ್ಚರಿ ಆಗ್ತಿರಾ...



ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಲಿಕಾರರಾದ ಯಲಪ್ಪ ಹೂಗಾರ ಅವರಿಗೆ ವಯಸ್ಸು 68 ಆದರೆ, ಅವರ ಕೆಲಸ, ಕ್ರಿಯಾಶೀಲತೆ ಯುವಕರಂತೆ ಇದೆ. 68 ವಯಸ್ಸು, 7 ಮಕ್ಕಳು ಕಂಡಿರುವ ಯಲ್ಲಪ್ಪ ಹೂಗಾರ್ ಅವರಿಗೆ ಯಲ್ಲಪ್ಪ ಅವರೇ ಸರಿಸಾಠಿಯಾಗಿದ್ದಾರೆ. ನರೇಗಾ ಕೂಲಿಕಾರರಿಗೆ ಬೇಸರವಾದಾಗ ಯಲ್ಲಪ್ಪ ಅವರು ಹಂತಿಪದ ಹಾಡಿ ಮನರಂಜಿಸುತ್ತಾರೆ. ಇವರು ಗುದ್ದಲಿ, ಸಲಾಕೆ ಹಿಡಿದು ಕೆಲಸ ಮಾಡುತ್ತಾರೆ. ಕೆಲಸಕ್ಕೂ ಸೈ, ಹಾಡಿಗೂ ಸೈ.. ಎನ್ನುತ್ತಾರೆ.

ಇದಷ್ಟೆ ಅಲ್ಲ 68 ವಯಸ್ಸಾದರೂ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ನಿಮಿಷಕ್ಕೂ ಹೆಚ್ಚು ಕಾಲ ನಿಂತು ಯುವಕರನ್ನೇ ನಾಚಿಸುತ್ತಾರೆ ಯಲ್ಲಪ್ಪ. ನರೇಗಾ ಕಾಮಗಾರಿ ಸ್ಥಳದಲ್ಲಿ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿದ ಸಾಹಸ ನೋಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರವಿಶಾಸ್ತ್ರಿ ಹಾಗೂ ಎಲ್ಲ ಕೂಲಿಕಾರರು ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಹೇರೂರು ಗ್ರಾಮದಲ್ಲಿ ನಿತ್ಯ ಕೂಲಿ ಕೆಲಸ ಮಾಡುತ್ತಾ, ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸಕ್ಕೆ ಬಂದು ಎಲ್ಲರಂತೆ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡು ತನ್ನ ವಯಸ್ಸಿಗೆ ಸವಾಲು ಎಸೆದಿದ್ದಾರೆ ಯಲ್ಲಪ್ಪ ಹೂಗಾರ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ