Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.

ಕೃಷಿ ಬಳಕೆಗೆ ಡ್ರೋಣ್ ,ಔಷಧ ಸಿಂಪಡಣೆ

ಸುದ್ದಿಮೂಲವಾರ್ತೆ

ಕೊಪ್ಪಳ,ಆ.31: ಇತ್ತೀಚಿಗೆ ಕೃಷಿ ಕಾರ್ಯದಲ್ಲಿ ಕಾರ್ಮಿಕರ ಸಮಸ್ಯೆ ಏದುರಾಗಿದೆ. ಕಾರ್ಮಿಕರಿಂದ ಔಷಧಿಯನ್ನು ಸಿಂಪಡಿಸಲು ಸಾಕಷ್ಟು ಸಮಯ ವ್ಯಯಿಸಬೇಕು. ಆದರೆ ಈಗ ಔಷಧಿ ಸಿಂಪಡಣೆಗೆ ಬಂದಿದೆ. ಡ್ರೋಣ್ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗಾಗಿ ಇಡೀ ಹೊಲಕ್ಕೆ ಔಷಧಿ ಸಿಂಪಡಿಸಿ ಬರುತ್ತೆ. ಕೊಪ್ಪಳ ತಾಲೂಕಿನಲ್ಲಿ ಇದೇ ಮೊದಲು ಬಾರಿಗೆ ಔಷಧಿ ಸಿಂಪಡಣೆ ಗೆ ಡ್ರೋಣ್ ಬಳಕೆಯಾಗಿದೆ.



ಹೀಗೆ ಬೆಳೆ ಎತ್ತರ ಮಟ್ಟದಿಂದ ಸ್ವಲ್ಪ ಎತ್ತರದಲ್ಲಿ ಹಾರಾಡುತ್ತಿರುವ ಡ್ರೋಣ್ ಸಾಮಾನ್ಯದ್ದೇನೆ ಅಲ್ಲ. ಈ ಡ್ರೋಣ್ ದಿಂದ ಈಗ ಹೊಲಗಳಲ್ಲಿಯ ಬೆಳೆಗೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ ಮುದೇಗೌಡ ಮಾಲಿಪಾಟೀಲರ 12 ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆಗೆ ಒಂದು ತಾಸಿನೊಳಗೆ ಸಿಂಪಡಣೆ ಮಾಡಿದೆ.ಸಮವಾಗಿ ಔಷಧಿ ಸಿಂಪಡಣೆ ಮಾಡುವ ಡ್ರೋಣ್ ಬಳಕೆ ಈಗ ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಹುಬ್ಬಳ್ಳಿ ಮೂಲದ ಮಲ್ಟಿಫೆಕ್ಸ್ ಕಂಪನಿಯವರ ಡ್ರೋಣ್ 16 ಲೀಟರ್ ಸಾಮಾರ್ಥ್ಯ ಹೊಂದಿದೆ. ಹದವಾಗಿ ಎಷ್ಟು ನೀರು ಹಾಗು ಔಷಧಿಯನ್ನು ಡ್ರೋಣಿನಲ್ಲಿರುವ ಟ್ಯಾಂಕಿಗೆ ತುಂಬಿಸಿ. ನಿಗಿದಿತ ಪ್ರದೇಶಕ್ಕೆ ರಿಮೋಟ್ ಕಂಟ್ರೋಲ್ ಮೂಲಕ ಡ್ರೋಣ್ ಚಾಲನೆ ಮಾಡಿ ಔಷಧಿ ಸಿಂಪಡಿಸಲಾಗಿದೆ.

ಪ್ರತಿ ಎಕರೆಗೆ 650 ರೂಪಾಯಿ ಬಾಡಿಗೆಯನ್ನು ಡ್ರೋಣ್ ಮಾಲೀಕರು ಚಾರ್ಜ ನಿಗಿದಿ ಮಾಡಿದ್ದಾರೆ. ಒಮ್ಮೆ ಟ್ಯಾಂಕಿನಲ್ಲಿ ತುಂಬಿಸಿದ ಔಷಧಿಯು 1.30 ಎಕರೆಗೆ ಬಳಕೆಯಾಗುತ್ತಿದೆ. ಅಲ್ಲದೆ ಪ್ರತಿ ಎಕರೆಗೆ 5-6 ನಿಮಿಷ ಸಮಯ ತೆಗೆದುಕೊಳ್ಳುತ್ತಿದೆ.

ಕೃಷಿಯಲ್ಲಿ ಹೊಸ ಹೊಸ ಅವಿಷ್ಕಾರಗಳ ಬರುತ್ತಿದ್ದು ಅದರಲ್ಲಿ ಈಗ ಡ್ರೋಣ್ ಬಳಿಕೆಯು ರೈತರಲ್ಲಿ ಭರವಸೆ ಮೂಡಿಸಿದೆ.

ಈಗ ಖಾಸಗಿ ಕಂಪನಿಗಳು ಡ್ರೋಣ ಬಳಕೆಯಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಆದರೆ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರ. ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಹಾಗು ರಾಯಚೂರು ಕೃಷಿ ವಿವಿಯಲ್ಲಿರುವ ಡ್ರೋಣಗಳನ್ನು ರೈತರ ಬಳಕೆಗೆ ನೀಡಿದರೆ ದುಬಾರಿಯಾಗುತ್ತಿರುವ ದರವು ಕಡಿಮೆಯಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತ ಮದೇಗೌಡ ಮಾಲಿಪಾಟೀಲ ಹೇಳಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ