Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.

ಹೇರ್‌ಲೈನ್ ಇಂಟರ್ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಭಾರತದ ಮೊದಲ LICE ಕ್ಲಿನಿಕ್ ಅನ್ನು ಪ್ರಾರಂಭಿಸಿದೆ

ಬೆಂಗಳೂರು, ಕರ್ನಾಟಕ ಆಗಸ್ಟ್ 4, 2023 –ಹೆಲ್ತ್ ಕೇರ್ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್, ಹೆಡ್ ಲೈಸ್ (ಹೇನು) ಸೋಂಕನ್ನು ಎದುರಿಸಲು ಭಾರತದಲ್ಲಿ ಮೊಟ್ಟಮೊದಲ LICE ಕ್ಲಿನಿಕ್ ಅನ್ನು ಆರಂಭಿಸಿದೆ.

ಹೇನು, ಅಥವಾ ಪೆಡಿಕ್ಯುಲೋಸಿಸ್ ಕ್ಯಾಪಿಟಿಸ್, ಶಾಲೆಗಳು ಮತ್ತು ಸಾಮಾಜಿಕ ವಾತಾವರಣಗಳ ನಿಕಟ ಸಂಪರ್ಕದಿಂದ ಪೋಷಕರು ಮತ್ತು ಮಕ್ಕಳಲ್ಲಿ ಬಹು ಬೇಗ ಕಾಣಿಸಿಕೊಳ್ಳುತ್ತದೆ. ಇದರಿಂದ ನೆತ್ತಿಯಲ್ಲಿ ತುರಿಕೆ ಉಂಟಾಗಬಹುದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಹೋದಲ್ಲಿ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು, ಇದು ಪೀಡಿತ ವ್ಯಕ್ತಿಗಳು ಮತ್ತು ಪೋಷಕರಿಗೆ ಸಮಾನವಾಗಿ ತೊಂದರೆ ಉಂಟುಮಾಡುತ್ತದೆ.

LICE ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಾನಿ ಆನಂದ್, “ಸಾಂಪ್ರದಾಯಿಕವಾಗಿ, ಹೇನುಗಳ ನಿರ್ವಹಣೆಯು ಟಾಪಿಕಲ್ ಮತ್ತು ಓರಲ್ ಪೆಡಿಕ್ಯುಲಿಸೈಡ್ ಏಜೆಂಟ್‌ಗಳ ಮುಖಾಂತರ ಇಲ್ಲವೇ ಕೆಲವು ಶಾಂಪೂಗಳ ಮೂಲಕ ಸಾಧ್ಯವಾಗುತ್ತದೆ. ನಾವು ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್‌ನಲ್ಲಿ ರಾಸಾಯನಿಕ ಮುಕ್ತ ಎಲೆಕ್ಟ್ರಾನಿಕ್ ಸಾಧನವನ್ನು ಪರಿಚಯಿಸುವುದರೊಂದಿಗೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಇದು ಕೇವಲ 2 ಸೆಷನ್‌ಗಳಲ್ಲಿ ತಲೆಯಲ್ಲಿರುವ ಹೇನುಗಳನ್ನು ತೊಡೆದುಹಾಕುವ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವನ್ನು ಅನುಸರಿಸುತ್ತದೆ” ಎಂದರು.

ಬೆಂಗಳೂರಿನ ಕೋರಮಂಗಲದಲ್ಲಿರುವ ಚಿಕಿತ್ಸಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕರಾದ ಗೌರವಾನ್ವಿತ ಎನ್ ಎ ಹ್ಯಾರಿಸ್ ಉದ್ಘಾಟಿಸಿ, ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ LICE ಕ್ಲಿನಿಕ್ ಅನ್ನು ಪ್ರಾರಂಭಿಸುವ ಮುಂದಾಳತ್ವವನ್ನು ಶ್ಲಾಘಿಸಿದರು. ಇದು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು. ಇದು ನಮ್ಮ ಸಮುದಾಯದ ಮೇಲೆ ಪರಿಣಾಮ ಬೀರುವ ಸಾಮಾನ್ಯ ಮತ್ತು ಆಗಾಗ್ಗೆ ಕಡೆಗಣಿಸಲ್ಪಡುವ ಸಮಸ್ಯೆಯನ್ನು ಪರಿಹರಿಸುತ್ತದೆ. ವಿಶೇಷವಾದ ಆರೈಕೆಯನ್ನು ನೀಡುವ ಅವರ ಅಚಲ ಬದ್ಧತೆಗಾಗಿ ನಾನು ಹೇರ್‌ಲೈನ್ ಇಂಟರ್‌ನ್ಯಾಶನಲ್ ಅನ್ನು ಶ್ಲಾಘಿಸುತ್ತೇನೆ ಮತ್ತು ಭಾರತದ ಮೊದಲ LICE ಕ್ಲಿನಿಕ್ ಅನ್ನು ಸ್ಥಾಪಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸುತ್ತೇನೆ" ಎಂದು ಅವರು ಹೇಳಿದರು.

ಹೊಸ ಕ್ರಾಂತಿಕಾರಿ ಚಿಕಿತ್ಸೆಯ ಕುರಿತು ವಿವರಿಸುತ್ತಾ, ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ ಡರ್ಮಟೊಸರ್ಜನ್ ಡಾ. ದಿನೇಶ್ ಜಿ ಗೌಡ ಮತ್ತು ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ಕಲಾ ವಿಮಲ್, "ಹೇರ್‌ಲೈನ್ ಇಂಟರ್‌ನ್ಯಾಶನಲ್‌ನಲ್ಲಿ, ಹೇನುಗಳ ವಿರುದ್ಧ ಕ್ರಾಂತಿಕಾರಿ ಚಿಕಿತ್ಸೆ ನೀಡಿ ಬದಲಾವಣೆಗಳನ್ನು ತರಲು ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿದ್ದೇವೆ. ಸುಧಾರಿತ ಹೀರಿಕೊಳ್ಳುವ ಈ ಸಾಧನವನ್ನು ಹೇನುಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವಂತೆ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಅನುಭವಿ ಚರ್ಮಶಾಸ್ತ್ರಜ್ಞರ ಮೇಲ್ವಿಚಾರಣೆಯಲ್ಲಿ ನಾವು ಕೇವಲ ಎರಡು ಸೆಷನ್ ಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸುವ ಖಚಿತತೆ ನೀಡುತ್ತೇವೆ” ಎಂದು ಹೇಳಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ