Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಝೆಡ್-ಕೆಟಗರಿ ಭದ್ರತೆ ಇನ್ನೂ ಸ್ವೀಕರಿಸಿದ ಯಡಿಯೂರಪ್ಪ

ಸುದ್ದಿಮೂಲ ವಾರ್ತೆ

ಬೆಂಗಳೂರು, ನ.2: ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯ ವಾರದ ಹಿಂದೆ ನೀಡಿದ್ದ ಝೆಡ್-ಕೆಟಗರಿ ಭದ್ರತೆಯನ್ನು ಯಡಿಯೂರಪ್ಪ ಇನ್ನೂ ಸ್ವೀಕರಿಸಿಲ್ಲ.

ಯಡಿಯೂರಪ್ಪನವರು ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ. ಅವರಿಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ಹಾಗಿರುವಾಗ ಕೇಂದ್ರ ಸರ್ಕಾರ ಅವರಿಗೆ ಈ ಮಟ್ಟದ ಭದ್ರತೆಯನ್ನು ಏಕೆ ನೀಡುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದ್ದು, ಇದನ್ನು ಸ್ವೀಕರಿಸಬೇಕೆ, ಬೇಡವೆ ಎಂಬ ಗೊಂದಲಕ್ಕೆ ಯಡಿಯೂರಪ್ಪ ಸಿಲುಕಿದ್ದಾರೆ.

ಎಲ್ಲಾ ಸಮಯದಲ್ಲೂ ನಾಯಕನ ಚಲನವಲನಗಳ ಮೇಲೆ ನಿಗಾ ಇರಿಸಿಕೊಳ್ಳಲು ಝಡ್ ಮಟ್ಟದ ಭದ್ರತೆ ನೀಡಲಾಗುತ್ತದೆ. ಪ್ರಬಲ ಲಿಂಗಾಯತ ವಲಯಗಳಲ್ಲಿನ ಅನೇಕರು ಕೇಂದ್ರ ಗೃಹ ಸಚಿವಾಲಯವು ಮಾಜಿ ಸಿಎಂಗೆ ಅಂತಹ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಮಾಡುತ್ತಿರುವ ಬೆದರಿಕೆಯ ಗ್ರಹಿಕೆ ಏನೆಂದು ಯೋಚಿಸುತ್ತಿದ್ದಾರೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಅವರ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಕೆಲವು ಸಿಆರ್‍ಪಿಎಫ್ ಅಧಿಕಾರಿಗಳು ಮೊನ್ನೆ ಮಂಗಳವಾರ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಯಡಿಯೂರಪ್ಪ ಅವರ ಆಪ್ತ ವಲಯದ ಮೂಲಗಳು, ಝಡ್ ಮಟ್ಟದ ಭದ್ರತೆಯನ್ನು ಒಪ್ಪಿಕೊಳ್ಳುವುದು-ಬಿಡುವುದು ಅವರಿಗೆ ಬಿಟ್ಟಿದ್ದು ಎನ್ನುತ್ತವೆ.

ಗೃಹ ಸಚಿವಾಲಯದ ಭದ್ರತೆ ವಿಷಯ ನಗೆಪಾಟಲಿಗೀಡಾಗಬಾರದು. ಯಡಿಯೂರಪ್ಪ ರಸ್ತೆ ಬದಿಯಲ್ಲಿ ನಿಂತು ಯಾವುದೇ ಬೆದರಿಕೆಯಿಲ್ಲದೇ ಪಾನಿಪೂರಿ ತಿನ್ನುವ ರಾಜಕಾರಣಿ. ಅವರು ಎಲ್ಲರಿಗೂ ಒಪ್ಪಿಗೆಯಾಗುವ ಬಹು ಪ್ರೀತಿಯ ನಾಯಕ. ಭದ್ರತೆ ಅವರಿಗೆ ಏಕೆ ಬೇಕು, ಅವರಿಗೆ ಯಾವುದಾದರೂ ಬೆದರಿಕೆಗಳು ಅಥವಾ ಎಚ್ಚರಿಕೆ ಪತ್ರಗಳು ಬಂದಿವೆಯೇ ಏನೂ ಇಲ್ಲವಲ್ಲ ಎನ್ನುತ್ತಾರೆ ಅವರ ಆಪ್ತ ವಲಯಗಳು.

ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಯ ನಂತರ, ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಅದು ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ಕಾರಣವಾಗಿರಬಹುದು. ಕೆಲವು ಬೆದರಿಕೆ ಗ್ರಹಿಕೆ ಅಥವಾ ಕೆಲವು ಗುಪ್ತಚರ ಮಾಹಿತಿಗಳು ಇದ್ದಾಗ, ಕೇಂದ್ರ ಗೃಹ ಸಚಿವಾಲಯವು ಅಂತಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

 

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ